ಪಕ್ಷ ಬಿಟ್ಟವರು ಮೋದಿಗಾಗಿ ವಾಪಸ್ ಬನ್ನಿ: ಶೆಟ್ಟರ್, ಸವದಿಗೆ ಪರೋಕ್ಷ ಆಹ್ವಾನ ನೀಡಿದ ಶೋಭಾ ಕರಂದ್ಲಾಜೆ

By Govindaraj S  |  First Published Aug 19, 2023, 7:18 PM IST

ಯಾರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ ಅವರೆಲ್ಲರೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಲುವಾಗಿ ವಾಪಸ್ ಬರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಆ.19): ಯಾರೆಲ್ಲಾ ಪಕ್ಷ ಬಿಟ್ಟು ಹೋಗಿದ್ದಾರೆ ಅವರೆಲ್ಲರೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಸಲುವಾಗಿ ವಾಪಸ್ ಬರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರಿಗೂ ಇದು ಅನ್ವಯಿಸುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮೋದಿ ಸಲುವಾಗಿ, ದೇಶದ ಸಲುವಾಗಿ, ಮುಂದಿನ ಪೀಳಿಗೆ ಸಲುವಾಗಿ ಎಲ್ಲರೂ ವಾಪಸ್ ಬರಬೇಕಿದೆ. ವಿಶ್ವದಲ್ಲಿ ಶಾಂತಿ ನೆಲೆಸಲು ಎಲ್ಲರೂ ಸೇರಿ ಬಿಜೆಪಿ ಮತ್ತು ದೇಶವನ್ನು ಕಟ್ಟಬೇಕಿದೆ. ಅದಕ್ಕಾಗಿ ಯಾರೇ ಪಕ್ಷ ಬಿಟ್ಟು ಹೊಗಿದ್ದರೂ ಅವರು ಮರಳಿ ಬರಲು ಸ್ವಾಗತವಿದೆ ಎಂದರು.
 
ಅಧಿಕಾರ ಇಲ್ಲದಾಗ ಹೋದರು ಎನ್ನುವ ಕೆಟ್ಟ ಹೆಸರು: ಕೆಲವು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ ಎನ್ನುವ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಬೇರೆ ಬೇರೆ ಕಾರಣಕ್ಕೆ ನಾವು ಸೋತಿದ್ದೇವೆ. ಮತ್ತೊಮ್ಮೆ ಬಿಜೆಪಿಯನ್ನು ಗಟ್ಟಿಯಾಗಿ ಕಟ್ಟಬೇಕಿದೆ. ನಮ್ಮ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಅವರು ಪಕ್ಷ ಸೇರಿದ್ದರು. ಅವರು ಬಿಜೆಪಿಯಲ್ಲೇ ಮುಂದುವರಿಯುತ್ತಾರೆ ಎನ್ನುವ ವಿಶ್ವಾಸ ಇದೆ. ಅಧಿಕಾರ ಇದ್ದಾಗ ಬಂದರು, ಅಧಿಕಾರ ಇಲ್ಲದಾಗ ಹೋದರು ಎನ್ನುವ ಕೆಟ್ಟಹೆಸರನ್ನು ಇವರರೂ ತೆಗೆದುಕೊಳ್ಳುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದರು.ಅವರು ಬೇಸರ ಮಾಡಿಕೊಳ್ಳಲು ಯಾವುದೇ ಕಾರಣಗಳಿಲ್ಲ. ಈ ಕಾರಣಕ್ಕೆ ನರೇಂದ್ರ ಮೋದಿ ಅರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸಬೇಕಿದೆ. ದೇಶಕ್ಕೆ, ವಿಶ್ವಕ್ಕೆ ಮೋದಿ ಬೇಕಾಗಿದೆ. ಹಲವು ದೇಶ ಭಾರತದ ಕಡೆ ನೋಡುತ್ತಿದೆ. ಬೇರೆ ಯಾರು ಪಕ್ಷ ಬಿಟ್ಟಿದ್ದಾರೆ ಅವರನ್ನೂ ಸೇರಿಸಿಕೊಂಡು ಪಕ್ಷವನ್ನು ಗಟ್ಟಿಗೊಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸಾಗಿದೆ. ಮೋದಿಯಂತಹ ನಾಯಕ ಮತ್ತೊಮ್ಮೆ ಈ ದೇಶಕ್ಕೆ ಯಾವುದೇ ಐಎನ್‌ಡಿಐಎ ಇರಬಹುದು ಇನ್ನಾವುದೇ ಪಕ್ಷದಲ್ಲಿ ಸಿಗುವುದಿಲ್ಲ. ನಮ್ಮ ದೇಶದ ನಾಯಕನ್ನು ಪ್ರಪಂಚ ಮೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಆಯ್ಕೆ ಮಾಡಬೇಕಿದೆ ಎಂದರು.

Tap to resize

Latest Videos

undefined

ತಮಿಳುನಾಡಿಗೆ ನೀರು ಬಿಟ್ಟಿದ್ದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ಗರಂ

ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ: ಐಎನ್‌ಡಿಐಎ ನಲ್ಲಿ ಇರುವ ಕಾರಣಕ್ಕೆ ಒತ್ತಡದಲ್ಲಿ ತಮಿಳುನಾಡಿಗೆ ನೀರು ಬಿಟ್ಟರೆ ನಮ್ಮ ರಾಜ್ಯದ ರೈತರಷ್ಟೇ ಅಲ್ಲ. ಬೆಂಗಳೂರಿನ ಜನರಿಗೂ ಕುಡಿಯುವ ನೀರಿನ ತತ್ವಾರ ಎದುರಾಗಲಿದೆ ಎಂದು ರಾಜ್ಯ ಸಕಾರವನ್ನು ಎಚ್ಚರಿಸಿದರು.ಈ ವರ್ಷ ಕರ್ನಾಟಕದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಬಹಳಷ್ಟು ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಿದೆ. ರಾಜ್ಯ ಸರ್ಕಾರದಿಂದ ತಮಿಳು ನಾಡಿಗೆ ಈ ವಿಚಾರವನ್ನು ಮನವರಿಕೆ ಮಾಡುವ ಕೆಲಸ ಆಗಬೇಕು ಎಂದರು.ಈಗಾಗಲೇ ಬೆಂಗಳೂರಿಗೆ ಅಗತ್ಯ ಇರುವಷ್ಟು ನೀರು ಪೂರೈಸಲಾಗುತ್ತಿಲ್ಲ. ಮತ್ತೊಂದೆಡೆ ವಿದ್ಯುತ್ ಇಲ್ಲ. ಈ ಎಲ್ಲಾ ಕಾರಣಕ್ಕೆ ಮಂಡ್ಯ, ಮೈಸೂರು ಭಾಗದ ಜನರಿಗೂ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸ್ಥಿತಿಯನ್ನು ಸರ್ಕಾರವೇ ನಿರ್ಮಾಣ ಮಾಡುತ್ತಿದೆ ಎಂದು ಆರೋಪಿಸಿದರು. ಸರ್ಕಾರ ಜನರ ದೃಷ್ಠಿಯಿಂದ ಯೋಚಿಸುತ್ತಿಲ್ಲ. ಅವರೊಳಗಿನ ಗೊಂದಲದ ಕಾರಣಕ್ಕೆ ರಾಜ್ಯ ಜನರ ಹಿತದೃಷ್ಠಿ ಬಲಿಕೊಡುವ ಕೆಲಸ ನಮ್ಮ ಜಲಾಶಯಗಳಲ್ಲಿ ನೀರಿಲ್ಲ ಎನ್ನುವುದನ್ನು ಗಟ್ಟಿಧ್ವನಿಯಲ್ಲಿ ಮನವರಿಕೆ ಮಾಡಬೇಕಿತ್ತು. ಅದು ಆಗುತ್ತಿಲ್ಲ ಎಂದರು.

ಶ್ವೇತಪತ್ರವನ್ನು ಜನರ ಮುಂದೆ ಇಡಬೇಕು: ವಿದ್ಯುತ್ ನಿರ್ವಹಣೆಯಲ್ಲೂ ಸರ್ಕಾರ ವಿಫಲವಾಗಿದೆ. ಬರಗಾಲ ಬಂದಿರುವುದು ಇದೇ ಮೊದಲಲ್ಲ. ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಬರಗಾಲ ಬಂದಿತ್ತು. ಆಗಲೂ ನಾವು ವಿದ್ಯುತ್ ಸಮಸ್ಯೆಯನ್ನು ನಿಭಾಯಿಸಿದ್ದೇವೆ. ಇಂದಿನಷ್ಟು ಬೇರೆ ಬೇರೆ ವಿದ್ಯುತ್ ಮೂಲಗಳು ಇರಲಿಲ್ಲ. ಕೇವಲ ಬಳ್ಳಾರಿ ಮತ್ತು ರಾಯಚೂರಿನ ಉಷ್ಣ ವಿದ್ಯುತ್ ಸ್ಥಾವರಗಳು ಮತ್ತು ಜಲ ವಿದ್ಯುತ್ ಮೇಲೆ ಅವಲಂಭಿತವಾಗಿದ್ದೆವು. ಅಂತಹ ಸಂದರ್ಭದಲ್ಲೂ ನಾವು ಗುಜರಾತ್, ಛತ್ತೀಸ್‌ಗಡಗಳಿಂದ ವಿದ್ಯುತ್ ತಂದಿದ್ದೆವು. ಗ್ರಿಡ್ ಕೊರತೆ ಇದ್ದರೂ ಅದನ್ನೂ ನಾವು ನೀಗಿಸಿದ್ದೇವೆ. ಈಗ ಸೋಲಾರ್, ವಿಂಡ್ ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಇಷ್ಟೆಲ್ಲಾ ಇದ್ದರೂ ಪವರ್ ಕಟ್ ಮಾಡಲಾಗುತ್ತಿದೆ. ಸರಿಯಾಗಿ ಏನಾಗುತ್ತಿದೆ ಎನ್ನುವ ಮಾಹಿತಿ ಕೊಡುವ ಸ್ಥಿತಿಗೆ ಸರ್ಕಾರ ತಲುಪಿದೆ ಎಂದು ದೂರಿದರು.ಮುಂದಿನ ಮೇ ವರೆಗೆ ಹೇಗೆ ವಿದ್ಯುತ್ ನಿರ್ವಹಣೆ ಮಾಡುತ್ತೀರಿ. ಎಷ್ಟು ಉತ್ಪಾದನೆ ಇದೆ. ಎಷ್ಟು ಹೆಚ್ಚುವರಿ ಬೇಕಾಗಬಹುದು, ಕೇಂದ್ರದ ಗ್ರಿಡ್‌ನಿಂದ ಎಷ್ಟು ಪೂರೈಕೆಯಾಗುತ್ತಿದೆ ಎಲ್ಲವನ್ನೂ ಒಳಗೊಂಡ ಶ್ವೇತಪತ್ರವನ್ನು ಜನರ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.

ಕಮಿಷನ್‌ ಆರೋಪ ಮಾಡಿದ ಗುತ್ತಿಗೆದಾರರಿಗೆ ಸರ್ಕಾರದಿಂದ ಬೆದರಿಕೆ: ಪ್ರಲ್ಹಾದ್‌ ಜೋಶಿ

ಮಠ ಮಂದಿರಗಳ ಫೈಲ್‌ಗಳನ್ನು ತಡೆ ಹಿಡಿಯುವ ಕೆಲಸ: ಹಿಂದೂ ದೇವಸ್ಥಾನಗಳು, ಮಠಮಂದಿರಗಳಿಗೆ ಸಂಬಂಧಿಸಿದ ಫೈಲ್‌ಗಳು ಸರ್ಕಾರಕ್ಕೆ ಹೋದರೆ ಹಿಂದಕ್ಕೆ ಬರುತ್ತಿದೆ. ಮಠ ಮಾನ್ಯಗಳು ಒಳ್ಳೆ ಕೆಲಸಗಳಲ್ಲಿ ತೊಡಗಿಸಿಕೊಂಡಿವೆ. ಅವುಗಳಿಗೆ ಸಹಾಯ ಮಾಡುವುದು ಸರ್ಕಾರದ ಕರ್ತವ್ಯ ಎಂದರು. ಆದರೆ ಆರ್ಥಿಕ ಇಲಾಖೆಯಲ್ಲಿರುವ ಅಧಿಕಾರಿಗಳು ಹಿಂದೂಗಳು, ಮಠ ಮಂದಿರಗಳ ಫೈಲ್‌ಗಳನ್ನು ತಡೆ ಹಿಡಿಯುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕುಮ್ಮಕ್ಕು ಕೊಡುತ್ತಿರುವವರು ಯಾರು? ಮುಖ್ಯಮಂತ್ರಿಗಳೇ ನಿರ್ದೇಶನ ನೀಡಿದ್ದಾರ ಎನ್ನುವ ಗೊಂದಲಗಳು ಕಾಡುತ್ತಿದೆ. ಇದಕ್ಕೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

click me!