ಮೋದಿ ಬಗ್ಗೆ ಮಾತನಾಡುವಾಗ ನಾಲಿಗೆ ಹದ್ದುಬಸ್ತಿನಲ್ಲಿರಲಿ: ಸಿದ್ದುಗೆ ಪ್ರಹ್ಲಾದ ಜೋಶಿ ಎಚ್ಚರಿಕೆ

By Kannadaprabha News  |  First Published Oct 18, 2021, 11:35 AM IST

*  ಪಾಕಿಸ್ತಾನ ಬಾಲ ಮುಚ್ಚಿಕೊಂಡು ಕುಳಿತುಕೊಳ್ಳುವಂತೆ ಮಾಡಿದ್ದು ಪ್ರಧಾನಿ ಮೋದಿ
*  ಬಿಜೆಪಿ ಅಭಿವೃದ್ಧಿ ಕಾರ್ಯಗಳಿಂದಾಗಿ ಕೊಚ್ಚಿ ಹೋಗುತ್ತಿದೆ ಕಾಂಗ್ರೆಸ್‌ 
*  ಐಸಿಯುನಲ್ಲಿರುವ ಕಾಂಗ್ರೆಸ್‌ಗೆ ಈಗ ಅಧೋಗತಿ 
 


ಹಾನಗಲ್‌(ಅ.18): ಸಿದ್ದರಾಮಯ್ಯನವರೇ(Siddaramaiah), ನಮಗೂ ಏಕವಚನದಲ್ಲಿ ಬಯ್ಯುವ ಶಕ್ತಿ ಇದೆ. ನಮ್ಮ ಪಕ್ಷದಲ್ಲೂ ಬಹಳ ಜನ ಇದ್ದಾರೆ. ದೇಶದ ಪ್ರಧಾನಿ ಮೋದಿ(Narendra Modi) ಬಗ್ಗೆ ಏಕವಚನದಲ್ಲಿ ಮಾತನಾಡುವ ನಿಮಗೆ ನಾಚಿಕೆ ಇಲ್ಲವೇ? ಅವ​ರ ಬಗ್ಗೆ ನಾಲಿಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಮಾತನಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ(Pralhad Joshi) ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಉಪ ಚುನಾವಣೆಯ(Byelection) ಬಿಜೆಪಿ(BJP) ಪ್ರಚಾರದ(Campaign) ಸಭೆಯಲ್ಲಿ ಅಪಾರ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್‌(Congress) ಕಾಲದಲ್ಲಿ ದೇಶದಲ್ಲಿ(India) ಭಯೋತ್ಪಾದನೆ(Terrorism) ಚಟುವಟಿಕೆ ನಡೆಯುತ್ತಿದ್ದವು. ಆದರೀಗ ಪಾಕಿಸ್ತಾನ(Pakistan) ಬಾಲ ಮುಚ್ಚಿಕೊಂಡು ಕುಳಿತುಕೊಳ್ಳುವಂತೆ ಮಾಡಿದ್ದು ಪ್ರಧಾನಿ ಮೋದಿ. ಅಮೆರಿಕದಷ್ಟೇ(America) ಪ್ರಬಲವಾಗಿರುವ ಚೀನಾ(China) ಹಿಮ್ಮೆಟ್ಟಿಸಿದ್ದು ಮೋದಿ. ಅಚ್ಛೇ ದಿನ್‌ ಈ ದೇಶದ ಜನತೆಗೆ ಬರುತ್ತದೆ. ಕಾಂಗ್ರೆಸ್‌ಗೆ ಬರುವುದಿಲ್ಲ ಎಂದರು.

Tap to resize

Latest Videos

undefined

ಇಡೀ ದೇಶದಲ್ಲಿ ಕಾಂಗ್ರೆಸ್‌ ನೆಲಕಚ್ಚಿದೆ. ಕೇಂದ್ರದಲ್ಲಿ ವಿರೋಧ ಪಕ್ಷದ ಸ್ಥಾನವೂ ಇಲ್ಲದ ಸ್ಥಿತಿ ಕಾಂಗ್ರೆಸ್‌ನದ್ದು. ಇಂತಹ ವೈಫಲ್ಯಗಳ ನಡುವೆ ಬರೀ ಟೀಕೆ ಮಾಡಿಕೊಂಡು ಅಧಿಕಾರಕ್ಕಾಗಿ ಕಚ್ಚಾಡುವ ಕಾಂಗ್ರೆಲಿಗರು ಸಿಂಹಾವಲೋಕನ ಮಾಡಿಕೊಳ್ಳಬೇಕು. ದೇಶದ ಜನತೆ ಮೋದಿ ಅವರನ್ನು ಒಪ್ಪಿಕೊಂಡಿದ್ದಾರೆ. ನರೇಂದ್ರ ಮೋದಿ ಅವರ ಆಡಳಿತವನ್ನು ಇಡೀ ಜಗತ್ತು ಮೆಚ್ಚಿದೆ. ಕಾಂಗ್ರೆಸ್‌ ಇದನ್ನೆಲ್ಲ ಸಹಿಸಿಕೊಳ್ಳಲಾಗದೆ ಟೀಕೆಗಳ ಮೂಲಕ ಕಾಲ ಕಳೆಯುತ್ತಿದೆ ಎಂದರು.

'ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರುವವರೆಗೂ ಅಚ್ಚೇ ದಿನ ಬರಲ್ಲ '

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ(Nalin Kumar Kateel) ಮಾತನಾಡಿ, ಹಾವೇರಿ(Haveri) ಜಿಲ್ಲೆಗೆ ಬಿಜೆಪಿ ಪ್ರಧಾನ ಜವಾಬ್ದಾರಿ ಕೊಟ್ಟಿದೆ. ಮುಖ್ಯಮಂತ್ರಿ ಹುದ್ದೆಯನ್ನು ಜಿಲ್ಲೆಯವರಾದ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ವಹಿಸಿದೆ. ಈಗ ಜಿಲ್ಲೆಯ ಜನತೆಗೆ ಋುಣ ತೀರಿಸುವ ಸಂದರ್ಭ ಬಂದಿದೆ. ಈ ಚುನಾವಣೆಯಲ್ಲಿ(Election) ಬಿಜೆಪಿ ಅಭ್ಯರ್ಥಿ ಸಜ್ಜನರಿಗೆ ಮತ ಹಾಕಿ ಬಿಜೆಪಿ ಋುಣ ತೀರಿಸಿ ಎಂದು ಮನವಿ ಮಾಡಿದರು.

ಬಿಜೆಪಿ ಅಭಿವೃದ್ಧಿ ಕಾರ್ಯಗಳಿಂದಾಗಿ ಕಾಂಗ್ರೆಸ್‌ ಕೊಚ್ಚಿ ಹೋಗುತ್ತಿದೆ. ಕಾಂಗ್ರೆಸ್ಸಿಗರದು ಭಯೋತ್ಪಾದನೆ, ಭ್ರಷ್ಟಾಚಾರವನ್ನು(Corruption) ಜೀವಂತವಾಗಿಡುವ ಸರ್ಕಾರ(Government). ಬಿಜೆಪಿಗೆ ಅಭಿವೃದ್ಧಿಯೇ ಮಂತ್ರ ಎಂದು ಘೋಷಿಸಿ ಅದರಂತೆ ನಡೆದು ಈ ದೇಶದ ಜನತೆ ಎದುರು ಜನಾನುರಾಗಿಯಾಗಿದ್ದೇವೆ. ಶಿವರಾಜ ಸಜ್ಜನ ಅವರನ್ನು ಗೆಲ್ಲಿಸುವ ಮೂಲಕ ಸಿಎಂ ಬೊಮ್ಮಾಯಿ ಸರ್ಕಾರಕ್ಕೆ ಶಕ್ತಿಯಾಗಬೇಕು ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ(Jagadish Shettar) ಮಾತನಾಡಿ, ಇಂದಿನ ಪ್ರಚಾರ ಸಭೆ ಬಿಜೆಪಿ ಗೆಲುವಿನ ವಿಜಯೋತ್ಸವವಾಗಿದೆ. ಸಿ.ಎಂ. ಉದಾಸಿ(CM Udasi) ಅವರ ಗರಡಿಯಲ್ಲಿ ಪಳಗಿದ ಶಿವರಾಜ ಸಜ್ಜನ ಅವರು ಉದಾಸಿ ಅವರ ಕನಸನ್ನು ನನಸು ಮಾಡುವ ನಾಯಕರಾಗಿದ್ದಾರೆ. ಭಾರತವನ್ನು ಅಭಿವೃದ್ಧಿಯತ್ತ ವೇಗವಾಗಿ ಕೊಂಡ್ಯೊಯುತ್ತಿರುವ ನರೇಂದ್ರ ಮೋದಿ ಕೊರೋನಾದಂತಹ(Coronavirus) ಕಷ್ಟಕಾಲದಲ್ಲಿಯೂ ಭಾರತವನ್ನು ಆರ್ಥಿಕವಾಗಿ ಮುನ್ನಡೆಸಿದ್ದಾರೆ. ದೇಶದ 138 ಕೋಟಿ ಜನರಿಗೆ ಉಚಿತವಾಗಿ ಲಸಿಕೆ(Vaccine) ನೀಡುತ್ತಿದ್ದಾರೆ. ಐಸಿಯುನಲ್ಲಿರುವ ಕಾಂಗ್ರೆಸ್‌ಗೆ ಈಗ ಅಧೋಗತಿ ಬಂದಿದೆ. ಕಾಂಗ್ರೆಸ್‌ ಮುಳುಗುವ ಹಡಗು. ಎಲ್ಲ ಕಡೆ ಡಿಪಾಜಿಟ್‌ ಕಳೆದುಕೊಳ್ಳುತ್ತಿದೆ. ಹೀಗಾಗಿ, ಉದಾಸಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಶಿವರಾಜ ಸಜ್ಜನರಿಗೆ ಮತಹಾಕಿ ಎಂದು ಮನವಿ ಮಾಡಿದರು.
 

click me!