ಜಮೀರ್‌ ವಿರುದ್ಧವೇ ಸ್ಪರ್ಧೆಗೆ ಸಿದ್ಧವಾದ ಮುಸ್ಲಿಂ ಮುಖಂಡ

Kannadaprabha News   | Asianet News
Published : Oct 18, 2021, 10:24 AM IST
ಜಮೀರ್‌ ವಿರುದ್ಧವೇ ಸ್ಪರ್ಧೆಗೆ ಸಿದ್ಧವಾದ ಮುಸ್ಲಿಂ ಮುಖಂಡ

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಮಾತನಾಡುತ್ತಿರುವ ಮಾಜಿ ಸಚಿವ ಜಮೀರ್‌ ಅಹಮದ್‌ ಅವರಿಗೆ ನಾಚಿಕೆಯಾಗಬೇಕು  ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ ಟೀಕೆ

 ಬೆಂಗಳೂರು (ಅ.18):  ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ವಿರುದ್ಧ ಮಾತನಾಡುತ್ತಿರುವ ಮಾಜಿ ಸಚಿವ ಜಮೀರ್‌ ಅಹಮದ್‌ (zameer Ahmed) ಅವರಿಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್‌ (JDS) ಪ್ರಧಾನ ಕಾರ್ಯದರ್ಶಿ ಜಫ್ರುಲ್ಲಾ ಖಾನ್‌ (zafrulla khan) ಟೀಕಿಸಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲು ಜೆಡಿಎಸ್‌ನಲ್ಲಿದ್ದು ಬೆಳೆದವರು ಜಮೀರ್‌. ಕುಮಾರಸ್ವಾಮಿ (Kumaraswamy) ಅವರನ್ನು ಅಣ್ಣ ಅಣ್ಣ ಎನ್ನುತ್ತಿದ್ದವರು ಈಗ ಕಾಂಗ್ರೆಸ್‌ ಸೇರಿ ಅವರ ವಿರುದ್ಧವೇ ಮಾತನಾಡುತ್ತಿದ್ದಾರೆ. ಅಂತಹವರಿಗೆ ನಾಚಿಕೆಯಾಗಬೇಕು. ಹಿಂದೆ ಜೆಡಿಎಸ್‌ನಿಂದ (JDS) ಗೆದ್ದು ಸಚಿವರಾಗಿ ಮೂರು ನಾಲ್ಕು ಖಾತೆ ತೆಗೆದುಕೊಂಡು ಅನುಭವಿಸಿ ಈಗ ಅವರ ವಿರುದ್ಧವೇ ಮಾತಾಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು (Devegowda), ಕುಮಾರಸ್ವಾಮಿ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರುವುದರಿಲ್ಲ. ಕಾಂಗ್ರೆಸ್‌ವರಿಗೆ (Congress) ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ವರುಣಾ ಮತ್ತು ಕನಕಪುರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ (Ticket) ನೀಡಲಿ ಎಂದು ಸವಾಲು ಹಾಕಿದರು. ಸಮಯ ಬಂದರೆ ಜಮೀರ್‌ ವಿರುದ್ದವೂ ಸ್ಪರ್ಧೆಗೆ ನಾನು ಸಿದ್ದ ಎಂದು ಹೇಳಿದರು.

ಕುಮಾರಸ್ವಾಮಿ ವಿರುದ್ಧ 'ಡೀಲ್' ಬಾಂಬ್ ಸಿಡಿಸಿದ ಜಮೀರ್ ಅಹಮ್ಮದ್

ಕರ್ನಾಟಕದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಒಬ್ಬರೇ ಅಲ್ಪಸಂಖ್ಯಾತರ ನಾಯಕರು ಎಂದು ಹೇಳಿರುವ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ಅವರಿಗೆ ನಾಚಿಕೆಯಾಗಬೇಕು, ಅವರಿಗೆ ಆ ರೀತಿ ಹೇಳಿಕೆ ನೀಡಲು ಅಧಿಕಾರ ಕೊಟ್ಟವರಾರ‍ಯರು ಎಂದು

ಸಿದ್ದರಾಮಯ್ಯ ಅವರು ಮಾತ್ರ ಅಲ್ಪಸಂಖ್ಯಾತ ನಾಯಕರು ಎನ್ನುವುದಾದರೆ ಡಿ.ಕೆ.ಶಿವಕುಮಾರ್‌ (DK Shivakumar), ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್‌ ಉಳಿದ ನಾಯಕರ ಕೊಡುಗೆ ಏನೂ ಇಲ್ವಾ? ಸಿದ್ದರಾಮಯ್ಯ ಅವರು ಮಾತ್ರವೇ ಅಲ್ಪಸಂಖ್ಯಾತರ ನಾಯಕ ಎಂದು ಹೇಳಲು ಅನ್ಸಾರಿ ಅವರಿಗೆ ಅಧಿಕಾರ ಯಾರು ಕೊಟ್ಟರು. ಕಾಂಗ್ರೆಸ್‌ನವರಿಗೆ ನಿಜವಾಗಲೂ ಮುಸ್ಲಿಮರ ಮೇಲೆ ಪ್ರೀತಿಯಿದ್ದಿದ್ದರೆ ಉಪಚುನಾವಣೆಯಲ್ಲಿ (By Election) ಅಲ್ಪಸಂಖ್ಯಾತರೇ ಹೆಚ್ಚಿರುವ ಕ್ಷೇತ್ರಗಳಿಗೆ ಯಾಕೆ ಮುಸ್ಲಿಂ (Muslim) ಅಭ್ಯರ್ಥಿಗಳಿಗೆ ಟಿಕೆಟ್‌ (ticket) ಕೊಟ್ಟಿಲ್ಲ. ಇದು ಇಸ್ಲಾಂ ಧರ್ಮಕ್ಕೆ ಮಾಡಿದ ಅಪಮಾನ. ಕಾಂಗ್ರೆಸ್‌ನವರು ಅಲ್ಪಸಂಖ್ಯಾತರನ್ನು ಮೂಲೆಗೆ ಕೂರಿಸಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಮಾಜಿ ಸಚಿವ ಜಮೀರ್‌ ಅಹಮದ್‌ ವಿರುದ್ಧವೂ ಕಿಡಿಕಾರಿದ ಅವರು,

ಎಲ್ಲದ್ದಕ್ಕೂ ನಾನು ಉತ್ತರ ಕೊಡೋಕೆ ರೆಡಿ ಇದ್ದೇನೆ. ನಾನು ಯಾವತ್ತು ಟಿಕೆಟ್‌ ಕೊಡಿ ಅಂತ ವರಿಷ್ಠರಲ್ಲಿ ಕೇಳಿಲ್ಲ. ನಾನು ಎಲ್ಲೇ ಟಿಕೆಟ್‌ ಕೇಳಿದರೂ ಜೆಡಿಎಸ್‌ ವರಿಷ್ಠರು ಕೊಡುತ್ತಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಕೇಂದ್ರದ ಒಪ್ಪಿಗೆ ಸಿಕ್ರೆ ಕೃಷ್ಣ ಮೇಲ್ದಂಡೆ 3ನೇ ಹಂತದ ಪೂರ್ಣಕ್ಕೆ ಬದ್ಧ: ಡಿ.ಕೆ.ಶಿವಕುಮಾರ್‌