ಸುಳ್ಳು ಹೇಳುವುದರಲ್ಲಿ ಪ್ರಸಿದ್ಧಿ ಪಡೆದಿರುವ ಕಾಂಗ್ರೆಸ್‌: ಪ್ರಲ್ಹಾದ್‌ ಜೋಶಿ

By Kannadaprabha News  |  First Published May 22, 2023, 1:30 AM IST

ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರಿಗೆ ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವ ಆಸಕ್ತಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. 


ಹುಬ್ಬಳ್ಳಿ (ಮೇ.22): ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರಿಗೆ ತಾವು ಕೊಟ್ಟ ಭರವಸೆಗಳನ್ನು ಈಡೇರಿಸುವ ಆಸಕ್ತಿ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಚೆಗೆ ನಡೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್‌ ನೀಡಿದ್ದ ಗ್ಯಾರಂಟಿ ಯೋಜನೆಗಳನ್ನು ಅಧಿಕಾರ ವಹಿಸಿಕೊಂಡ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಈಗ ಮೊದಲ ಸಂಪುಟ ಸಭೆ ಆಗಿದೆ. ಈಗೇನು ಹೇಳುತ್ತಿದ್ದಾರೆ? ಕಾಂಗ್ರೆಸ್‌ ಸುಳ್ಳು ಹೇಳುವುದರಲ್ಲಿ ಪ್ರಸಿದ್ಧಿ ಪಡೆದ, ಪರಿಣತಿ ಹೊಂದಿದ ಪಕ್ಷವಾಗಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯ ಸರ್ಕಾರಕ್ಕೆ ಕೇಂದ್ರದ ಅನುದಾನ ಕಡಿತ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಜೋಶಿ, 2009ರಿಂದ 2014ರ ಡೆವಲ್ಯೂಷನ್‌ (ಅಪಮೌಲ್ಯೀಕರಣ) ಫಂಡಿನಲ್ಲಿ ಶೇ.148ರಷ್ಟುಜಾಸ್ತಿ ಆಗಿದೆ. 2014ರಿಂದ 2019ರ ಅವಧಿಯಲ್ಲಿ ಶೇ.129ರಷ್ಟುಜಾಸ್ತಿ ಆಗಿದೆ. ನಮ್ಮ ಕಾಲದಲ್ಲಿ 5000-7000 ಕೋಟಿ ಡೆವಲ್ಯೂಷನ್‌ ಫಂಡ್‌ ಬಂದಿದೆ. 2009-10ರಲ್ಲಿ .2476 ಕೋಟಿ ಬರುತ್ತಿದ್ದರೆ, 2019-20ರಲ್ಲಿ 7578 ಕೋಟಿ ಬಂದಿದೆ. 2021-22ರಲ್ಲಿ .7862 ಕೋಟಿ ಬಂದಿದೆ. ಈ ಕುರಿತು ಸಮಗ್ರ ಚಿಂತನೆ ನಡೆಸಲಿ ಎಂದರು.

Tap to resize

Latest Videos

ಆರು ಬಾರಿ ಗೆದ್ದರೂ ಸಚಿವ ಸ್ಥಾನಕ್ಕಾಗಿ ಕಾಯಬೇಕು ಮೈಸೂರು ಜಿಲ್ಲೆಯ ಮೂವರು ಶಾಸಕರು!

ತನಿಖೆಗೆ ಅಭ್ಯಂತರವಿಲ್ಲ: ಈ ಹಿಂದೆ ನಡೆದ ಎಲ್ಲ ಹಗರಣದ ಬಗ್ಗೆ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆಸಿದ ಜೋಶಿ, ತನಿಖೆ ಮಾಡುವುದಾದರೆ ಮಾಡಲಿ, ನಮ್ಮದೇನೂ ಅಭ್ಯಂತರವಿಲ್ಲ. ನಮ್ಮ ಸಮಯದಲ್ಲಿ ಏನು ಹಗರಣ ಆಗಿಯೇ ಇಲ್ಲ ಅಂದಮೇಲೆ ಏನು ತನಿಖೆ ಮಾಡಿಸುತ್ತಾರೋ ಮಾಡಿಸಲಿ ಎಂದರು.

ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸಿ: ಹುಬ್ಬಳ್ಳಿ- ಧಾರವಾಡ ಮಹಾನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರದೊಳಗೆ ನೀರಿನ ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಎಚ್ಚರಿಕೆ ನೀಡಿದರು. ಅವರು ತಮ್ಮ ಕಚೇರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಎಲ್‌ ಆ್ಯಂಡ್‌ ಟಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಖಡಕ್‌ ವಾರ್ನಿಂಗ್‌ ನೀಡಿದರು.

ಹುಬ್ಬಳ್ಳಿ- ಧಾರವಾಡದಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ನಿರಂತರ ವ್ಯತ್ಯಯ ಉಂಟಾಗಿರುವುದರಿಂದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ಕರೆದ ಸಚಿವರು, ಅವಳಿ ನಗರದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗದೇ ಇರುವ ಬಗ್ಗೆ ಅನೇಕ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ, ಎಲ್‌ ಆ್ಯಂಡ್‌ ಟಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡು ಬರುವ ಒಂದು ವಾರದೊಳಗೆ ನೀರಿನ ಸಮರ್ಪಕ ಪೂರೈಕೆ ಹಾಗೂ ನಿರ್ವಹಣೆ ಆಗದೇ ಇದ್ದಲ್ಲಿ, ಹಾಗೂ 3 ದಿನಗಳಲ್ಲಿ ಹಳೆಯ ನೌಕರರನ್ನು ಮರು ನೇಮಕಾತಿ ಮಾಡದೇ ಇದ್ದಲ್ಲಿ, ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರೊಂದಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವಳಿ ನಗರದ ಗುತ್ತಿಗೆಯನ್ನು ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದರು.

ಈ ಹಿಂದೆ ಇದ್ದ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿ ಶೀಘ್ರ ನೇಮಕಾತಿ ಮಾಡಿಕೊಳ್ಳುವಂತೆ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಅವರಿಗೆ ಆದೇಶಿಸಿದರು. ಸಾಕಷ್ಟುನೀರು ಇದ್ದರೂ ನಿತ್ಯ ನೀರು ಪೂರೈಕೆ ವಾರ್ಡ್‌ಗಳಲ್ಲಿಯೂ ವ್ಯತ್ಯಯವಾಗುತ್ತಿದ್ದು, ಇನ್ನುಳಿದ ವಾರ್ಡ್‌ಗಳಲ್ಲಿ 10ರಿಂದ 12 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಳೆದ 2 ತಿಂಗಳುಗಳಿಂದ ಹದಗೆಟ್ಟದೆ.

ಹುಣಸೂರು ತಾಲೂಕಿನ ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಹರೀಶ್‌ ಗೌಡ

ಹುಬ್ಬಳ್ಳಿ ಹಳೆ ಹುಬ್ಬಳ್ಳಿ, ಬಂಕಾಪುರ ಚೌಕ್‌, ಇಸ್ಲಾಂಪುರ, ದಾಜೀಬಾನ್‌ ಪೇಟೆ, ನೆಹರು ನಗರ, ಗೋಕುಲ ರಸ್ತೆ ಹಾಗೂ ಧಾರವಾಡದ ಮದಿಹಾಳ, ಸವದತ್ತಿ ರಸ್ತೆ, ಡಿಪೋ ಸರ್ಕಲ್‌ ಸೇರಿದಂತೆ ಸಾಕಷ್ಟುಪ್ರದೇಶಗಳಲ್ಲಿ ನೀರಿನ ಸರಬರಾಜು ಸಮರ್ಪಕವಾಗಿ ಆಗುತಿಲ್ಲ. ಮೇಲಿಂದ ಮೇಲೆ ಜನರು ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ಎದುರಿಸುತಿದ್ದಾರೆ. ಸಮರ್ಪಕ ನೀರು ಪೂರೈಕೆಗಾಗಿ ಜಲಮಂಡಳಿಯಿಂದ ನಿಮ್ಮ ಕಂಪನಿಗೆ ನೀರು ಸರಬರಾಜು ಮಾಡುವ ಹೊಣೆ ನೀಡಲಾಗಿದೆ. ಆದರೆ, ನೀವು ಸರಿಯಾದ ರೀತಿಯಲ್ಲಿ ನೀರನ್ನು ಸರಬರಾಜು ಮಾಡುತ್ತಿಲ್ಲ. ಸಮರ್ಪಕ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

click me!