ರಾಜ್ಯ ಸರ್ಕಾರ ದಿವಾಳಿಯಾಗಿದೆ. ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ ಎಂದು ಟ್ವೀಟ್ ಮಾಡತ್ತೆ. ಬೆಲೆ ಏರಿಕೆ ವಿಚಾರ ಇಟ್ಕೊಂಡು ಇವರು ರಾಜಕಾರಣ ಮಾಡಿದ್ರು. ಇವತ್ತು 3 ರೂಪಾಯಿ ಹೆಚ್ಚು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ(ಜೂ.16): ರಾಜ್ಯವನ್ನ ದಿವಾಳಿಯತ್ತ ನಿಲ್ಲಿಸೋದು ಖಚಿತ. ರಾಜ್ಯದಲ್ಲಿ ಬೆಲೆ ಏರಿಕೆ ಉಚಿತ, ಅಪರಾಧ, ಹಿಂದೂ ವಿರೋಧಿ ನೀತಿ ಖಚಿತ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ.
ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಕಾಂಗ್ರೆಸ್ ಪಕ್ಷ ಬೆಲೆ ಏರಿಕೆ ಎಂದು ಟ್ವೀಟ್ ಮಾಡತ್ತೆ. ಬೆಲೆ ಏರಿಕೆ ವಿಚಾರ ಇಟ್ಕೊಂಡು ಇವರು ರಾಜಕಾರಣ ಮಾಡಿದ್ರು. ಇವತ್ತು 3 ರೂಪಾಯಿ ಹೆಚ್ಚು ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಎಸ್‌ವೈ ವಿರುದ್ಧ ಸೇಡಿನ ರಾಜಕಾರಣ; ಸರ್ಕಾರ, ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದ ಕೇಂದ್ರ ಸಚಿವ ಜೋಶಿ
ಟಕಾ.. ಟಕಾ.. ಅಂತಾ ಪ್ರಣಾಳಿಕೆ ಮಾಡಿದ್ರು, ಇದಕ್ಕೆ ಯಾವುದೇ ಪ್ಲಾನ್ ಇರಲಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ದಿವಾಳಿಯಾಗಿದೆ. ಹೀಗಾಗಿ ಜನರ ಮೇಲೆ ಬರೆ ಹಾಕಿದ್ದಾರೆ. ಟ್ರಾನ್ಸ್‌ಫೋರ್ಟ್ ಮೇಲೂ ಇದರ ಪರಿಣಾಮ ಆಗತ್ತದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಕಿತ್ತುಕೊಳ್ಳೋ ಕೆಲಸ ಆಗ್ತಿದೆ. ಇನ್ಮೇಲೆ ಬಸ್ ದರವೂ ಹೆಚ್ಚಾಗತ್ತೆ. 2000 ಕೊಟ್ಟು 4000 ಕಿತ್ತುಕೊಂಡ ಹೋಗ್ತಾರೆ ಎಂದು ಕಿಡಿ ಕಾರಿದ್ದಾರೆ.