ಸಿಎಂ ಸಿದ್ದರಾಮಯ್ಯಗೆ ಸಿಕ್ಕಿಹಾಕಿಕೊಳ್ಳುವ ಭಯ ಕಾಡ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

Published : Sep 28, 2024, 11:44 AM ISTUpdated : Sep 28, 2024, 11:45 AM IST
ಸಿಎಂ ಸಿದ್ದರಾಮಯ್ಯಗೆ ಸಿಕ್ಕಿಹಾಕಿಕೊಳ್ಳುವ ಭಯ ಕಾಡ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಸಾರಾಂಶ

ಹೈಕೋರ್ಟ್ ಸುದೀರ್ಘ ವಿಚಾರಣೆ ಬಳಿಕವೂ ಷಡ್ಯಂತ್ರ ಅನ್ನೋದು ಮೂರ್ಖತನ. ರಾಜ್ಯಪಾಲರು ಬಗ್ಗೆ ಆರೋಪದಲ್ಲಿ ಹುರುಳಿಲ್ಲ. ಹೈಕೋರ್ಟ್ ಮೂಡ ಹಗರಣದ ಬಗ್ಗೆ ಸುದೀರ್ಘವಾಗಿ ವಿಶ್ಲೇಷಣೆ ಮಾಡಿದೆ. ಆದ್ರು ಕಾಂಗ್ರೆಸ್‌ನಲ್ಲೂ ಇನ್ನೂ ರಾಜ್ಯಪಾಲರ ಮೇಲೆ‌ ಆರೋಪ‌ ಮಾಡುತ್ತಿದ್ದಾರೆ. ದಿನ ಬೆಳಗಾದ್ರೆ ರಾಜ್ಯಪಾಲರ ಬಗ್ಗೆ ಮಾತನಾಡ್ತಾರೆ. ಮುಖ್ಯಮಂತ್ರಿ ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿಬಿಐಗೆ ಕೊಡಿ ಎಂದು ಸವಾಲ್‌ ಹಾಕಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 

ಹುಬ್ಬಳ್ಳಿ(ಸೆ.28):  ಸಮಾಜವಾದಿ ಹೆಸರಲ್ಲಿ ಅಧಿಕಾರಕ್ಕೆ‌ ಬಂದವರ ಬಂಡವಾಳ ಬಯಲಾಗಿದೆ. ಐದು ಜನರ ಮೇಲೆ ಈಗ ಎಫ್ಐಆರ್ ದಾಖಲಾಗಿದೆ. SCP, TSP ಅನುದಾನ ದುರ್ಬಳಕೆ ಆಗಿದೆ‌. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ, ಶಿಷ್ಯವೇತನ ಬರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. 

ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಹೈಕೋರ್ಟ್ ಸುದೀರ್ಘ ವಿಚಾರಣೆ ಬಳಿಕವೂ ಷಡ್ಯಂತ್ರ ಅನ್ನೋದು ಮೂರ್ಖತನ. ರಾಜ್ಯಪಾಲರು ಬಗ್ಗೆ ಆರೋಪದಲ್ಲಿ ಹುರುಳಿಲ್ಲ. ಹೈಕೋರ್ಟ್ ಮೂಡ ಹಗರಣದ ಬಗ್ಗೆ ಸುದೀರ್ಘವಾಗಿ ವಿಶ್ಲೇಷಣೆ ಮಾಡಿದೆ. ಆದ್ರು ಕಾಂಗ್ರೆಸ್‌ನಲ್ಲೂ ಇನ್ನೂ ರಾಜ್ಯಪಾಲರ ಮೇಲೆ‌ ಆರೋಪ‌ ಮಾಡುತ್ತಿದ್ದಾರೆ. ದಿನ ಬೆಳಗಾದ್ರೆ ರಾಜ್ಯಪಾಲರ ಬಗ್ಗೆ ಮಾತನಾಡ್ತಾರೆ. ಮುಖ್ಯಮಂತ್ರಿ ತಪ್ಪು ಮಾಡಿಲ್ಲ ಅಂದ್ರೆ ಭಯ ಯಾಕೆ ಸಿಬಿಐಗೆ ಕೊಡಿ ಎಂದು ಸವಾಲ್‌ ಹಾಕಿದ್ದಾರೆ. 

ಮುಡಾ ಹಗರಣ: ಎಫ್‌ಐಆರ್‌ನಿಂದ ಕಂಗಾಲಾದ್ರಾ ಸಿಎಂ ಸಿದ್ದರಾಮಯ್ಯ?

ಸಿಎಂ ಸಿದ್ದರಾಮಯ್ಯ ಅವರಿಗೆ ಭಯ ಕಾಡುತ್ತಿದೆ. ಸಿಕ್ಕಿಹಾಕಿಕೊಳ್ಳುವ ಭಯ. ಕಾಂಗ್ರೆಸ್ ಭ್ರಷ್ಟಾಚಾರ ಪಿತಾಮಹ. ಆಫ್‌ ದೀ ಫ್ಯಾಮಿಲಿ, ಭೈದೀ ಫ್ಯಾಮಿಲಿ, ಫಾರ್ ದಿ ಫ್ಯಾಮಿಲಿ. ಇದು ಕಾಂಗ್ರೆಸ್ ತತ್ವವಾಗಿದೆ ಎಂದು ಹರಿಹಾಯ್ದಿದ್ದಾರೆ. 
ಇಲ್ಲಿನ ಲೋಕಾಯುಕ್ತ ಅಧಿಕಾರಿಗಳಿಂದ ಸತ್ಯ ಹೊರಬರಲು ಸಾಧ್ಯವಿಲ್ಲ. ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡ್ತಾರೆ. ನೈತಿಕವಾಗಿ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ. ಕಾಂಗ್ರೆಸ್ ಪರವಾಗಿ ಬಂದ್ರೆ ರಾಜ್ಯಪಾಲರ ಸಂವಿಧಾನದ ಬದ್ಧವಾಗಿ ಕೆಲಸ ಮಾಡ್ತಾರೆ. ಇವರು ವಿರುದ್ಧವಾಗಿ ಬಂದ್ರೆ ಸಂವಿಧಾನ ಉಲ್ಲಂಘನೆ ಮಾತು‌ ಬರುತ್ತೆ ಎಂದು ಕಿಡಿ ಕಾರಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್