ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತೊಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಾಲ್ಕನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂದು ಹೇಳಿದ್ದರು. ನಂತರ ಅದನ್ನು ತಮಾಷೆ ಎಂದು ಸ್ಪಷ್ಟನೆ ನೀಡಿದ್ದರು.
ಮುಂಬೈ: ಕಳೆದ ಲೋಕಸಭೆ ಚುನಾವಣೆ ಬಳಿಕ ಪ್ರತಿಪಕ್ಷದ ನಾಯಕರೊಬ್ಬರಿಂದ ತಮಗೆ ಪ್ರಧಾನಿಯಾಗಲು ಆಫರ್ ಬಂದಿತ್ತು ಎಂದು ಹೇಳುವ ಮೂಲಕ ‘ರಾಜಕೀಯ ಬಾಂಬ್’ ಸಿಡಿಸಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇದೀಗ ‘ನನಗೆ ಒಂದಲ್ಲ, ಹಲವು ಬಾರಿ ಈ ಆಫರ್ ಬಂದಿತ್ತು’ ಎಂದು ಹೇಳಿ ಪುನಃ ಸಂಚಲನ ಮೂಡಿಸಿದ್ದಾರೆ.
undefined
ಖಾಸಗಿ ಸುದ್ದಿವಾಹಿನಿಯೊಂದರ ಸಂವಾದದ ವೇಳೆ ಗಡ್ಕರಿ ಬಳಿ ಪ್ರೇಕ್ಷಕರೊಬ್ಬರು, ‘ಜೂನ್‌ನಲ್ಲಿ ಲೋಕಸಭೆ ಚುನಾವಣೆಯ ಫಲಿತಾಂಶ ಬಂದ ನಂತರ ಪ್ರಧಾನಿಯಾಗಲು ಆಫರ್ ಬಂದಿತ್ತು ಎಂದಿದ್ದೀರಿ. ಅದರ ಬಗ್ಗೆ ವಿವರ ನೀಡುತ್ತೀರಾ’ ಎಂದು ಕೇಳಿದರು.
ಪಿಎಂ ಹುದ್ದೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಹೇಳಿದ್ರು, ಆದರೆ ... :ನಿತಿನ್ ಗಡ್ಕರಿ ಹೇಳಿದ್ದೇನು?
ಅದಕ್ಕೆ ಉತ್ತರಿಸಿದ ಗಡ್ಕರಿ, ‘ಲೋಕಸಭೆ ಚುನಾವಣೆಗೂ ಮುನ್ನ ಹಾಗೂ ನಂತರ ನನಗೆ ಪ್ರಧಾನಿಯಾಗಲು ಅನೇಕ ಬಾರಿ ಆಫರ್ ಬಂದಿತ್ತು. ಹೆಚ್ಚಿನ ಮಾಹಿತಿ ಬೇಕಿದ್ದರೆ ಪತ್ರಕರ್ತರು ಸಂಗ್ರಹಿಸಲಿ. ನಾನು ನನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಧಾನಿಯಾಗುವ ಆಫರ್ ಸ್ವೀಕರಿಸುವ ಪ್ರಶ್ನೆಯೇ ಇಲ್ಲ. ಪ್ರಧಾನಿಯಾಗುವುದು ನನ್ನ ಗುರಿಯಲ್ಲ. ನಾನು ನನ್ನ ಸಿದ್ಧಾಂತ ಮತ್ತು ಬದ್ಧತೆಗಾಗಿ ರಾಜಕಾರಣದಲ್ಲಿದ್ದೇನೆ’ ಎಂದು ಹೇಳಿದರು.
ಇಂದಿನದು ಬರೀ ಪವರ್ ಪೊಲಿಟಿಕ್ಸ್:
ಈ ನಡುವೆ ಶುಕ್ರವಾರ ಇನ್ನೊಂದು ಸಮಾಂಭದಲ್ಲಿ ಮಾತನಾಡಿದ ಗಡ್ಕರಿ, ಅಂದು ರಾಜಕೀಯ ಎಂದರೆ ಅದು ದೇಶ ಕಟ್ಟುವ, ಅಭಿವೃದ್ಧಿಯ ಹಾಗೂ ಸಮಾಜ ಸೇವೆ ಉದ್ದೇಶ ಹೊಂದಿತ್ತು. ಇಂದಿನದು ಕೇವಲ ಅಧಿಕಾರ ರಾಜಕೀಯ (ಪವರ್ ಪೊಲಿಟಿಕ್ಸ್) ಎಂದರು.
ನಮಗೆ 4ನೇ ಬಾರಿ ಅಧಿಕಾರ ಅನುಮಾನ: ಗಡ್ಕರಿ ‘ತಮಾಷೆ’!