ಕಾಂಗ್ರೆಸ್‌ ಆರೋಪದಲ್ಲಿ ಹುರುಳಿಲ್ಲ: ಕೇಂದ್ರ ಸಚಿವ ಕ್ರಿಶನ್‌ ಪಾಲ್‌ ಗುಜರ್‌

By Kannadaprabha NewsFirst Published Oct 31, 2022, 9:04 PM IST
Highlights

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.40 ರಷ್ಟುಕಮಿಷನ್‌ ಪಡೆಯುತ್ತಿದೆ ಎಂಬುದು ಕೇವಲ ರಾಜಕೀಯ ಪ್ರೇರಿತ ಆರೋಪ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಕ್ರಿಶನ್‌ ಪಾಲ್‌ ಗುರ್ಜರ್‌ ಹೇಳಿದರು. 

ಮದ್ದೂರು (ಅ.31): ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಕಾಮಗಾರಿಗಳಿಗೆ ಶೇ.40 ರಷ್ಟುಕಮಿಷನ್‌ ಪಡೆಯುತ್ತಿದೆ ಎಂಬುದು ಕೇವಲ ರಾಜಕೀಯ ಪ್ರೇರಿತ ಆರೋಪ ಎಂದು ಕೇಂದ್ರ ಇಂಧನ ಖಾತೆ ರಾಜ್ಯ ಸಚಿವ ಕ್ರಿಶನ್‌ ಪಾಲ್‌ ಗುರ್ಜರ್‌ ಹೇಳಿದರು. ಮದ್ದೂರು ತಾಲೂಕಿನಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನೆಗಾಗಿ ಮೂರು ದಿನಗಳ ಪ್ರವಾಸ ಪೂರ್ಣಗೊಳಿಸಿದ ನಂತರ ಭಾನುವಾರ ಪಟ್ಟಣದ ನಗರಕೆರೆ ವೃತ್ತದ ಖಾಸಗಿ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು ಆಗಲು ಗುತ್ತಿಗೆದಾರರು ಸಚಿವರಿಗೆ ಶೇ.40ರಷ್ಟುಕಮೀಷನ್‌ ನೀಡಬೇಕು ಎಂಬುವುದು ಕೇವಲ ವಿಪಕ್ಷದ ಆರೋಪ ಎಂದರು.

ಕಾಂಗ್ರೆಸ್‌ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ನಡೆದಿರುವ ಭ್ರಷ್ಟಾಚಾರ ಜನನಿತವಾಗಿದೆ. ಭ್ರಷ್ಟಾಚಾರ ಮತ್ತು ಅಕ್ರಮ ಹಣ ಸಂಪಾದನೆಯಿಂದ ಜೈಲಿಗೆ ಹೋಗಿ ಬಂದ ನಾಯಕರಿಂದ ಬಿಜೆಪಿ ನಾಯಕರು ಬುದ್ಧಿ ಕಲಿಯಬೇಕಾಗಿಲ್ಲ ಎಂದರು. ಕೇಂದ್ರ ಮತ್ತು ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಭ್ರಷ್ಟಾಚಾರ ವಿರೋಧಿಯಾಗಿದೆ. ಬಿಜೆಪಿ ಯಾವ್ಯಾವ ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದೆ ಆ ರಾಜ್ಯಗಳಲ್ಲಿ ಸಮಗ್ರ ಅಭಿವೃದ್ಧಿಯಾಗುತ್ತಿವೆ. ಮುಂದೆಯೇ ಸಹ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರುತ್ತವೆ ಎಂದರು.

Latest Videos

ಬೆಂಗಳೂರು ನಿರ್ಮಾಣಕ್ಕೆ ಅಂಕಿತ ಹಾಕಿದ ನಾಡಪ್ರಭು ಕೆಂಪೇಗೌಡರು: ಸಚಿವ ಗೋಪಾಲಯ್ಯ

ಮೋದಿ ಪ್ರಧಾನಿಯಾಗಿ ಆಡಳಿತ ಚುಕ್ಕಾಣಿ ಹಿಡಿದ ನಂತರ ಆರ್ಥಿಕತೆಯಲ್ಲಿ ಪ್ರಗತಿ ಸಾಧಿಸಿ ವಿಶ್ವದಲ್ಲೇ ಐದನೇ ಸ್ಥಾನಕ್ಕೆ ಬಂದು ನಿಂತಿದೆ. ಉತ್ತಮ ಆಡಳಿತ ನೀಡುವ ಮೂಲಕ ಮೋದಿ ಅವರು ವಿಶ್ವದ ಎಲ್ಲಾ ದೇಶಗಳ ಪ್ರಮುಖ ನಾಯಕರ ವಿಶ್ವಾಸ ಗಳಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರ್ಣಗೊಳಿಸುವಷ್ಟರಲ್ಲಿ ಭಾರತವನ್ನು ವಿಶ್ವದ ನಂ.1 ದೇಶವನ್ನಾಗಿ ಮಾಡಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌ ಮಾತನಾಡಿ, ಕೇಂದ್ರ ಸರ್ಕಾರದ ಸಚಿವರೊಬ್ಬರು ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಮೂರು ದಿನಗಳ ಕಾಲ ನಿರಂರತವಾಗಿ ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಜನ ಉಪಯೋಗಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿರುವುದು ಸಂತೋಷದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Mandya: ಕೆಂಪೇಗೌಡ್ರ ಹೆಸರು ಅಜರಾಮರ: ಸಚಿವ ನಾರಾಯಣಗೌಡ

ಮದ್ದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಸ್‌.ಪಿ.ಸ್ವಾಮಿ ಮಾತನಾಡಿ, ಮೋದಿ ಅವರ ನೇತೃತ್ವದಲ್ಲಿ ದೇಶದ ಆರ್ಥಿಕತೆ, ರಕ್ಷಣಾ, ಕೃಷಿ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಜನರು ಸಂಕಲ್ಪ ಮಾಡಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಮನ್ಮುಲ್‌ ನಿರ್ದೇಶಕ ಎಸ್‌.ಪಿ.ಸ್ವಾಮಿ, ಬಿಜೆಪಿ ಜಿಲಾಧ್ಯಕ್ಷ ಅಧ್ಯಕ್ಷ ಸಿ.ಪಿ.ಉಮೇಶ್‌, ಬಿಜೆಪಿ ತಾಲೂಕು ಅಧ್ಯಕ್ಷ ಪಿ.ಸಿ.ರಘು, ಮುಖಂಡ ಸಿದ್ದರಾಮಯ್ಯ, ಜಗದೀಶ್‌ ಈರೇಮಣಿ ಇದ್ದರು.

click me!