ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಹೋಗುವುದು ಒಳಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದನ್ನು ಅವರು ಹೇಳುವುದಲ್ಲ, ಚನ್ನಪಟ್ಟಣದ ಜನ ಹೇಳಬೇಕು, ಯಾರು ಹೊರಗೆ ಹೋಗಬೇಕು ಎನ್ನುವುದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ
ಚನ್ನಪಟ್ಟಣ(ನ.05): ನಾನು ಮಾಡಿದ ಕೆಲಸದ ಸಾಕ್ಷಿಗುಡ್ಡೆಗಳು ಕಣ್ಣಿಗೆ ಕಾಣುತ್ತಿವೆ, ನೀವು ಲೂಟಿ ಹೊಡೆದು ಕಳುಹಿಸಿದ ಕಲ್ಲುಬಂಡೆಗಳ ಸಾಕ್ಷಿಗುಡ್ಡೆಗಳು ವಿದೇಶದಲ್ಲಿವೆ ಎಂದು ಕೆಲಸಗಳ ಸಾಕ್ಷಿಗುಡ್ಡೆ ಕೇಳಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದರು.
ದೊಡ್ಡನಹಳ್ಳಿ ಗ್ರಾಮದಲ್ಲಿ ಸೋಮವಾರ ಭರ್ಜರಿ ಪ್ರಚಾರ ನಡೆಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಹೋಗುವುದು ಒಳಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅದನ್ನು ಅವರು ಹೇಳುವುದಲ್ಲ, ಚನ್ನಪಟ್ಟಣದ ಜನ ಹೇಳಬೇಕು, ಯಾರು ಹೊರಗೆ ಹೋಗಬೇಕು ಎನ್ನುವುದನ್ನು ಅವರು ತೀರ್ಮಾನ ಮಾಡುತ್ತಾರೆ ಎಂದರು.
ಪಾಪ ಕಂದ ಇಲ್ಲಿ ನಿಲ್ಲು ಅಂದ್ರು ನಿಲ್ತಾನೆ, ಅಲ್ಲಿ ನಿಲ್ಲು ಅಂದ್ರು ನಿಲ್ತಾನೆ, ನಿಖಿಲ್ ಬಗ್ಗೆ ಮಾತನಾಡಲ್ಲ: ಡಿಕೆಶಿ
ಯಾವ ರೀತಿ ಸಾಕ್ಷಿಗುಡ್ಡೆ ಬೇಕು ಅವರಿಗೆ? ಸಾಕ್ಷಿಗುಡ್ಡೆ ಅರ್ಥ ಗೊತ್ತಿದೆಯಾ? ಕಾನೂನು ಬಾಹಿರವಾಗಿ ಕಲ್ಲು ಬಂಡೆಗಳನ್ನು ಲೂಟಿ ಮಾಡಿ ವಿದೇಶಕ್ಕೆ ಕಳುಹಿಸಿದ್ದಾರೆ. ಆ ಸಾಕ್ಷಿಗುಡ್ಡೆನಾ? ರಾಜ್ಯದ ಪ್ರಾಕೃತಿಕ ಸಂಪತ್ತು ಲೂಟಿ ಮಾಡಿದ ಬಗ್ಗೆ ಸಾಕ್ಷಿಗುಡ್ಡೆ ನೀಡಬೇಕಾಗಿತ್ತಾ ಎಂದು ಖಾರವಾಗಿ ಉತ್ತರಿಸಿದರು.