ಚನ್ನಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಮಾಡಿಯೇ ಮಾಡುತ್ತೇವೆ. ಯೋಗೇಶ್ವರ್ ನನ್ನು ವಿಧಾನಸೌಧಕ್ಕೆ ಕಳುಹಿಸಿ ನಿನ್ನಮ್ಮ ಸೇವೆಗೆ ನಮ್ಮನ್ನು ಉಪಯೋಗಿಸಿಕೊಳ್ಳಿ. ಬೇರೆ ಪಕ್ಷದ ಕಾರ್ಯಕರ್ತರು ದಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ, ಕುಮಾರಣ್ಣ ದಳವನ್ನು ಕೈಬಿಟ್ಟಾಯ್ತು. ಹೀಗಾಗಿ ಆ ಪಕ್ಷದ ಕಾರ್ ಕರ್ತರು ನಮ್ಮ ಜತೆ ಕೈ ಜೋಡಿಸಿ ಎಂದ ಡಿಸಿಎಂ ಡಿ.ಕೆ. ಶಿವಕುಮಾರ್
ರಾಮನಗರ(ಚೆನ್ನಪಟ್ಟಣ)(ನ.05): ಚನ್ನಪಟ್ಟಣ ಕ್ಷೇತ್ರದಿಂದ ಸಿಎಂ ಆಗಿದ್ದ ಎಚ್ .ಡಿ.ಕುಮಾರಸ್ವಾಮಿ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ. ಈ ಭಾಗದ ಜನರಿಗೆ ಒಂದೂ ಉತ್ತಮ ಯೋಜನೆ ನೀಡಿಲ್ಲ. ಬಡವರಿಗೆ ಸಹಾಯ ಮಾಡಲು ಆಗದ ಅವರು ಜನರ ಬಳಿ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಹೊಂಗನೂರು ಜಿಪಂ ವ್ಯಾಪ್ತಿಯ ತಗಚಗೆರೆ ಹಾಗೂ ಭೂಪಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರ ಪರ ಸೋಮವಾರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ನಾನು ಹಾಗೂ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಗೂ ಮುನ್ನ 5 ಗ್ಯಾರಂಟಿ ಯೋಜನೆಗಳ ಭರವಸೆ ನೀಡಿದ್ದೆವು. ಅದರಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಮ್ಮ ಬದುಕಿನಲ್ಲಿ ಬದಲಾವಣೆ ತರಲು ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನ ಭಾಗ್ಯ, ಶಕ್ತಿ ಹಾಗೂ ಯುವನಿಧಿ ಯೋಜನೆ ಜಾರಿ ಮಾಡಿದ್ದೇವೆ. ಇಂತಹ ಒಂದೇ ಒಂದು ಯೋಜನೆಯನ್ನು ನೀಡದ ಕುಮಾರಣ್ಣ ಇಲ್ಲಿ ಬಂದು ಮತ ಕೇಳುತ್ತಿದ್ದಾರೆ. ಈ ಭಾಗದ ಜನರ ಕಷ್ಟಕ್ಕೆ ಸ್ಪಂದಿಸಿದ್ದರೆ ಕುಮಾರಣ್ಣನಿಗೆ ಮತ ಕೇಳುವ ಹಕ್ಕಿತ್ತು. ಆ ಆದರೆ ಈಗ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ. ನಿಮ್ಮನ್ನು ನಂಬಿದೆ. ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ ಜನರನ್ನು ಜನರನ್ನು ಕೈಬಿಟ್ಟು ಮಂಡ್ಯಕ್ಕೆ ಹೋಗಿದ್ದೀರಿ. ಈಗ ಮತ್ತೆ ಬಂದು ಮತ ಕೇಳುತ್ತಿದ್ದೀರಿ, ನಿಮಗೆ ಮತ ಕೇಳುವ ಹಕ್ಕು ಇದೆಯೇ?' ಎಂದು ಪ್ರಶ್ನಿಸಿದರು.
ಸಿ.ಪಿ.ಯೋಗೇಶ್ವರ್ ವಿರುದ್ಧ ಮಗಳು ನಿಶಾ ಮಾತನಾಡದಂತೆ ತಡೆಯಾಜ್ಞೆ ತಂದ ಮಲತಾಯಿ!
ಎಚ್‌ಡಿಕೆ ಸಾಧ್ಯವಿರಲಿಲ್ಲವೇ?:
'ಕುಮಾರಸ್ವಾಮಿ ಅವರು ಜನಪ್ರತಿನಿಧಿಯಾಗಿ ಒಂದೇ ಒಂದು ದಿನ ಈ ಕ್ಷೇತ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡಲು ಬರಲಿಲ್ಲ. ಹಾಗಿದ್ದರೆ ನಿಮಗೆ ಶಾಸಕ ಸ್ಥಾನ ಯಾಕೆ ಬೇಕು? ಕನ್ನಡ ರಾಜ್ಯೋತ್ಸ ವದೆಂದು ಇಲ್ಲಿ ಕನ್ನಡ ಧ್ವಜ ಹಾರಿಸಲಿಲ್ಲ. ಅಲ್ಲಿಗೆ ನಿಮ್ಮ ಹಾಗೂ ಈ ಚನ್ನಪಟ್ಟಣ ಕ್ಷೇತ್ರದ ಜನರ ನಡುವೆ ಭಾವನಾತ್ಮಕ ಸಂಬಂಧ ಎಲ್ಲಿದೆ? ಹೀಗಾಗಿ ಕುಮಾರಣ್ಣ ಮತ ಕೇಳುವ ಹಕ್ಕು ಕಳೆದುಕೊಂಡಿದ್ದಾರೆ' ಎಂದರು. 'ಈ ಕ್ಷೇತ್ರದಲ್ಲಿ ಅನೇಕ ಜನ ಬಗರ್ ಹುಕುಂ ಸಾಗುವಳಿಗೆ ಅರ್ಜಿ ಹಾಕಿದ್ದೀರಿ. ಅನೇಕರು ನಿವೇಶನ, ಮನೆಯಿಲ್ಲ ಎಂದು ಅರ್ಜಿ ಹಾಕಿದ್ದೀರಿ. ನಾನು ಇಲ್ಲಿಗೆ ಭೇಟಿ ನೀಡಿ ನಿಮ್ಮ ಅರ್ಜಿ ನೋಡಿದ ಬಳಿಕ ಈ ಭಾಗದಲ್ಲಿ ನೂರಾರು ಎಕರೆ ಜಮೀನು ಖರೀದಿ ಮಾಡಿ ನಿವೇಶನ ಹಂಚಲಾಗುತ್ತಿದೆ. 5 ಸಾವಿರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಿಸಿದ್ದೇನೆ. ಈ ಕೆಲಸ ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿರಲಿಲ್ಲವೇ?' ಎಂದು ಟೀಕಿಸಿದರು.
ನಿಮಗೇನು ಲಾಭ ಎಂದು ಆಲೋಚಿಸಿ:
'ಯೋಗೇಶ್ವರ್ ಮೂರ್ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಕಳೆದ 2 ಬಾರಿ ಇದೇ ಕ್ಷೇತ್ರದಲ್ಲಿ ಸೋತಿದ್ದಾರೆ. ಈ ಎರಡು ಅವಧಿಯಲ್ಲಿ ನೀವು ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದ್ದೀರಿ. ಕುಮಾರಸ್ವಾಮಿ ಈ ಕ್ಷೇತ್ರದಲ್ಲಿ ಗೆದ್ದು ಶಾಸಕ ಹಾಗೂ ಮುಖ್ಯಮಂತ್ರಿಯಾಗಿದ್ದರು. ಪಕ್ಕದ ಕ್ಷೇತ್ರ ದಿಂದಲೂ ಶಾಸಕರಾಗಿ, ಸಿಎಂ ಆಗಿ ಕೆಲಸ ಮಾಡಿದ್ದರು. ರಾಮನಗರದಲ್ಲಿ ಅವರ ಧರ್ಮಪತ್ನಿ ಹಾಗೂ ನನ್ನ ಸಹೋದರಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿ ಕೆಲಸ ಮಾಡಿ ದ್ದಾರೆ.ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಅದರ ಮಧ್ಯೆ ಏನಾಗಿದೆಯೋ ನಾನು ಚರ್ಚೆ ಮಾಡುವುದಿಲ್ಲ. ನಾನು ವ್ಯಕ್ತಿ ಮೇಲೆ ರಾಜಜಕೀಯ ಮಾಡುವುದಿಲ್ಲ, ನಿಮಗೇನು ಲಾಭ, ಕ್ಷೇತ್ರ ಹಾಗೂ ಕ್ಷೇತ್ರದ ಜನತೆಗೆ ಏನು ಲಾಭ ಎಂದು ಆಲೋಚನೆ ಮಾಡಿ' ಎಂದು ಮತದಾರರಿಗೆ ಕಿವಿ ಮಾತು ಹೇಳಿದರು.
ಚನ್ನಪಟ್ಟಣ ಬೇಡವೆಂದು ಮಂಡ್ಯಕ್ಕೆ ಹೋದ ಕುಮಾರಸ್ವಾಮಿ: ಯೋಗೇಶ್ವರ್
ನಿಖಿಲ್ ಬಗ್ಗೆ ಮಾತನಾಡಲ್ಲ:
'ನಾನು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಪಾಪ ಕಂದ ಇಲ್ಲಿ ನಿಲ್ಲು ಎಂದರೂ ನಿಲ್ಲುತ್ತಾನೆ, ಅಲ್ಲಿನಿಲ್ಲು ಎಂದರೂ ನಿಲ್ಲುತ್ತಾನೆ. ಕಣ್ಣೀರು ಹಾಕು ಅಂದರೂ ಹಾಕುತ್ತಾನೆ, ನಗು ಅಂದರೆ ನಗುತ್ತಾನೆ. ಆತನನ್ನು ನಾನು ಪ್ರಶ್ನಿಸುವುದಿಲ್ಲ. ಆತ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದಾಗಿ ಹೇಳಿದ್ದಾನೆ. ಆತ ಒತ್ತಾಯಕ್ಕೆ ಸ್ಪರ್ಧಿಸಿದ್ದಾ ನೆಯೇ ಹೊರತು. ಜನರ ಸೇವೆಗಾಗಿ ಅಲ್ಲಿ" ನಿಮ್ಮ ಕಷ್ಟ ಸುಖಕ್ಕೆ ಭಾಗಿಯಾಗಲು ನಾವು ಸಂಕಲ್ಪ ಮಾಡಿದ್ದೇವೆ' ಎಂದು ತಿಳಿಸಿದರು.
ರೆಡಿಮೇಡ್ ಗಂಡು:
'ಯೋಗೇಶ್ವರ್ ರೆಡಿಮೇಡ್ ಗಂಡು, ಅವರಿಗೆ ನಿಮ್ಮ ಕಷ್ಟ, ಸುಖ, ನೋವು ಗೊತ್ತಿದೆ. ನಿಮ್ಮ ಹಳ್ಳಿಗಳೂ ಗೊತ್ತಿದೆ ಅವರಿಗೆ ಬೆಮಬಲಿವಾಗಿ ಸರ್ಕಾರವಿದೆ. ಅವರ ಬೆನ್ನಿಗೆ ಈ ಡಿ.ಕೆ.ಶಿವಕುಮಾರ್ ಇದ್ದಾನೆ. ನಾನು ಎಂದಾದರೂ ಕೊಟ್ಟ ಮಾತು ತಪ್ಪಿದ್ದೀನಾ? ನನಗೆ ಮಹಿಳೆಯರ ಮೇಲೆ ವಿಶೇಷ ನಂಬಿಕೆ ಇದೆ. ನಮ್ಮ ಎಲ್ಲ ಕಾರ್ಯಕ್ರಮಗಳು ಮಹಿಳೆಯರ ಮೇಲೆ ಕೇಂದ್ರೀಕೃತವಾಗಿದೆ. ಇಲ್ಲಿರುವ ಪ್ರತಿ ಮಹಿಳೆಯರು ತಮ್ಮ ಕುಟುಂಬದ ನಾಲ್ಕು ಮತಗಳನ್ನು ಕಾಂಗ್ರೆಸ್‌ಗೆ ಹಾಕಿಸಬೇಕು. ಎದುರಾಳಿ ಪಕ್ಷದವರು ಏನನ್ನೇ ಸುರಿಸಲಿ, ಯಾವುದೇ ಬಣ್ಣ ಹಾಕಿಕೊಳ್ಳಲಿ, ಯಾವುದೇ ನಾಟಕವಾಡಲಿ ನಮಗೆ ನಿಮ್ಮ ಮೇಲೆ ನಂಬಿಕೆ ಇದೆ. ಚನ್ನಪಟ್ಟಣದಲ್ಲಿ ಅಭಿವೃದ್ಧಿ ಪರ್ವ ಮಾಡಿಯೇ ಮಾಡುತ್ತೇವೆ. ಯೋಗೇಶ್ವರ್ ನನ್ನು ವಿಧಾನಸೌಧಕ್ಕೆ ಕಳುಹಿಸಿ ನಿನ್ನಮ್ಮ ಸೇವೆಗೆ ನಮ್ಮನ್ನು ಉಪಯೋಗಿಸಿಕೊಳ್ಳಿ. ಬೇರೆ ಪಕ್ಷದ ಕಾರ್ಯಕರ್ತರು ದಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ, ಕುಮಾರಣ್ಣ ದಳವನ್ನು ಕೈಬಿಟ್ಟಾಯ್ತು. ಹೀಗಾಗಿ ಆ ಪಕ್ಷದ ಕಾರ್ ಕರ್ತರು ನಮ್ಮ ಜತೆ ಕೈ ಜೋಡಿಸಿ" ಎಂದರು.