'ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ ಎಂಬ ಡಿಕೆ ಶಿವಕುಮಾರ ಹೇಳಿಕೆ ಪ್ರಸ್ತಾಪಿಸಿ ತಿರುಗೇಟು ನೀಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಹುಚ್ಚು ಹಿಡಿದಿರೋದು ನನಗಲ್ಲ ಡಿಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ ಎಂದು ತಿರುಗೇಟು ನೀಡಿದರು.
ಮಂಡ್ಯ (ಜು.5) ಇಂದು ಜನತಾ ದರ್ಶನದಲ್ಲಿ 3000ಕ್ಕೂ ಅಧಿಕ ಅರ್ಜಿಗಳು ಬಂದಿದ್ದವು. ಖುದ್ದು ನಾನೇ 7 ಗಂಟೆಗಳ ಕಾಲ ಜನತೆಯ ಅಹವಾಲು ಸ್ವೀಕರಿಸಿದ್ದೇನೆ. ಆ ಪೈಕಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸಮಸ್ಯೆಗಳ ಅರ್ಜಿ ಬಂದಿವೆ, ಕೆಲವರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ನಿರುದ್ಯೋಗಿ ಸಮಸ್ಯೆ ಬಗ್ಗೆ ಯುವಕ ಯುವತಿಯರು ಅರ್ಜಿ ಕೊಟ್ಟಿದ್ದಾರೆ, ಇನ್ನು ಕೆಲವರು ಆರೋಗ್ಯ ಸಮಸ್ಯೆ ಸಂಬಂಧ ಅರ್ಜಿ ಕೊಟ್ಟಿದ್ದಾರೆ. ಅದರಲ್ಲೂ 40ಕ್ಕೂ ವಿಶೇಷ ಚೇತನರ ಅರ್ಜಿಗಳು ಬಂದಿವೆ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಇಂದು ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನದ ಬಳಿಕ ಮಾತನಾಡಿದ ಸಚಿವರು, ಇಂದು ಕೋರ್ಟ್ ವ್ಯಾಜ್ಯ ಹೊರತುಪಡಿಸಿ ಉಳಿದ ಎಲ್ಲ ಅರ್ಜಿಯೂ ವಿಲೇವಾರಿಯಾಗುವ ಅರ್ಜಿಗಳೇ ಬಂದಿವೆ. ನಿರುದ್ಯೋಗ ಸಮಸ್ಯೆ ಬಗೆಹರಿಸಲು ನನಗೆ ಎರಡು ಮೂರು ತಿಂಗಳು ಕಾಲ ಸಮಯಾವಕಾಶ ಬೇಕು ಎಂದರು.
undefined
ಮಂಡ್ಯ: ಜನರ ಅಹವಾಲು ಸ್ವೀಕರಿಸುತ್ತಲೇ ಊಟ ಮಾಡಿದ ಹೆಚ್ಡಿಕೆ!
ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ:
ಜನತಾ ದರ್ಶನಕ್ಕೆ ಅಧಿಕಾರಿಗಳನ್ನು ಹೋಗದಂತೆ ಸುತ್ತೋಲೆ ಹೊರಡಿಸಿದ್ದಾರೆ. ನನಗೆ ಜನತಾ ದರ್ಶನ ನಡೆಸಲು ಪವರ್ ಇಲ್ಲ.ಕಳೆದ ಚುನಾವಣೆಗೆ ಮುನ್ನ ಬೆಂಗಳೂರು ಗ್ರಾಮಾಂತರದ ಅಂದಿನ ಸಂಸದ ಸಭೆ ಮಾಡಿದ್ರು. ಹಳ್ಳಿಹಳ್ಳಿಗೆ ಅಧಿಕಾರಿಗಳನ್ನ ಕರೆದುಕೊಂಡು ಹೋಗಿದ್ರು. ಆದರೆ ಕುಮಾರಸ್ವಾಮಿ ಜನತಾ ದರ್ಶನ ಮಾಡ್ತಿದ್ದಾನೆ ಎಂದು ತರಾತುರಿಯಲ್ಲಿ ಸುತ್ತೋಲೆ ಹೊರಡಿಸಿದ್ದಾರೆ ಜನತೆಯಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಜನತಾ ದರ್ಶನ ಮಾಡುವ ಅವಕಾಶವಿದೆ. ಈ ರಾಜ್ಯ ಸರ್ಕಾರಕ್ಕೆ ಅಲ್ಪ ಸ್ವಲ್ಪನಾದ್ರು ಜ್ಞಾನ ಇದಿಯಾ? ಎಂದು ಡಿಕೆ ಸುರೇಶ್ ನಡೆಸಿದ್ದ ಸಭೆ ಪೋಟೋ ಪ್ರದರ್ಶಿಸಿ ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ಯಾವನು ಅವರಿಗೆ ಅಧಿಕಾರ ಕೊಟ್ಟವನು? ರಾಜ್ಯ ಸರ್ಕಾರದ ಪ್ರೋಟೊಕಾಲ್ ನಂಬಿ ನಾನು ರಾಜಕಾರಣ ಮಾಡುತ್ತಿಲ್ಲ. ಇವರು ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಅದರಲ್ಲಿ ಸಂಶಯವೇ ಇಲ್ಲ. ಅಧಿಕಾರಿಗಳನ್ನ ರಾತ್ರೋ ರಾತ್ರಿ ವರ್ಗಾವಣೆ ಮಾಡ್ತಿದ್ದಾರೆ. HMT ಯ ಭೂಮಿಯನ್ನ ಯಾರ್ಯಾರು ಹೊಡೆದಿದ್ದೀರಿ? ಅದರ ಬಗ್ಗೆ ತನಿಖೆ ಮಾಡ್ತೀರಾ ಎಂದು ಸವಾಲು ಹಾಕಿದ ಸಚಿವರು, ರಾಜ್ಯ ಸರ್ಕಾರಕ್ಕೆ ಬರ್ತಿದ್ದ ಆದಾಯದ ಬಗ್ಗೆ ಚಿಂತೆ ಮಾಡಿದ್ದೀರ? ನಾನೇನು ಕಡುಬು ತಿನ್ನಲು ಕುಳಿತಿಲ್ಲ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಜಾಗಟೆ ಬಾರಿಸಿಕೊಂಡು ಹೋದ್ರು. ಆದರೆ ರಾಜ್ಯಕ್ಕೆ ಅನ್ಯಾಯವಾಗಿರೋದು ಇವರಿಂದಲೇ ಎಂದು ಕಿಡಿಕಾರಿದರು.
ಡಿಕೆಶಿಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ:
'ಕುಮಾರಸ್ವಾಮಿಗೆ ಹುಚ್ಚು ಹಿಡಿದಿದೆ ಎಂಬ ಡಿಕೆ ಶಿವಕುಮಾರ ಹೇಳಿಕೆ ಪ್ರಸ್ತಾಪಿಸಿ ತಿರುಗೇಟು ನೀಡಿದ ಹೆಚ್‌ಡಿ ಕುಮಾರಸ್ವಾಮಿ ಅವರು, ಹುಚ್ಚು ಹಿಡಿದಿರೋದು ನನಗಲ್ಲ ಡಿಕೆ ಶಿವಕುಮಾರ್‌ಗೆ ಸಿಎಂ ಕುರ್ಚಿ ಹುಚ್ಚು ಹಿಡಿದಿದೆ ಎಂದು ತಿರುಗೇಟು ನೀಡಿದರು.
ಮುಡಾ ಹಗರಣ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯೋ ನೈತಿಕತೆ ಇಲ್ಲ - ರವಿಕೃಷ್ಣಾ ರೆಡ್ಡಿ
ಚನ್ನಪಟ್ಟಣಕ್ಕೆ ಹೋಗಿ ಹುಚ್ಚ ಯಾರೆಂದು ಪ್ರದರ್ಶನ ಮಾಡಿಕೊಳ್ಳುತ್ತಿದ್ದಾರೆ. ಪರೋಕ್ಷವಾಗಿ ಡಿಕೆಶಿಯೇ ಹುಚ್ಚ ಎಂದ ಹೆಚ್‌ಡಿ ಕುಮಾರಸ್ವಾಮಿಯವರು, ನಾನು ಜವಾಬ್ದಾರಿಯುತ ಜನಪ್ರತಿನಿಧಿಯಾಗಿ ಕೆಲಸ ಮಾಡ್ತಿದ್ದೇನೆ. ಮುಡಾ ಹಗರಣ(MUDA scam)ಕ್ಕೆ ಮೂಲ ಪುರುಷರು ಯಾರು? ನನಗೆ ರಾಜಕಾರಣ ಗೊತ್ತಿಲ್ವ? ಒಂದಷ್ಟು ದಿನ ದೇವೇಗೌಡರ ಕುಟುಂಬ ಮೇಲೆ ಆರೋಪ ಬಂತು. ಯಾರಾರಿಗೆ ಎಷ್ಟೆಷ್ಟು ದುಡ್ಡು ಕೊಟ್ಟು ಪ್ರಚಾರ ಮಾಡಿಸಿದ್ದೀರಿ? ದೇವೇಗೌಡರ ಕುಟುಂಬ ಮುಗಿಸಲು ಏನೇನು ಮಾಡಿದ್ರಿ ಎಂಬುದು ನನಗೆ ಗೊತ್ತಿದೆ. ಅದೆಲ್ಲ ಮುಗೀತು ಈಗ ಮುಖ್ಯಮಂತ್ರಿ ಮೇಲೆ ನಡೆತಿದೆ. ಮೂಡಾ 50:50 ನಾನಾ ತಂದಿರೋದು? ಈ ಹುಚ್ಚರೆ ಮುಡಾ ಹಗರಣವನ್ನ ತಂದಿರೋದು ಎಂದು ಡಿಕೆ ಶಿವಕುಮಾರ ಹೆಸರೇಳದೇ ವಾಗ್ದಾಳಿ ನಡೆಸಿದರು.