ಮಂಡ್ಯ: ಜನರ ಅಹವಾಲು ಸ್ವೀಕರಿಸುತ್ತಲೇ ಊಟ ಮಾಡಿದ ಹೆಚ್ಡಿಕೆ!

By Ravi Janekal  |  First Published Jul 5, 2024, 5:37 PM IST

ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿದ್ದ ಗೆಲುವು ಸಾಧಿಸಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನ ನಡೆಸಿದರು. 


ಮಂಡ್ಯ (ಜು.5): ಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿದ್ದ ಗೆಲುವು ಸಾಧಿಸಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾದ ಬಳಿಕ ಇದೇ ಮೊದಲ ಬಾರಿಗೆ ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನ ನಡೆಸಿದರು. 

 ಜನತಾ ದರ್ಶನದಲ್ಲಿ ಕಿಕ್ಕಿರಿದು ತುಂಬಿದ್ದ ಜನರಿಂದ ನೂಕುನುಗ್ಗಲು ನಡೆಯಿತು. ಜನರನ್ನ ನಿಯಂತ್ರಿಸಲು ಪೊಲೀಸರು ಹಾಗೂ ಜೆಡಿಎಸ್ ಮುಖಂಡರ ಹರಸಾಹಸಪಡುವಂತಾಯಿತು. ಹೆಚ್‌ಡಿ ಕುಮಾರಸ್ವಾಮಿ(HD Kumaraswamy) ಬಳಿ ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದ ನೂರಾರು ಜನರು. ವೇದಿಕೆ ಮೇಲೆ ಹಾಗೂ ಕೆಳಗೆ ಗುಂಪುಗುಂಪಾಗಿ ನಿಂತು ನೂಕುನುಗ್ಗಲು ಕಾರ್ಯಕ್ರಮಕ್ಕೆ ಬಂದವರ ಪೈಕಿ ಕುಮಾರಣ್ಣನ ನೋಡಲು ಬಂದವರು ಅಧಿಕವಾಗಿದ್ದರು. ಮನವಿ ಸಲ್ಲಿಸಿಕೆಗೆ ಆಗಮಿಸಿರುವವರ ಜೊತೆಗೆ ಕುಮಾರಸ್ವಾಮಿಯವರನ್ನ ನೋಡಲು ಬಂದಿರುವ ಜೆಡಿಎಸ್ ಕಾರ್ಯಕರ್ತರು. ಇಷ್ಟೆಲ್ಲ ನೂಕುನುಗ್ಗಲು ಗಲಾಟೆ ನಡುವೆಯೂ ತಾಳ್ಮೆ ಕಳೆದುಕೊಳ್ಳದೇ ಜನರ ಸಮಸ್ಯೆ ಆಲಿಸಿದರು.

Tap to resize

Latest Videos

ಮುಡಾ ಹಗರಣ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯೋ ನೈತಿಕತೆ ಇಲ್ಲ - ರವಿಕೃಷ್ಣಾ ರೆಡ್ಡಿ

ಬೆಳಗ್ಗೆ 11.45ಕ್ಕೆ ಪ್ರಾರಂಭವಾದ ಜನತಾ ದರ್ಶನ(Mandya Janata darshana) ಮಧ್ಯಾಹ್ನ 3 ಗಂಟೆಯಾದರೂ ಊಟಕ್ಕೆ ತೆರಳದೇ, ಬ್ರೇಕ್ ತೆಗೆದುಕೊಳ್ಳದೇ ಜನರ ಸಮಸ್ಯೆ ಆಲಿಸಿದರು. ಸರ್ಕಾರದ ಸೂಚನೆ ಹಿನ್ನಲೆ ಕೇಂದ್ರ ಸಚಿವರ ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗಿದ್ದರು. ಅಧಿಕಾರಿಗಳು ಬಾರದಿದ್ದರೂ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸಿದ ಕೇಂದ್ರ ಸಚಿವರು.

ಸಿಬಿಐ ತನಿಖೆಗೆ ಬಿಜೆಪಿ ಪಟ್ಟು..ಸಿದ್ದರಾಮಯ್ಯ ಹೇಳಿದ 60 ಕೋಟಿಯ ರಹಸ್ಯವೇನು ?

ಊಟ ಮಾಡುತ್ತಲೇ ಅಹವಾಲು ಸ್ವೀಕರಿಸಿದ ಎಚ್‌ಡಿಕೆ!

ಬೆಳಗ್ಗಿನಿಂದ ಬಿಡುವಿಲ್ಲದೇ ಜನರ ಸಮಸ್ಯೆ ಆಲಿಸಿದ ಕೇಂದ್ರ ಸಚಿವ ಕುಮಾರಸ್ವಾಮಿಯವರು ಮಧ್ಯಾಹ್ನ 3 ಗಂಟೆ ಬಳಿಕವೂ ಜನರು ಕಡಿಮೆಯಾಗಲಿಲ್ಲ. ಹೀಗಾಗಿ ಜನರು ಅಹವಾಲು ಸ್ವೀಕರಿಸುತ್ತಲೇ ಊಟ ಮಾಡಿದರು. ಬೆಳಗ್ಗೆಯಿಂದಲೂ ಸತತವಾಗಿ ಜನರ ಸಮಸ್ಯೆ ಆಲಿಸಿದರು. ಜನತಾ ದರ್ಶನಕ್ಕೆ ಬಂದವರ ಪೈಕಿ ಶಾಲಾ, ಕಾಲೇಜು ಶುಲ್ಕ ಕಟ್ಟಲಾಗದೇ ಹೆಚ್ಡಿಕೆ ಸಹಾಯ ಕೇಳಿ ಬಂದಿದ್ದ ಕೆಲವರು.ಮತ್ತೆ ಕೆಲ ವಿದ್ಯಾರ್ಥಿನಿಯರಿಂದ ಹಾಸ್ಟೆಲ್ ಗಾಗಿ ಬಂದಿದ್ದರು. ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಪತ್ರ ಹಿಡಿದು ಬಂದ ನೂರಾರು ಜನರ ಎಲ್ಲಾ ಕುಂದುಕೊರತೆಗಳನ್ನ ಸಮಚಿತ್ತದಿಂದ ಆಲಿಸಿದ ಎಚ್‌ಡಿ ಕುಮಾರಸ್ವಾಮಿ.

click me!