ಸಂಪುಟ ವಿಸ್ತರಣೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಕೆಲ ಶಾಸಕರು ಸಿಡಿದೆದ್ದು ಪಕ್ಷದ ನಾಯಕರ ವಿರುದ್ಧ ಬಹಿರಂಗ ಹೇಳಿಕೆ ಕೊಡುತ್ತಿದ್ದಾರೆ. ಇದೀಗ ಅವರಿಗೆ ಕೇಂದ್ರ ಸಚಿವ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ದಕ್ಷಿಣ ಕನ್ನಡ, (ಜ.19): ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್‌ಗೆ ಕೇಂದ್ರ ಸಚಿವ ಸದಾನಂದಗೌಡ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನಡುವಳಿಕೆಯ ವಿರುದ್ಧ ಗುಡುಗಿದ ಸದಾನಂದ ಗೌಡ, ಯತ್ನಾಳ್‌ಗೆ ಮಂತ್ರಿಗಿರಿ ಬೇಕಿದೆ. ಹಾಗಾಗಿ ಇಂತಹ ವರ್ತನೆ ತೋರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂತಹ ಒತ್ತಡಕ್ಕೆ ಸೊಪ್ಪು ಹಾಕೋದಿಲ್ಲ ಎಂದರು.
undefined
'ಶಾ ಬಿಜೆಪಿ ಸರ್ಕಾರ ಇರುತ್ತೆ ಅಂದಿದ್ರು, ಆದ್ರೆ ಯಡಿಯೂರಪ್ಪ CM ಆಗಿರ್ತಾರೆ ಅಂದಿಲ್ಲ'
ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ರೀತಿ ನಡವಳಿಕೆ ತೋರಿದ್ದರು. ಆಗ ಪಕ್ಷದಿಂದ ಉಚ್ಛಾಟನೆ ಮಾಡಿದ್ದೆ.ಈಗ ಇಂತಹ ಒತ್ತಡಕ್ಕೆ ಪಕ್ಷ ಯಾವುದೇ ಸೊಪ್ಪು ಹಾಕಲ್ಲ. ಇನ್ಮುಂದೆ ಪಕ್ಷದ ವಿರುದ್ಧ ಮಾತಾಡಿದರೆ ಕೇಂದ್ರದ ನಾಯಕರು ಕ್ರಮಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ ಯತ್ನಾಳ್‌ಗೆ ಸದಾನಂದಗೌಡ ಎಚ್ಚರಕೆ ಸಂದೇಶ ರವಾನಿಸಿದರು.
ಯತ್ನಾಳ್ ಅವರು ವೈಯಕ್ತಿಕವಾಗಿ ನನಗೆ ವಿರೋಧಿಯಲ್ಲ. ಅವರು ಇಂತಹ ನಡವಳಿಕೆಯನ್ನು ತಕ್ಷಣ ಬಿಡಬೇಕು ಎಂದು ಸದಾನಂದಗೌಡ ಸಲಹೆ ನೀಡಿದರು.