ಲೆಟರ್ ಹೆಡ್ ವಿಚಾರವಾಗಿ ನೂತನ ಸಚಿವ ಸಿ.ಪಿ.ಯೋಗೇಶ್ವರ್‌ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
ರಾಮನಗರ, (ಜ.19): ಸಿ.ಪಿ.ಯೋಗೇಶ್ವರ್ ಮೊದಲು ತಾಲೂಕು ಮಟ್ಟದಲ್ಲಿ ಹಣ ಮಾಡುತ್ತಿದ್ದರು. ಈಗ ರಾಜ್ಯ ಮಟ್ಟದಲ್ಲಿ ಹಣ ಮಾಡಲು ಅಧಿಕಾರ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಚನ್ನಪಟ್ಟಣದಲ್ಲಿಇಂದು (ಮಂಗಳವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿಕೆ, ಸಿ.ಪಿ.ಯೋಗೇಶ್ವರ್ ಈಗ ಮಂತ್ರಿಯಾದರು. ಪೊಗದಸ್ತಾಗಿ ಕೆಲಸ ಮಾಡಲು ಅನುಕೂಲವಾಯ್ತು. ಪ್ರಾಮಾಣಿಕ ಅಧಿಕಾರಿಗಳ ಮೂಲಕ ಕೆಲಸ ಮಾಡಲಿ. ಅವರೇ ಹೆಸರು ಪಡೆಯಲಿ ಎಂದರು.
ನನಗೆ ಬರೋಬ್ಬರಿ 3 ಕೋಟಿ ರೂ. ಆಫರ್ ಬಂದಿತ್ತು: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ
ಸಿ.ಪಿ.ಯೋಗೇಶ್ವರ್ ನನಗೆ ವೈಯಕ್ತಿಕವಾಗಿ ಸ್ನೇಹಿತರು. ಕಾರ್ಯಕರ್ತರ ಕುತ್ತಿಗೆ ಕೊಯ್ದು ಸ್ನೇಹ ಉಳಿಸಿಕೊಳ್ಳಲಾಗಿಲ್ಲ. ಆದರೆ, ವೈಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ. ಸಿಎಂ ಬಿ.ಎಸ್.ಯಡಿಯೂರಪ್ಪನವರೂ ನನಗೆ ಸ್ನೇಹಿತರು ಎಂದು ಮಾಜಿ ಸಿಎಂ H.D.ಕುಮಾರಸ್ವಾಮಿ ಹೇಳಿದರು.
ರಾಜಕಾರಣಕ್ಕೆ ಬಂದಾಗಿನಿಂದ ಮಂತ್ರಿಗಳನ್ನ ನೋಡಿದ್ದೇನೆ. ಮಂತ್ರಿಗೆ ಏನ್ ಕೊಂಬಿರುತ್ತಾ? ರಾಜ್ಯದ ಜನರು ನಮಗೆ ದೆಹಲಿಯನ್ನೂ ತೋರಿಸಿದ್ದಾರೆ. ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಲಿ. ಬಡವರ ಪರವಾಗಿ ಕೆಲಸ ಮಾಡಲಿ ಎಂದು ಪರೋಕ್ಷವಾಗಿ ಸಿ.ಪಿ.ಯೋಗೇಶ್ವರ್‌ಗೆ ಕುಟುಕಿದರು.