ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಲೂಟಿ ನಡೆಸುತ್ತಿದೆ: ಕೇಂದ್ರ ಸಚಿವ ಭಗವಂತ ಖೂಬಾ

By Govindaraj S  |  First Published Oct 21, 2023, 2:31 PM IST

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದ ಆಡಳಿತದ ನಡವಳಿಕೆ ಮಾತಿನ ದರ್ಪ, ಸಮಾಜ ಒಡೆಯುವ ಹುನ್ನಾರ ನಡೆಯುತ್ತಿದೆ. ಗ್ಯಾರಂಟಿ ಹೆಸರಿನ ಮೇಲೆ ಲೂಟಿ ನಡೆಯುತ್ತಿದ್ದು ರಾಜ್ಯದ ಬೊಕ್ಕಸ ಖಾಲಿ ಆಗಿದೆ. 


ಚಿಂಚೋಳಿ (ಅ.21): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರದ ಆಡಳಿತದ ನಡವಳಿಕೆ ಮಾತಿನ ದರ್ಪ, ಸಮಾಜ ಒಡೆಯುವ ಹುನ್ನಾರ ನಡೆಯುತ್ತಿದೆ. ಗ್ಯಾರಂಟಿ ಹೆಸರಿನ ಮೇಲೆ ಲೂಟಿ ನಡೆಯುತ್ತಿದ್ದು ರಾಜ್ಯದ ಬೊಕ್ಕಸ ಖಾಲಿ ಆಗಿದೆ. ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ತೆರಿಗೆ ಹೆಚ್ಚಳ ಕಳೆದ ಐದು ತಿಂಗಳಲ್ಲಿ ಒಂದೇ ಒಂದು ಕಾಮಗಾರಿಗಳ ಶಿಲಾನ್ಯಾಶ ನಡೆದಿಲ್ಲವೆಂದು ಕೇಂದ್ರ ಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ ತಾಲೂಕಿನ ಹಸರಗುಂಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ರವರು 3ನೇ ಬಾರಿಗೆ ದೇಶದ ಪ್ರಧಾನ ಮಂತ್ರಿ ಆಗುವ ಬಗ್ಗೆ ಜನರು ಮನಗಂಡಿದ್ದಾರೆ. ಆದರೆ ಕಾಂಗ್ರೆಸ ಪಕ್ಷದವರು 28  ಪಕ್ಷದ ಒಕ್ಕೂಟ ಕಟ್ಟಿಕೊಂಡು ಮೋದಿ ಹಟಾವೋ ದೇಶದಲ್ಲಿ ನಕರಾತ್ಮಕ ಪ್ರಯತ್ನಗಳು ನಡೆಯುತ್ತಿದೆ.ನಾನು ಬೀದರ ಲೋಕಸಭೆ ಕ್ಷೇತ್ರದಿಂದ ಎರಡು ಸಲ ಸಂಸದರಾಗಲು ನಿಮ್ಮ ಮತಗಳೇ ಕಾರಣವಾಗಿವೆ. ನಾನು ಕೇಂದ್ರ ಸಚಿವರಾಗಲು ನಿವೆಲ್ಲರೂ ಕಾರಣರಾಗಿದ್ದೀರಿ. ಪ್ರಧಾನಮಂತ್ರಿ ನರೇಂದ್ರ ಮೋದಿಜೀರವರು ಜಾರಿಗೊಳಿಸಿದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರಿಗೆ ಸಾಕಷ್ಟು ಸವಲತ್ತುಗಳನ್ನು ಕೊಡಿಸಿದ್ದೇನೆ. 

Latest Videos

undefined

ಕಾಂಗ್ರೆಸ್ಸಿನಲ್ಲಿ ಯಾವುದೇ ಬಂಡಾಯ ಇಲ್ಲ: ಶಾಮನೂರ ಶಿವಶಂಕರಪ್ಪ

ಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ನನಗೆ ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕೆಂದು ಸಚಿವ ಭಗವಂತ ಖುಬಾ ಹೇಳಿದರು. ಕಾಂಗ್ರೆಸ ಪಕ್ಷದ ಗ್ಯಾರಂಟಿಗಳಿಂದ ಜನರ ಹೊಟ್ಟೆ ತುಂಬುತ್ತಿಲ್ಲ ಸರಿಯಾಗಿ ನಿದ್ರೆ ಮಾಡಲು ಆಗದೇ ಹಾಳು ಮಾಡಿದೆ. ರಾಜ್ಯ ಸರಕಾರ ಅಧಿಕಾರಿಗಳ ಅಧಿಕಾರ ದುರ್ಬಳಕೆ ಮಾಡಿಕೊಂಡು ದಬ್ಬಾಳಿಕೆ ಹೆಚ್ಚುತ್ತಿದೆ ಬಿಜೆಪಿ ಕಾರ್ಯಕರ್ತರು ಯಾರು ಹೆದರಬೇಕಾಗಿಲ್ಲ ಎಂದು ಕೇಂದ್ರ ಸಚಿವ ಭಗವಂತ ಖುಬಾ ಹೇಳಿದರು. ಶಾಸಕ ಡಾ. ಅವಿನಾಶ ಜಾಧವ್ ಮಾತನಾಡಿದರು. ತಾಲೂಕ ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ,ಸಂಜಯ ಮಿಸ್ಕಿನ,ಕೆ.ಎಮ.ಬಾರಿ,ಶ್ರೀಮಂತ ಕಟ್ಟಿಮನಿ,.ಭೀಮಶೆಟ್ಟಿ ಮುರುಡಾ,ಮಲ್ಲಯ್ಯ ಸ್ವಾಮಿ,ಭೀಮಶೆಟ್ಟಿ ಮುಕ್ಕಾ,ಶಶಿಧರ ಸೂಗೂರು,ಉದಯಕುಮಾರ ಸಿಂಧೋಲ ಇನ್ನಿತರಿದ್ದರು.

click me!