ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ತುಘಲಕ್‌ ಆಡಳಿತ: ಕೇಂದ್ರ ಸಚಿವ ಭಗವಂತ ಖುಬಾ

By Kannadaprabha News  |  First Published Mar 21, 2024, 2:14 PM IST

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ತುಘಲಕ್ ಆಡಳಿತ ನಡೆಯುತ್ತಿದೆ. ಶಾಂತಿಯ ತೋಟದಂತೆ ಇರುವಂತಹ ರಾಜ್ಯವನ್ನು ಅಶಾಂತಿ ನಾಡನ್ನಾಗಿ ಮಾಡಿದೆ. ಕುಡಿವ ನೀರಿನ ಅಭಾವ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಟೀಕಿಸಿದರು.
 


ಚಿಂಚೋಳಿ (ಮಾ.21): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ತುಘಲಕ್ ಆಡಳಿತ ನಡೆಯುತ್ತಿದೆ. ಶಾಂತಿಯ ತೋಟದಂತೆ ಇರುವಂತಹ ರಾಜ್ಯವನ್ನು ಅಶಾಂತಿ ನಾಡನ್ನಾಗಿ ಮಾಡಿದೆ. ಕುಡಿವ ನೀರಿನ ಅಭಾವ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ ಎಂದು ಕೇಂದ್ರ ಸಚಿವ ಭಗವಂತ ಖುಬಾ ಟೀಕಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲ ಆವರಿಸಿದೆ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನಿವಾಸ ಕೃಷ್ಣಗೃಹದಲ್ಲಿ ನೀರಿನ ಅಭಾವ ಇದೆ. ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತಿದೆ. 

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್‌ ಎಂಬ ಘೋಷಣೆ ಹಾಕಿದ ವ್ಯಕ್ತಿಯ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥಿಸಿಕೊಂಡಿದ್ದಾರೆ. ಅವರಿಗೆ ನಾಚಿಕೆ ಆಗಬೇಕು ಎಂದರು. ನಾನು ಬೀದರ್‌ ಲೋಕಸಭೆ ಮತಕ್ಷೇತ್ರದ ಎಲ್ಲರ ಬೆಂಬಲಿತ ಅಭ್ಯರ್ಥಿಯಾಗಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನ್ನ ಸಾಧನೆ ನೋಡಿ ಮತ್ತೊಮ್ಮೆ ಟಿಕೆಟ್‌ ನೀಡಿರುವುದಕ್ಕೆ ಬಹಳ ಸಂತಸವಾಗಿದೆ. ಶಾಸಕರಾದ ಶರಣು ಸಲಗರ, ಪ್ರಭು ಚವ್ಹಾಣ, ಡಾ.ಅವಿನಾಶ ಜಾಧವ್ ನನಗೆ ಬೆಂಬಲ ನೀಡಿದ್ದಾರೆ ಎಂದರು.

Latest Videos

undefined

ಚಿಂಚೋಳಿ ಬಿಜೆಪಿ ಶಾಸಕರಿಗೆ ಸರಕಾರದಲ್ಲಿ ಸಹಕಾರ ಸಿಗುತ್ತಿಲ್ಲ. ಭೀಕರ ಬಿಸಿಲಿನಿಂದ ಅನೇಕ ಗ್ರಾಮಗಳಲ್ಲಿ ಜನರು ಕುಡಿವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಅನುದಾನ ಇಲ್ಲ. ಸರಕಾರ ಕೂಡಲೇ ಜಿಲ್ಲಾಧಿಕಾರಿಗಳ ಖಾತೆಗೆ ಅನುದಾನ ನೀಡಬೇಕು. ಚುನಾವಣೆಯಲ್ಲಿ ತಾಲೂಕಿನ ಅಧಿಕಾರಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದರೆ ಸಹಿಸುವುದಿಲ್ಲ. ನಿಮ್ಮ ಸರ್ಕಾರಿ ನೌಕರಿ ಆತಂಕದಲ್ಲಿ ಬರುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪ್ರಧಾನಿ ಮೋದಿ ಸುಳ್ಳಿನಿಂದಲೇ ಬಿಜೆಪಿಗರು ಸೋಲ್ತಾರೆ: ಸಚಿವ ಮಧು ಬಂಗಾರಪ್ಪ

ಮಾಜಿ ಶಾಸಕ ರಾಜಶೇಖರ ಹುಮನಾಬಾದ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಪುತ್ರ ಸಾಗರ ಖಂಡ್ರೆ ಸ್ಪರ್ಧಿಸಿದರೂ ನಾನು ೨ ಲಕ್ಷ ಮತಗಳಿಂದ ಜಯಸಾಧಿಸುವೆ ಎಂದು ಸಚಿವ ಭಗವಂತ ಖುಬಾ ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ಡಾ. ಅವಿನಾಶ ಜಾಧವ್, ಶಶಿಕಲಾ ತೆಂಗಳಿ, ಜಗನ್ನಾಥ ಪಾಟೀಲ, ವಿಜಯಕುಮಾರ ಚೆಂಗಟಿ, ಗಿರಿರಾಜ ನಾಟೀಕಾರ ಇನ್ನಿತರರು ಉಪಸ್ಥಿತರಿದ್ದರು.

click me!