ಕಾಂಗ್ರೆಸ್ಸಿಗರಿಗೇ ಮೌಲ್ಯವಿಲ್ಲ, ಇನ್ನು ಅವರ ಗ್ಯಾರಂಟಿ ಕಾರ್ಡ್‌ಗಿದೆಯೇ?: ಅಮಿತ್‌ ಶಾ

Published : Apr 29, 2023, 09:26 AM IST
ಕಾಂಗ್ರೆಸ್ಸಿಗರಿಗೇ ಮೌಲ್ಯವಿಲ್ಲ, ಇನ್ನು ಅವರ ಗ್ಯಾರಂಟಿ ಕಾರ್ಡ್‌ಗಿದೆಯೇ?: ಅಮಿತ್‌ ಶಾ

ಸಾರಾಂಶ

ಕಾಂಗ್ರೆಸ್‌ ನಾಯಕರು ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್‌ ಕೊಟ್ಟರೆ ಸಮಸ್ಯೆ ಇಲ್ಲ. ಯಾಕೆಂದರೆ ಮತ್ತೆ ಆ ಪಕ್ಷ ಅಧಿಕಾರಕ್ಕಂತೂ ಬರುವುದಿಲ್ಲ. ಹಾಗಿದ್ದಾಗ ಅವರ ಮಾತುಗಳಿಗೆ, ಅವರು ಕೊಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಮಹತ್ವವೂ ಇಲ್ಲ, ಮೌಲ್ಯವೂ ಇಲ್ಲ: ಅಮಿತ್‌ ಶಾ. 

ದಾವಣಗೆರೆ/ಹುಬ್ಬಳ್ಳಿ/ಲಕ್ಷ್ಮೇಶ್ವರ/ಹಾವೇರಿ(ಏ.29):  ಕಾಂಗ್ರೆಸ್‌ನವರಿಗೇ ಮೌಲ್ಯವಿಲ್ಲ ಎಂದಾಗ ಅವರು ನೀಡುವ ಗ್ಯಾರಂಟಿ ಕಾರ್ಡ್‌ಗಳಿಗಾದರೂ ಏನು ಮೌಲ್ಯವಿದ್ದೀತು? ಅವರು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ, ತುಷ್ಟೀಕರಣ, ಪರಿವಾರ, ಧಂಗೆಗಳು ಹೆಚ್ಚಾಗುವುದು ನಿಶ್ಚಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಹಾವೇರಿ ಜಿಲ್ಲೆ ಹಾನಗಲ್ಲ ಕ್ಷೇತ್ರದ ಅಕ್ಕಿಆಲೂರು, ಗದಗದ ಲಕ್ಷ್ಮೇಶ್ವರ, ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಶುಕ್ರವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್‌ ವಿರುದ್ಧ ತೀವ್ರ ಹರಿಹಾಯ್ದರು.

ಕಾಂಗ್ರೆಸ್‌ ನಾಯಕರು ಮನೆ ಮನೆಗೆ ಹೋಗಿ ಗ್ಯಾರಂಟಿ ಕಾರ್ಡ್‌ ನೀಡುತ್ತಿದ್ದಾರೆ. ಅವರು ಗ್ಯಾರಂಟಿ ಕಾರ್ಡ್‌ ಕೊಟ್ಟರೆ ಸಮಸ್ಯೆ ಇಲ್ಲ. ಯಾಕೆಂದರೆ ಮತ್ತೆ ಆ ಪಕ್ಷ ಅಧಿಕಾರಕ್ಕಂತೂ ಬರುವುದಿಲ್ಲ. ಹಾಗಿದ್ದಾಗ ಅವರ ಮಾತುಗಳಿಗೆ, ಅವರು ಕೊಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಮಹತ್ವವೂ ಇಲ್ಲ, ಮೌಲ್ಯವೂ ಇಲ್ಲ. ಇದು ಗೊತ್ತಿದ್ದೇ ಅವರು ಹೋದಲ್ಲೆಲ್ಲ ಗ್ಯಾರಂಟಿ ಕಾರ್ಡ್‌ ಕೊಡುತ್ತಿದ್ದಾರೆ. ಕಾಂಗ್ರೆಸ್ಸಿಗರಂತೆ ನಾವು ಗ್ಯಾರಂಟಿ ಕಾರ್ಡ್‌, ಮಾತು ಕೊಡಲು ಸಾಧ್ಯವಿಲ್ಲ. ಯಾಕೆಂದರೆ ನಾವು ಮತ್ತೆ ಅಧಿಕಾರಕ್ಕೆ ಬರುವವರು ಎಂದರು.

ಕಾಂಗ್ರೆಸ್ಸಿಗರು ಮೋದಿಗೆ ಬೈದಷ್ಟೂ ಬಿಜೆಪಿ ಹೆಚ್ಚು ಗೆಲ್ಲುತ್ತೆ: ಅಮಿತ್‌ ಶಾ

ಲಿಂಗಾಯತ ವಿರೋಧಿ: 

ಕಾಂಗ್ರೆಸ್‌ ಪಕ್ಷ ಲಿಂಗಾಯತ ವಿರೋಧಿಯಾಗಿದೆ, ಈ ಹಿಂದೆ ತಮ್ಮ ಪಕ್ಷದ ಲಿಂಗಾಯತ ಮುಖ್ಯಮಂತ್ರಿಗಳನ್ನು ಹೇಗೆ ನಡೆಸಿಕೊಂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಈಗ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟಎಂದು ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು, ಬೊಮ್ಮಾಯಿ ಅವರ ಬಗ್ಗೆ ಕೀಳಾಗಿ ಹೇಳಿಕೆ ನೀಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಶಾ ಹೇಳಿದರು.

ಜತೆಗೆ, ಮಹದಾಯಿ ವಿಷಯವಾಗಿ ಸರಿಯಾಗಿ ಸ್ಪಂದಿಸದ, ರೈತರ ಮೇಲೆ ಲಾಠಿಚಾಜ್‌ರ್‍ ಮಾಡಿಸಿದ, ಗೋಲಿಬಾರ್‌ ಮಾಡಿಸಿದ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕೋ? ಆ ಸಮಸ್ಯೆ ಬಗೆಹರಿಸಿರುವ ಬಿಜೆಪಿ ಆಡಳಿತಕ್ಕೆ ಬರಬೇಕೋ ಎಂಬುದನ್ನು ಮತದಾರರೇ ತೀರ್ಮಾನಿಸಬೇಕು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್