ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ; ಬಿಜೆಪಿಯಿಂದ 27 ಶೆಟ್ಟರ್‌ ಬೆಂಬಲಿಗರ ಉಚ್ಚಾಟನೆ

By Kannadaprabha News  |  First Published Apr 29, 2023, 9:24 AM IST

ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದ ಬೆನ್ನಲ್ಲೇ ಇದೀಗ ಅವರನ್ನು ಬೆಂಬಲಿಸಿರುವ 27 ಮುಖಂಡರನ್ನು ಪಕ್ಷ ಉಚ್ಛಾಟಿಸಿದೆ. ಆದರೆ, ಪಕ್ಷಕ್ಕೆ ರಾಜೀನಾಮೆ ನೀಡಿರುವ ಕೆಲವರನ್ನೂ ಉಚ್ಛಾಟಿಸಿರುವುದು ವಿಶೇಷ.


ಹುಬ್ಬಳ್ಳಿ (ಏ.29) : ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿ ತೊರೆದ ಬೆನ್ನಲ್ಲೇ ಇದೀಗ ಅವರನ್ನು ಬೆಂಬಲಿಸಿರುವ 27 ಮುಖಂಡರನ್ನು ಪಕ್ಷ ಉಚ್ಛಾಟಿಸಿದೆ. ಆದರೆ, ಪಕ್ಷಕ್ಕೆ ರಾಜೀನಾಮೆ ನೀಡಿರುವ ಕೆಲವರನ್ನೂ ಉಚ್ಛಾಟಿಸಿರುವುದು ವಿಶೇಷ.

ಸೆಂಟ್ರಲ್‌ ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಮಹೇಶ ಟೆಂಗಿನಕಾಯಿ ಇದ್ದಾರೆ. ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು ಎಂಬ ಹಿನ್ನೆಲೆಯಲ್ಲಿ ಮುಖಂಡರು, ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ನಿಗಮ ಮಂಡಳಿಗಳ ಮಾಜಿ ಅಧ್ಯಕ್ಷರು ಸೇರಿ 27 ಜನರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

Latest Videos

undefined

ಈ ಚುನಾವಣೆ ಶೆಟ್ಟರ್‌ ವರ್ಸಸ್‌ ಜೋಶಿ ಎಂಬಂತಾಗಿ : ಶೆಟ್ಟರ್ ವಿಶ್ಲೇಷಣೆ

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ(Hubballi-dharwad central assembly constituency)ದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ ಶೆಟ್ಟರ್‌(Jagadish shettar) ಅವರ ಜೊತೆಗೆ ಗುರುತಿಸಿಕೊಂಡ ಹಿನ್ನೆಲೆ ಮತ್ತು ಬಿಜೆಪಿಯಲ್ಲೇ ಇದ್ದುಕೊಂಡು ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ(Mahesh tenginakayi) ಅವರನ್ನು ಬೆಂಬಲಿಸದ ಕಾರಣ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ (ಉಚ್ಚಾಟನೆಗೂ ಮೊದಲೇ ರಾಜೀನಾಮೆ ಕೊಟ್ಟಿದ್ದರು),

ಪಾಲಿಕೆಯ ಮಾಜಿ ಸದಸ್ಯ ಮಹೇಶ ಬುರ್ಲಿ, ಶಂಕರ ಸುಂಕದ, ಮಂಜು ದಲಭಂಜನ, ವಿರೂಪಾಕ್ಷಿ ರಾಯನಗೌಡ್ರ, ನಾಗರಾಜ ಪಟ್ಟಣ, ವಿಜಯಲಕ್ಷ್ಮೀ ತಿಮ್ಮೊಲೆ, ಮಹೇಶ ಪತ್ತಾರ, ಭಾರತಿ ಟಪಾಲ, ಶೀಲನ್‌ ಕ್ಸೇವಿಯರ್‌, ಇಮ್ತಿಯಾಜ್‌ ಮುಲ್ಲಾ, ರವಿ ರಾಮದುರ್ಗ, ರಮಾನಾಥ ಶೆಣೈ, ಶಿವು ಕೊಪ್ಪದ, ಶಿವರುದ್ರಪ್ಪ ಬಡಿಗೇರ, ವಿನಾಯಕ ಜಿತೂರಿ, ನಾಶೀರ ತಂಬೂರಿ, ಬಸಣ್ಣ ಹೆಬ್ಬಳ್ಳಿ, ಹನುಮಂತಪ್ಪ ಚಲವಾದಿ, ರಾಧಾ ಪಟ್ಟಣಶೆಟ್ಟಿ, ರಾಜು ವಂದಾಲ, ಯಮನವ್ವ ವಂದಾಲ, ವಿವೇಕ ಹಳ್ಳಿ, ಜಯಶ್ರೀ ನಿಂಬರಗಿ, ಹಟೇಲಸಾಬ್‌ ಮುಲ್ಲಾ ಹಾಗೂ ಸದಾಶಿವ ಚೌಶೆಟ್ಟಿಅವರನ್ನು ಆರು ವರ್ಷ ಬಿಜೆಪಿಯಿಂದ ಉಚ್ಛಾಟಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೈನ ಸಮುದಾಯ ಈ ಬಾರಿ ನನ್ನ ಕೈ ಬಲಪಡಿಸಲಿದೆ: ಸವದಿ ವಿಶ್ವಾಸ

click me!