ಯಡಿಯೂರಪ್ಪ ತಂದ ರೈತ ಯೋಜನೆಗಳಿಂದ ಕೇಂದ್ರದಲ್ಲೂ ಬಿಜೆಪಿ ಅಧಿಕಾರಕ್ಕೆ: ಅಮಿತ್‌ ಶಾ

By Kannadaprabha News  |  First Published Feb 12, 2023, 6:00 AM IST

ಪುತ್ತೂ​ರಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋ​ತ್ಸವ ಕಾರ್ಯ​ಕ್ರ​ಮ​ದಲ್ಲಿ ಯಡಿ​ಯೂ​ರಪ್ಪ ಅವರ ಆಡ​ಳಿ​ತದ ಕುರಿತು ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ ಅಮಿತ್‌ ಶಾ, ರೈತರ ಏಳಿಗೆಗೆ ಯಡಿ​ಯೂ​ರಪ್ಪ ಅವರ ಕೊಡುಗೆ ಅಪಾರ. ಅವರ ನೇತೃ​ತ್ವ​ದಲ್ಲಿ ರೈತರು ಅಭಿ​ವೃದ್ಧಿ ಕಂಡಿ​ದ್ದಾ​ರೆ.


ಪುತ್ತೂರು (ಫೆ.12): ಮಾಜಿ ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರ​ಪ್ಪ​ ಅವರನ್ನು ಬಿಜೆ​ಪಿ​ಯಲ್ಲಿ ಕಡೆ​ಗ​ಣಿ​ಸ​ಲಾ​ಗು​ತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಮ್ಮ ದಕ್ಷಿಣ ಕನ್ನಡ ಭೇಟಿ ವೇಳೆ ಪರೋಕ್ಷವಾಗಿ ಪ್ರತಿಪಾದಿಸಿದ್ದು, ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಕರ್ನಾಟಕದಲ್ಲಿ ಜಾರಿಗೆ ತಂದ ರೈತಪರ ಕಾರ್ಯಕ್ರಮಗಳಿಂದಾಗಿಯೇ ಕೇಂದ್ರದಲ್ಲಿ ಬಿಜೆಪಿ ಸರ್ಕಾರಕ್ಕೆ ಅಧಿಕಾರಕ್ಕೆ ಬರಲು ಸಹಾಯವಾಯಿತು ಎಂದು ಗುಣಗಾನ ಮಾಡಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದ ಕಾರ್ಯ​ಕ್ರ​ಮ​ಗ​ಳಲ್ಲಿ ಶನಿವಾರ ಇಡೀ ದಿನ ಯಡಿ​ಯೂ​ರಪ್ಪ ಅವರ ಜತೆ​ಯಲ್ಲೇ ಪ್ರಯಾ​ಣಿ​ಸಿದ ಅಮಿತ್‌ ಶಾ, ಎಲ್ಲ ಕಾರ್ಯಕ್ರಮದಲ್ಲೂ ಯಡಿಯೂರಪ್ಪ ಅವರ ಕೊಡುಗೆಗಳನ್ನು ಶ್ಲಾಘಿಸಿದರು.

ಪುತ್ತೂ​ರಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋ​ತ್ಸವ ಕಾರ್ಯ​ಕ್ರ​ಮ​ದಲ್ಲಿ ಯಡಿ​ಯೂ​ರಪ್ಪ ಅವರ ಆಡ​ಳಿ​ತದ ಕುರಿತು ಮೆಚ್ಚುಗೆ ವ್ಯಕ್ತ​ಪ​ಡಿ​ಸಿದ ಅಮಿತ್‌ ಶಾ, ರೈತರ ಏಳಿಗೆಗೆ ಯಡಿ​ಯೂ​ರಪ್ಪ ಅವರ ಕೊಡುಗೆ ಅಪಾರ. ಅವರ ನೇತೃ​ತ್ವ​ದಲ್ಲಿ ರೈತರು ಅಭಿ​ವೃದ್ಧಿ ಕಂಡಿ​ದ್ದಾ​ರೆ. ರೈತ ಪರ ಕಾರ್ಯ​ಕ್ರ​ಮ​ಗ​ಳಿ​ಗಾಗಿ ಇಡೀ ದೇಶದ ಅನ್ನ​ದಾ​ತರು ಯಡಿ​ಯೂ​ರಪ್ಪ ಅವ​ರನ್ನು ಸ್ಮರಿ​ಸು​ತ್ತಾ​ರೆ. ಅವ​ರ ಆಡ​ಳಿತ ವೈಖ​ರಿ​ಗಳಿಂದಾಗಿ ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರಲು ಸಾಧ್ಯ​ವಾ​ಯಿತು ಎಂದು ಶ್ಲಾಘಿಸಿದರು.

Tap to resize

Latest Videos

ಉ.ಕ ಬಳಿಕ ಕರಾವಳಿಗಿಂದು ಅಮಿತ್‌ ಶಾ: ಬಿಜೆಪಿ ಪ್ರಮುಖರ ಜೊತೆ ಚುನಾವಣಾ ಚರ್ಚೆ

ಅಮಿತ್‌ ಶಾ ಅವರ ಉತ್ತರ ಕರ್ನಾಟಕ ಹಾಗೂ ಮಂಡ್ಯ ಭೇಟಿ ವೇಳೆ ಯಡಿಯೂರಪ್ಪ ದೂರ​ವಿ​ದ್ದದ್ದು, ತೀವ್ರ ಚರ್ಚೆಗೆ ಕಾರ​ಣ​ವಾ​ಗಿತ್ತು. ಇದು ಬಿಜೆಪಿ ಪಾಳೆಯದಲ್ಲಿ ಯಡಿಯೂರಪ್ಪ ಅವರನ್ನು ವರಿಷ್ಠರು ಮೂಲೆ​ಗುಂಪು ಮಾಡುತ್ತಿದ್ದಾ​ರೆಂಬ ಪುಕಾರು ಸೃಷ್ಟಿಗೆ ಕಾರ​ಣ​ವಾ​ಗಿತ್ತು. ಕಾಂಗ್ರೆಸ್‌ ಸೇರಿ ಇತರೆ ವಿಪಕ್ಷಗಳು ಕೂಡ ಇದನ್ನೇ ಮುಂದಿ​ಟ್ಟು​ಕೊಂಡು ರಾಜ್ಯದ ಪ್ರಭಾವಿ ಲಿಂಗಾ​ಯತ ನಾಯ​ಕ​ನನ್ನು ಬಿಜೆಪಿ ಮೂಲೆ​ಗುಂಪು ಮಾಡು​ತ್ತಿದೆ ಎಂಬ ಆರೋಪ ಮಾಡಿ​ದ್ದವು. ಈ ಹಿನ್ನೆ​ಲೆ​ಯಲ್ಲಿ ದಕ್ಷಿಣ ಕನ್ನಡ ಭೇಟಿ ವೇಳೆ ಶಾ ಅವರು ಯಡಿ​ಯೂ​ರಪ್ಪ ಅವ​ರನ್ನು ಹೋದ​ಲೆಲ್ಲ ಹತ್ತಿ​ರ​ದಲ್ಲೇ ಇಟ್ಟು​ಕೊ​ಳ್ಳುವ ಮೂಲ​ಕ ವಿರೋ​ಧಿ​ಗ​ಳಿಗೆ ಸೂಕ್ತ ಸಂದೇಶ ರವಾ​ನಿ​ಸುವ ಪ್ರಯತ್ನ ಮಾಡಿ​ದ​ರು ಎಂದು ಹೇಳಲಾಗಿದೆ.

ಕಾಪ್ಟ​ರ್‌​ನಲ್ಲೂ ಜತೆ ಜತೆ: ಮುಖ್ಯಮಂತ್ರಿ ಬೊಮ್ಮಾಯಿ ಜತೆ ಈಶ್ವರಮಂಗಲಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸುವಾಗ ಅಮಿತ್‌ ಶಾ ಅವರು ಯಡಿಯೂರಪ್ಪರನ್ನೂ ಜತೆಯಲ್ಲಿ ಕರೆಸಿಕೊಂಡಿದ್ದರು. ಈಶ್ವರಮಂಗಲದಲ್ಲಿ ಅಮರಗಿರಿ ಭಾರತ ಮಾತೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲೂ ಶಾ ಮತ್ತು ಯಡಿಯೂರಪ್ಪ ಜತೆ ಜತೆ​ಯಾ​ಗಿಯೇ ಭಾಗಿಯಾಗಿದ್ದರು. ಅಲ್ಲಿ ಸೇರಿದ ಮಂದಿ ಯಡಿಯೂರಪ್ಪಗೆ ಸ್ವಾಗತ ಕೋರಿದಾಗ ಭಾರೀ ಜೈಕಾರ ಮೊಳ​ಗಿ​ದ್ದು ವಿಶೇ​ಷ​ವಾ​ಗಿ​ತ್ತು.

ಸಂಸದೆ ಸುಮಲತಾ ಕಾಂಗ್ರೆಸ್‌ ಪಕ್ಷ ಸೇರಲು ಅಭ್ಯಂತರವಿಲ್ಲ: ಡಿ.ಕೆ.ಶಿವಕುಮಾರ್‌

ತರು​ವಾಯ ಅಮಿತ್‌ ಶಾ-ಬಿಎಸ್‌ವೈ ಜೋಡಿ ಪುತ್ತೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದು, ಪುತ್ತೂರಿನಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ವರ್ಷಾಚರಣೆಗೆ ಚಾಲನೆ ಸಂದರ್ಭದಲ್ಲೂ ವೇದಿಕೆಯಲ್ಲಿ ಜತೆಯಾಗಿಯೇ ಕಾಣಿ​ಸಿ​ಕೊಂಡರು. ಕಾರ್ಯ​ಕ್ರಮ ಮುಗಿಸಿ ಶಾ ಅವರು ಸಿಎಂ, ಯಡಿ​ಯೂ​ರಪ್ಪ ಜತೆಗೇ ಕಾಪ್ಟ​ರ್‌​ನ​ಲ್ಲಿ ಮಂಗಳೂರಿಗೆ ತೆರ​ಳಿ​ದರು.

click me!