ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾರ ಪ್ರಾಣ ಪ್ರತಿಷ್ಠ ಕಾರ್ಯಕ್ರಮಕ್ಕೆ ಇಡೀ ದೇಶದ ರಾಮಭಕ್ತರು ನೀಡುತ್ತಿರುವ ಸ್ಪಂದನೆಯನ್ನು ನೋಡಿ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜ.03): ಗೋದ್ರಾ ರೀತಿ ಷಡ್ಯಂತ್ರ ನಡೆಸಲು ಕಾಂಗ್ರೆಸ್‌ನಲ್ಲಿ ತಯಾರಿ ಮಾಡಿಕೊಂಡಿರಬಹುದು ಎನ್ನುವ ಅನುಮಾನ ಬರುತ್ತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
undefined
ಗೋದ್ರಾ ಮಾದರಿಯಲ್ಲಿ ಘಟನೆ ನಡೆಯುತ್ತದೆ ಎನ್ನುವ ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಇಂದು(ಬುಧವಾರ) ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಎ.ನಾರಾಯಣಸ್ವಾಮಿ ಅವರು, ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾರ ಪ್ರಾಣ ಪ್ರತಿಷ್ಠ ಕಾರ್ಯಕ್ರಮಕ್ಕೆ ಇಡೀ ದೇಶದ ರಾಮಭಕ್ತರು ನೀಡುತ್ತಿರುವ ಸ್ಪಂದನೆಯನ್ನು ನೋಡಿ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದು ದೇಶದ ಆತ್ಮಗೌರವದ ಕಾರ್ಯಕ್ರಮವಾಗಿದೆ ಅದಕ್ಕೆ ವಿರುದ್ಧವಾಗಿ ಬಿ.ಕೆ.ಹರಿಪ್ರಸಾದ್ ಗೋದ್ರಾ ಪ್ರಕರಣವನ್ನು ಪ್ರಸ್ತಾಪಿಸುತ್ತಿದ್ದಾರೆ. ಇದರಿಂದ ಗೋದ್ರಾ ಹತ್ಯಾಕಾಂಡದಲ್ಲಿ ಕಾಂಗ್ರೆಸ್ ಕೈವಾಡ ಇದೆ ಎನ್ನುವುದು ಅವರ ಹೇಳಿಕೆಯಿಂದ ಗೊತ್ತಾಗುತ್ತಿದೆ. ಇಂತಹ ಷಡ್ಯಂತ್ರವನ್ನು ಕಾಂಗ್ರೆಸಿಗರು ಮಾಡಿರಬಹುದು ಎಂದು ಹೇಳಬಯಸುತ್ತೇನೆ ಎಂದರು.
ಭಯೋತ್ಪಾದಕರನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ರಾಜಕಾರಣ: ಸಿ.ಟಿ.ರವಿ
ಪ್ರತಿ ರಾಜ್ಯದಿಂದ ಬರುವ ನಾಗರೀಕರಿಗೆ ರಕ್ಷಣೆ ಕೊಡುವ ಜವಾಬ್ದಾರಿ ಆಯಾ ಸರ್ಕಾರಗಳದ್ದಾಗಿರುತ್ತದೆ. ದೇಶದ ರಾಮ ಭಕ್ತರಿಗೆ ಯಾರ ರಕ್ಷಣೆ ಅವಶ್ಯಕತೆ ಇಲ್ಲ ಎಂದರು.