ವಡಗಾಂವದಿಂದ ಆರಂಭಗೊಂಡ ರೋಡ್ ಶೋ 4 ಕಿಮೀ ವರೆಗೆ ತೆರಳಿತು. ಅಮಿತ್ ಶಾ ಅವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಸಾಥ್ ನೀಡಿದರು. ರೋಡ್ ಶೋನಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅಮಿತ್ ಶಾ ಅವರು ಜೈ ಬಜರಂಗಿ ಎಂದು ಘೋಷಣೆ ಕೂಗಿದರು.
ಬೆಳಗಾವಿ(ಮೇ.08): ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಪರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಭಾನುವಾರ ಮೆಗಾ ರೋಡ್ ಶೋ ನಡೆಸಿದರು. ಅಪಾರ ಸಂಖ್ಯೆಯ ಬಿಜೆಪಿ ಬೆಂಬಲಿಗರು, ಕಾರ್ಯಕರ್ತರು ಅಮಿತ್ ಶಾ ಅವರ ವಾಹನವನ್ನು ಸುತ್ತುವರಿದು ಮೆರವಣಿಗೆಯಲ್ಲಿ ತೆರಳಿದರು. ಅವರನ್ನು ಸ್ವಾಗತಿಸಲು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರತ್ತ ಶಾ ಕೈ ಬೀಸಿದರು. ರೋಡ್ ಶೋ ಮಾರ್ಗದುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಬಿಜೆಪಿ ಕಾರ್ಯಕರ್ತರು ಹೂವಿನ ಸುರಿಮಳೆ ಗೈದು ಅಮಿತ್ ಶಾ ಅವರನ್ನು ಸ್ವಾಗತಿಸಿದರು. ಈ ರೋಡ್ ಶೋ ನಲ್ಲಿ ಸುಮಾರು 20 ಸಾವಿರ ಜನರು ಬೈಕ್ ರಾರಯಲಿಯನ್ನು ನಡೆಸಿರುವುದು ಗಮನ ಸೆಳೆಯಿತು.
ವಡಗಾಂವದಿಂದ ಆರಂಭಗೊಂಡ ರೋಡ್ ಶೋ 4 ಕಿಮೀ ವರೆಗೆ ತೆರಳಿತು. ಅಮಿತ್ ಶಾ ಅವರಿಗೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಸಾಥ್ ನೀಡಿದರು. ರೋಡ್ ಶೋನಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ಪಾಲ್ಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅಮಿತ್ ಶಾ ಅವರು ಜೈ ಬಜರಂಗಿ ಎಂದು ಘೋಷಣೆ ಕೂಗಿದರು.
ಕೆಲವರ ಕೈಗೊಂಬೆಯಾದ ಬಿಜೆಪಿ: ಜಗದೀಶ ಶೆಟ್ಟರ್
ಬಳಿಕ ಮಾತನಾಡಿದ ಶಾ ಅವರು, ಪಕ್ಷದ ಅಭ್ಯರ್ಥಿ ಅಭಯ ಪಾಟೀಲ ಅವರನ್ನು ಪ್ರಚಂಡ ಬಹುಮತಗಳ ಅಂತರದಿಂದ ಗೆಲುವು ದಾಖಲಿಸುವುದು ಖಚಿತ. ಕಳೆದ ಚುನಾವಣೆಗಿಂತ ಈ ಬಾರಿ ಲೀಡ್ ಎರಡು ಪಟ್ಟು ಹೆಚ್ಚಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಂಬರುವ 2024ರಲ್ಲಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ, ಸುಭದ್ರ ಹಾಗೂ ಡಬಲ… ಎಂಜಿನ್ ಸರ್ಕಾರ ನಡೆಸಲು ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಇದೀಗ ನಡೆಯುತ್ತಿರುಯವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಯಲ್ಲಿರುವ ತಮ್ಮ ಎಲ್ಲ ಸಂಬಂಧಿಕರೂ ಬಿಜೆಪಿ ಅಭ್ಯರ್ಥಿಗಳಿಗೇ ಮತದಾನ ಮಾಡುವಂತೆ ತಿಳಿಹೇಳಿ ಎಂದು ಮತಯಾಚನೆ ಮಾಡಿದರು. ರಾರಯಲಿಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಅಮಿತ್ ಶಾ, ಅಭಯ ಪಾಟೀಲ ಪರವಾಗಿ ಘೋಷಣೆ ಕೂಗಿದರು.