ಬಿಜೆಪಿ ಅಧಿಕಾರ ಇಲ್ಲದ ರಾಜ್ಯಗಳಿಗೆ ಮೋದಿ ಸರ್ಕಾರ ಅನುದಾನ ಕೊಡೋದಿಲ್ಲ; ಪ್ರಿಯಾಂಕಾ ಗಾಂಧಿ ವಾಗ್ದಾಳಿ

By Sathish Kumar KHFirst Published Apr 23, 2024, 5:47 PM IST
Highlights

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಿಕೆ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅನುದಾನ ಕೊಡುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದರು. 

ಚಿತ್ರದುರ್ಗ (ಏ.23): ಸಿದ್ದರಾಮಯ್ಯ ಬರ ಪರಿಹಾರದ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಒಂದು ರೂಪಾಯಿ ಕೊಟ್ಟಿಲ್ಲ. ಕಳಸಾಬಂಡೂರಿ ಯೋಜನೆ ಬಗ್ಗೆ ಅನುಮತಿ ಕೊಟ್ಟಿಲ್ಲ. ಭದ್ರಾ ಯೋಜನೆಗೆ ಹಣ ಕೊಟ್ಟಿಲ್ಲ. ಕರ್ನಾಟಕಕ್ಕೆ ಯಾಕೆ ಮೋದಿ  ಹೀಗೆ ಮಾಡ್ತಿದ್ದಾರೆ..?ಯಾವ ರಾಜ್ಯದಲ್ಲಿ ಅವರಿಗೆ ಅಧಿಕಾರ ಇರೋದಿಲ್ಲವೋ ಅಲ್ಲಿಗೆ ಹಣ ಕೊಡೋದಿಲ್ಲ. ಕೇವಲ ಬಿಜೆಪಿ ರಾಜ್ಯಗಳಿಗೆ ಮಾತ್ರ ಹಣ ಕೊಡ್ತಿದೆ ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದರು.

ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಅಜ್ಜಿ ಇಂದಿರಾಗಾಂಧಿ ಸಹ ಇದೇ ವೇದಿಕೆಯಲ್ಲಿ ನಿಂತು ಮಾತನಾಡಿದ್ದರು. ಈಗ ನಾನು ಅದೇ ವೇದಿಕೆಯಲ್ಲಿ ನಿಂತು ಮಾತನಾಡುತ್ತಿರೋದಕ್ಕೆ ಖುಷಿ ಇದೆ. ನೀವೆಲ್ಲ ಕಷ್ಟ ಜೀವಿಗಳು, ನಿಮ್ಮೆಲ್ಲರ ಕಷ್ಟ ಅರ್ಥವಾಗುತ್ತದೆ. ನಿಮ್ ಕಷ್ಟ ಜೊತೆ ನೀವು ದೇಶ ಬಲಪಡಿಸುವ ಕೆಲಸ ಮಾಡ್ತಿದ್ದೀರಾ. ಆದರೆ, ಮೋದಿ ಕಳಸಾ ಬಂಡೂರಿ ಯೋಜನೆಗೆ ಅನುಮತಿ ಹಾಗೂ ಭದ್ರಾ ಯೋಜನೆಗೆ ಹಣ ಕೊಟ್ಟಿಲ್ಲ. ಕರ್ನಾಟಕಕ್ಕೆ ಅನ್ಯಾಯ ಮಾಡ್ತಿದ್ದಾರೆ. ಯಾವ ರಾಜ್ಯದಲ್ಲಿ ಅವರಿಗೆ ಅಧಿಕಾರ ಇರೋದಿಲ್ಲವೋ ಅಲ್ಲಿಗೆ ಹಣ ಕೊಡೋದಿಲ್ಲ. ಕೇವಲ ಬಿಜೆಪಿ ರಾಜ್ಯಗಳಿಗೆ ಮಾತ್ರ ಹಣ ಕೊಡ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಮೋದಿ ಅಲೆಯಿಲ್ಲ, ಕಾಂಗ್ರೆಸ್ ಗ್ಯಾರಂಟಿ ಅಲೆಯಿದೆ: ಸಿಎಂ ಸಿದ್ದರಾಮಯ್ಯ

ರೈತರು  ಶ್ರಮ ಪಟ್ಟ ಕಟ್ಟುತ್ತಿರುವ ದೇಶ ಇದು. ಹೊಲದಲ್ಲಿ ಕೆಲಸ ಮಾಡಿ ದೇಶದ ಜನರಿಗೆ ಅನ್ನದಾತರಾಗಿದ್ದೀರಾ. ಈ ದೇಶ ನಿಮ್ದು, ಈ ದೇಶ ಎಲ್ಲರದ್ದೂ. ಈ ದೇಶದ ಬಗ್ಗೆ ಎಲ್ಲರಿಗೂ ಚಿಂತೆ ಇದೆ. ಇವತ್ತು ದೇಶದಲ್ಲಿ ಎಂಥ ಪರಿಸ್ಥಿತಿ ಇದೆ ಅನ್ನೋದ್ರ ಬಗ್ಗೆ ನಾನು ಮಾತನಾಡ್ತೀನಿ. ಈ ದೇಶದಲ್ಲಿ ಎರಡು ಸತ್ಯ ಇದೆ. ಬೆಲೆ ಎರಿಕೆಯಿಂದ ಕಷ್ಟ ಪಡುತ್ತಿದ್ದೀರಾ. ನಿರುದ್ಯೋಗದಿಂದ ಕಷ್ಟ ಪಡುತ್ತಿದ್ದೀರಾ. ಎರಡನೇ ಸತ್ಯದ ಬಗ್ಗೆ ಮಾಧ್ಯಮಗಳಲ್ಲಿ ನೀವು ನೋಡ್ತಾ ಇದೀರಾ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸಮಸ್ಯೆ ಇದೆ. ಮೋದಿಯವರು ದೊಡ್ಡ ದೊಡ್ಡ ಮಾತನಾಡಿದ್ರು. ಬೆಲೆ ಎರಿಕೆಯಿಂದ ಸಂಸಾರ ನಡೆಸಲು ಆಗ್ತಿದ್ಯಾ..? ಪೆಟ್ರೋಲ್ ಡಿಸೇಲ್ ಗ್ಯಾಸ್ ಬೆಲೆ ಸಹ ಏರಿಕೆ ಆಗಿದೆ. ಚಿನ್ನ ಬೆಳ್ಳಿ ಸಹ ಆಕಾಶ ಮುಟ್ಟುತ್ತಿದೆ. ನಿಮ್ಮ‌ ಕಷ್ಟಗಳು ಹಾಗೇ ಮುಂದುವರೆದಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಸಿಗ್ತಿಲ್ಲ ಎಂದು ಹೇಳಿದರು.

ದೇಶದ ಆಸ್ತಿಯನ್ಮ ಬಂಡವಾಳ ಶಾಯಿಗೆ ಮಾರಲಾಗುತ್ತಿದೆ. ರೈತರ ಸಾಲಮನ್ನ ಮಾಡೋಕೆ ಆಗಲ್ಲ‌ಆದ್ರೆ ಬಂಡವಾಳ ಶಾಯಿಗಳ ಸಾಲಮನ್ನ ಮಾಡಿದ್ದಾರೆ. ದೇಶದ ಆಸ್ತಿಯನ್ನ ಅವರ ಸ್ನೇಹಿತ ಬಂಡವಾಳ ಶಾಯಿಗಳಿಗೆ ಮಾರುತ್ತಿದ್ದಾರೆ. ರೈತರು ಸಾಲದಲ್ಲೇ ಮುಳಗಿಹೋಗ್ತಿದ್ದಾರೆ. ವಿಪಕ್ಷಗಳ ಬಾಯಿ ಮುಚ್ಚುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಬ್ಯಾಂಕ್ ಸೀಜ್ ಮಾಡ್ತಾರೆ. ಇಬ್ಬರು ಮುಖ್ಯಮಂತ್ರಿಗಳನ್ನ ಜೈಲಿಗೆ ಹಾಕಿದ್ದಾರೆ. ಈ ರೀತಿ ಕೇಸ್ ಹಾಕಿ ವಿಪಕ್ಷಗಳ ಬಾಯಿ ಮುಚ್ಚುವ ಕೆಲಸ ಮಾಡ್ತಿದ್ದಾರೆ. ಎಲೆಕ್ಟ್ ರೋಲ್ ಬಾಂಡ್ ನಲ್ಲಿ ಭ್ರಷ್ಟಾಚಾರವಾಗಿದೆ ಎಂದು ಟೀಕೆ ಮಾಡಿದರು.

ಎಲೆಕ್ಟರೋಲ್ ಬಾಂಡ್ ನಿಂದ ಗೊತ್ತಾಯ್ತು ಮೋದಿಯವರು ಯಾರ್ ಯಾರ್ ಬಳಿ ಚಂದಾ ಎತ್ತಿದ್ದಾರೆ ಅಂತ. ದುಡ್ಡು ಕೊಟ್ಟವರ ಕಂಪನಿಯ ಕೇಸ್ ಕ್ಲೋಸ್ ಮಾಡಿದ್ದಾರೆ. ಕಪ್ಪು ಹಣ ತರ್ತಿನಿ ಅಂದ್ರು, ಡಿಮಾನಿಟೈಸೇಷನ್ ಮಾಡಿ ಎಲ್ಲರನ್ನ ಕ್ಯೂನಲ್ಲಿ ನಿಲ್ಲಿಸಿದರು. ಅವರ ಮಾಡಿರುವ ಕೆಲಸವನ್ನ ಮುಚ್ಚಿ ಹಾಕಲು, ವಿಪಕ್ಷಗಳೆಲ್ಲರು ಭ್ರಷ್ಟರು ಅಂತ ಕರೆಯೋದು. ದೇಶವನ್ನ ಆರ್ಥಿಕವಾಗಿ ಹಾಳು ಮಾಡ್ತಿದ್ದಾರೆ. ಭ್ರಷ್ಟಾಚಾರ ದಿಂದ ಬೇರೆ ಕಡೆ ತಿರುಗಿಸಲು ಜಾತಿ ಧರ್ಮದ ಬಗ್ಗೆ ಮಾತನಾಡ್ತಾರೆ. ನಿಮ್ಮ ಕಷ್ಟದ ಬಗ್ಗೆ ಅವರು ಅಲಿಸಲೇ ಇಲ್ಲ. ಈಗ ಸಂವಿಧಾನ ಬದಲಾಯಿಸುತ್ತೇವೆ ಅಂತಿದ್ದಾರೆ ಇದ್ರ ಅರ್ಥವೇನು. ಸಂವಿಧಾನ ಬದಲಾವಣೆ  ಮಾಡಲು ಹೊರಟಿರುವರ ಬಗ್ಗೆ ಚಿಂತನೆ ಮಾಡಿ ಎಂದು ತಿಳಿಸಿದರು.

ಮುರುಘಾ ಶ್ರೀ ಮತ್ತೆ ಜೈಲಿಗೆ; ಹೈಕೋರ್ಟ್‌ ನೀಡಿದ್ದ ಜಾಮೀನು ರದ್ದುಗೊಳಿಸಿದ ಸುಪ್ರೀಂ

ಒಂದು ಕಾಲದಲ್ಲಿ ದೇಶದ ನಾಯಕರು ಸೇವಮನೋಭಾವದಿಂದ ಇರ್ತಿದ್ದರು. ಆದ್ರೆ ಇಂದಿನ ನಾಯಕನ ಬಳಿ ಅಹಾಂಕರ ಕಾಣ್ತಿದೆ. ಮೋದಿ ಸರ್ಕಾರ ಸುಳ್ಳು ಬಿಟ್ಟರೆ ಬೇರೆ ಏನು ಹೇಳಿಲ್ಲ. ಸರ್ಕಾರವನ್ನ ಬಿಳಿಸಿದ್ದೇ  ಮಾಸ್ಟರ್ ಸ್ಟ್ರೋಕ್ ಅಂತ ಮಾಧ್ಯಮಗಳು ಹೇಳುತ್ತವೆ. ಶಾಸಕರನ್ನ ಖರೀದಿ ಮಾಡಿ ಸರ್ಕಾರ ರಚನೆ ಮಾಡ್ತಾರೆ ಇದನ್ನೇ ಮಾಧ್ಯಮಗಳು ಮೋದಿ ಸರ್ಕಾರ ಮಾತ್ರ ಮಾಡಲು ಸಾಧ್ಯ ಎನ್ನುತ್ತವೆ. ಮೋದಿ ವಿಶ್ವದ ದೊಡ್ಡ ನಾಯಕ ಅಂತ ಹೇಳಿದಾರಂತೆ ಚುಟಿಕೆ ಹೊಡೆದ್ರೆ ಯುದ್ಧ ನಿಲ್ಲಿಸುತ್ತಾರೆ ಅಂತ ಮಾಧ್ಯಮಗಳು ಹೇಳ್ತಿವೆ. ಮೋದಿ ಅಧಿಕಾರಕ್ಕೆ ಬಂದ 10 ವರ್ಷದಲ್ಲಿ ನಿಮ್ಗೆ ಏನಾದರೂ ಒಳ್ಳೆಯದ್ ಆಗಿದ್ಯಾ? ಮಕ್ಕಳಿಗೆ ಏನಾದರೂ ಒಳ್ಳೆಯದ್ ಆಗಿದ್ಯಾ? ಉದ್ಯೋಗ ಸಿಕ್ಕಿದ್ಯಾ? ಒಳ್ಳೆಯ ಆಸ್ಪತ್ರೆ ಕಟ್ಟಿದ್ದಾರಾ? ಮತ್ತೇ ಏನು ಕೆಲಸ ಮಾಡಿದ್ದಾರೆ. ಅವರು ಕೆಲಸ ಮಾಡಿದ್ರೆ ಕೆಲಸದ ಅಧಾರಿತದ ಮೇಲೆ ಮತ ಕೇಳಬೇಕಿತ್ತು ಅಲ್ವಾ ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದರು.

click me!