ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲಾ ಮಾತನಾಡುತ್ತಿದ್ದಿರಾ?, ನಿಮಗೆ ಟಿಕೆಟ್ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನಿಮ್ಮ ಮಗನಿಗೂ ಟಿಕೆಟ್ ಕೊಡಿಸಲು ಆಗಲ್ಲ. ಪ್ರೆಸ್ ಮೀಟ್ ಬಿಟ್ಟರೆ ಈಶ್ವರಪ್ಪ ಒಂದೇ ಒಂದು ದೊಡ್ಡ ಕಾರ್ಯಕ್ರಮ ಮಾಡಿದ್ದಾರಾ?. ಅನಿವಾರ್ಯವಾಗಿ ನಿಮಗೆ ಏನು ಮಾಡಬೇಕೋ ಅದನ್ನೇ ನಾವು ಮಾಡುತ್ತೇವೆ. ಈಶ್ವರಪ್ಪ ಹಿರಿಯರಿದ್ದಾರೆಂದು ಬೆಲೆ ನೀಡುತ್ತೇವೆ. ಆದರೆ ಅವರ ನಡವಳಿಕೆಗೆ ನಮ್ಮ ವಿರೋಧವಿದೆ: ಮಧು ಬಂಗಾರಪ್ಪ
ಶಿವಮೊಗ್ಗ(ಏ.23): ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾಜಿ ಸಚಿವ ಈಶ್ವರಪ್ಪ ಹಗುರವಾಗಿ ಮಾತನಾಡುವುದು ಕಡಿಮೆ ಮಾಡಬೇಕು. ಇಲ್ಲವಾದಲ್ಲಿ ಬೇರೆಯದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಸಾಮಾನ್ಯರಲ್ಲ. ಅವರು ಬಂಗಾರಪ್ಪರ ಪುತ್ರಿಯಾಗಿದ್ದಾರೆ. ಪದೇ ಪದೇ ಕಾಂಗ್ರೆಸ್‌ನವರು ನಮ್ಮ ಜೊತೆಯಲ್ಲಿ ಇದ್ದಾರೆ ಎಂದು ಈಶ್ವರಪ್ಪ ಅವರು ಹೇಳುತ್ತಿದ್ದಾರೆ. ಈಶ್ವರಪ್ಪ ಅಂತಹ ಕೀಳು ಮಟ್ಟದ ರಾಜಕಾರಣಿಯಾಗಿದ್ದಾರೆ. ನೀವು ನಿಜವಾದ ಗಂಡಸೇ ಆಗಿದ್ದರೆ, ನಿಮ್ಮ ಮಗನಿಗೆ ಟಿಕೆಟ್ ಕೊಡಿಸಿ. ಇಲ್ಲ ನಿಮ್ಮ ಮಗನಿಗೆ ಫೀಡಿಂಗ್ ಬಾಟಲ್ ನೀಡಿ ಕೂರಿಸಿ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
undefined
ಬಿಜೆಪಿ ಸುಳ್ಳು ಗ್ಯಾರೆಂಟಿಗೆ ವಾರೆಂಟಿ ಇಲ್ಲ: ಮಧು ಬಂಗಾರಪ್ಪ ಲೇವಡಿ
ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲಾ ಮಾತನಾಡುತ್ತಿದ್ದಿರಾ?, ನಿಮಗೆ ಟಿಕೆಟ್ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನಿಮ್ಮ ಮಗನಿಗೂ ಟಿಕೆಟ್ ಕೊಡಿಸಲು ಆಗಲ್ಲ. ಪ್ರೆಸ್ ಮೀಟ್ ಬಿಟ್ಟರೆ ಈಶ್ವರಪ್ಪ ಒಂದೇ ಒಂದು ದೊಡ್ಡ ಕಾರ್ಯಕ್ರಮ ಮಾಡಿದ್ದಾರಾ?. ಅನಿವಾರ್ಯವಾಗಿ ನಿಮಗೆ ಏನು ಮಾಡಬೇಕೋ ಅದನ್ನೇ ನಾವು ಮಾಡುತ್ತೇವೆ. ಈಶ್ವರಪ್ಪ ಹಿರಿಯರಿದ್ದಾರೆಂದು ಬೆಲೆ ನೀಡುತ್ತೇವೆ. ಆದರೆ ಅವರ ನಡವಳಿಕೆಗೆ ನಮ್ಮ ವಿರೋಧವಿದೆ. ಅವರು ಪದೇ, ಪದೇ ಕಾಂಗ್ರೆಸ್ ನವರು ನಮಗೆ ಫೋನ್ ಮಾಡುತ್ತಾರೆ. ಅವರು ನಮ್ಮ ಜೊತೆಯಲ್ಲಿ ಇದ್ದಾರೆಂದು ಹೇಳುತ್ತಾರೆ. ಇದನ್ನು ಅವರು ಈಗಲೇ ನಿಲ್ಲಿಸಬೇಕು. ಇಲ್ಲವಾದರೆ ಅವರಿಗೆ ಬೇರೆ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ. ಇಷ್ಟೊಂದು ವಯಸ್ಸಾಗಿರುವ ಸಂದರ್ಭದಲ್ಲಿ ಅವರು ಸರಿಯಾಗಿ ಮಾತನಾಡುತ್ತಿಲ್ಲ ಎಂದು ಈಶ್ವರಪ್ಪ ವಿರುದ್ಧ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ ಬಂದಿರುವ ನೀವು ಈ ರೀತಿ ಮಾತನಾಡುವುದು ಸರಿಯಲ್ಲ. ನರೇಂದ್ರ ಮೋದಿ ಸೇರಿದಂತೆ ಬಿಜೆಪಿಗರು ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಕೀಳು ಮಟ್ಟದ ರಾಜಕಾರಣ ಮಾಡುತ್ತಿರುವ ಈಶ್ವರಪ್ಪ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು.ಮಾಂಗಲ್ಯ ತಂದು ಚರ್ಚೆ ಮಾಡುವ ರಾಜಕಾರಣ ಎಷ್ಟು ಸರಿ. ನಾನು ಕೂಡ ಕೀಳುಮಟ್ಟಕ್ಕಿಳಿದು ಮಾತನಾಡಬಹುದು. ಪ್ರಧಾನಮಂತ್ರಿಗಳು ಈ ರೀತಿ ರಾಜಕಾರಣ ಮಾಡಿದರೆ ಹೇಗೆ?. ಮನುಷ್ಯರಾದವರು ಪವಿತ್ರವಾದ ತಾಳಿ ಬಗ್ಗೆ ಮಾತನಾಡಬಾರದು. ಭಾರತಾಂಬೆ ಎನ್ನುತ್ತಿರಾ, ಮಾಂಗಲ್ಯದ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ಬಿಜೆಪಿಯವರು ಹೇಗೆ ಸಮರ್ಥಿಸಿಕೊಳ್ಳುತ್ತಾರೋ ನೋಡೋಣ. ನಾನು ಬಿಜೆಪಿಗರಿಗೆ ಸವಾಲು ಹಾಕುತ್ತೇನೆ ಮಧು ಬಂಗಾರಪ್ಪ ಹೇಳಿದ್ದಾರೆ.
ಪ್ರಚಾರ ಕಾರ್ಯ ತೃಪ್ತಿ ತಂದಿದೆ. ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ಪ್ರಚಾರಕ್ಕೆ ಹೋದಾಗ ಜನರನ್ನು ರೀಚ್ ಆಗಿದ್ದಾರೆ. ಸುಮಾರು 3 ವರೆ ಲಕ್ಷ ಜನರಿಗೆ ರೀಚ್ ಆಗಿದ್ದಾರೆ. ರೋಡ್ ಶೋ, ಸಭೆ ಹೀಗೆ ವಿವಿಧ ರೀತಿಯಲ್ಲಿ ನಾವು ಜನರಿಗೆ ರೀಚ್ ಆಗಿದ್ದೇವೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಪ್ರಚಾರ ಕಾರ್ಯ ನಡೆಸುತ್ತಿದ್ದೇವೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಈ ಚುನಾವಣೆಯಲ್ಲಿ ಸೋಲಿಸುವುದು ಅಸಾಧ್ಯ. ಬೇರೆ ಪಕ್ಷಗಳು, ವ್ಯಕ್ತಿಗಳು ಗೆಲ್ಲುವ ಮತಗಳ ಸಂಖ್ಯೆ ಹೇಳುತ್ತಿದ್ದಾರೆ. ಅವೆಲ್ಲವೂ ಸುಳ್ಳು ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.