MLC Election: ಮೇಲ್ಮನೆಗೆ ಬಿಜೆಪಿಯಿಂದ ಎರಡು ಅಚ್ಚರಿಯ ಹೆಸರು?

Published : May 18, 2022, 04:46 AM IST
MLC Election: ಮೇಲ್ಮನೆಗೆ ಬಿಜೆಪಿಯಿಂದ ಎರಡು ಅಚ್ಚರಿಯ ಹೆಸರು?

ಸಾರಾಂಶ

*  ಒಬಿಸಿಯಿಂದ ಕೇಶವ್‌, ಸಿದ್ದೇಶ್‌ ಹೆಸರು ಪರಿಶೀಲನೆ *  ವಿಜಯೇಂದ್ರ/ಸವದಿ, ಗೀತಾ/ತೇಜಸ್ವಿನಿ ಫೈನಲ್‌? *  ಹೈಕಮಾಂಡ್‌ನಿಂದ ಅಂತಿಮ ಮುದ್ರೆ ಬಾಕಿ  

ಬೆಂಗಳೂರು(ಮೇ.18): ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ(Vidhan Parishat Election) ಆಡಳಿತಾರೂಢ ಬಿಜೆಪಿಗೆ ಲಭ್ಯವಾಗುವ ನಾಲ್ಕು ಸ್ಥಾನಗಳಿಗೆ ಬಹುತೇಕ ಹೆಸರುಗಳು ಅಂತಿಮಗೊಳ್ಳುತ್ತಿದ್ದು, ಹೈಕಮಾಂಡ್‌ನಿಂದ ಅಂತಿಮ ಮುದ್ರೆ ಬೀಳಬೇಕಾಗಿದೆ.

ಸಾಮಾನ್ಯ ವರ್ಗದಿಂದ ಬಿ.ವೈ.ವಿಜಯೇಂದ್ರ(BY Vijayendra) ಹಾಗೂ ಲಕ್ಷ್ಮಣ ಸವದಿ(Laxman Savadi) ಅವರ ಪೈಕಿ ಒಬ್ಬರಿಗೆ ಅವಕಾಶ ಲಭಿಸಬಹುದು. ಮಹಿಳಾ ಕೋಟಾದಿಂದ ಗೀತಾ ವಿವೇಕಾನಂದ, ತೇಜಸ್ವಿನಿ ಅನಂತಕುಮಾರ್‌ ಅಲ್ಲದೆ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ನೀಡಬೇಕು ಎಂಬ ಚರ್ಚೆಯು ನಡೆಯುತ್ತಿದೆ. ಇನ್ನು ಪರಿಶಿಷ್ಟ ಸಮುದಾಯದಿಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರಿಗೆ ಟಿಕೆಟ್‌ ನೀಡುವ ಸಂಭವ ಹೆಚ್ಚಾಗಿದೆ ಎನ್ನಲಾಗಿದೆ.

ಎಂಎಲ್‌ಸಿ ಎಲೆಕ್ಷನ್‌ನಲ್ಲಿ ಬಿಜೆಪಿಗೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ಪ್ಲಾನ್‌

ಇನ್ನು ಇತರ ಹಿಂದುಳಿದ ವರ್ಗದಿಂದ (OBC) ಎರಡು ಹೊಸ ಹೆಸರು ಕೇಳಿಬರುತ್ತಿವೆ. ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ ಹಿಂದೆ ಬಿಜೆಪಿ(BJP) ಕಚೇರಿಯ ಕಾರ್ಯದರ್ಶಿಯೂ ಆಗಿದ್ದ ಕೇಶವ್‌ ಪ್ರಸಾದ್‌(Keshav Prasad) ಅವರ ಹೆಸರು ಪ್ರಸ್ತಾಪವಾಗಿದೆ. ಅಲ್ಲದೆ, ಪಕ್ಷದ ಒಬಿಸಿ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‌ ಯಾದವ್‌ ಅವರ ಹೆಸರನ್ನೂ ಪರಿಶೀಲಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಸಂಭವನೀಯರು:

1.ಬಿ.ವೈ.ವಿಜಯೇಂದ್ರ/ಲಕ್ಷ್ಮಣ ಸವದಿ
2.ಗೀತಾ ವಿವೇಕಾನಂದ/ತೇಜಸ್ವಿನಿ ಅನಂತಕುಮಾರ್‌
3.ಸಿದ್ದರಾಜು
4.ಕೇಶವ್‌ ಪ್ರಸಾದ್‌/ಸಿದ್ದೇಶ್‌ ಯಾದವ್‌

'ಬಿಜೆ​ಪಿಗೆ ರಾಜ್ಯ​ದಲ್ಲಿ ಮಿಷನ್‌ 150 ಪ್ಲಸ್‌ ಗುರಿ'

ಸವದತ್ತಿ: ರಾಜ್ಯದಲ್ಲಿ(Karnataka) ಮಿಷನ್‌-150 ಪ್ಲಸ್‌ ಎಂಬ ಗುರಿಯೊಂದಿಗೆ ಬಿಜೆಪಿಯು ಮುಂದೆ ಸಾಗುತ್ತಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ 150ಕ್ಕೂ ಹೆಚ್ಚು ಶಾಸಕರು ಆಯ್ಕೆಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ(Mahesh Tenginakayi) ಹೇಳಿದರು.

ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ಬಿಜಿಪಿ ಹಮ್ಮಿಕೊಂಡ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾ(Belagavi) ಪಾರ್ಲಿಮೆಂಟ್‌ನ 8 ಕ್ಷೇತ್ರದಲ್ಲಿ ಈಗ 5 ಜನ ಬಿಜೆಪಿ ಶಾಸಕರಿದ್ದು, 2023ರ ಚುನಾವಣೆಯಲ್ಲಿ 8 ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗಲಿದ್ದಾರೆ ಎಂದರು.

ಜೂ.13ರಂದು ನಡೆಯುವ ವಾಯವ್ಯ ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರದ ವಿ.ಪ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರು ಕೆಳ ಹಂತದಿಂದ ಪ್ರತಿ ಮತದಾರರನ್ನು ಸಂಪರ್ಕಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು ಎಂದರು.
ಕಾಂಗ್ರೆಸ್‌ ಪಕ್ಷದ ಸುಳ್ಳಿನ ಕಂತೆಗಳನ್ನು ಡಿ.ಕೆ.ಶಿವಕುಮಾರ ಮತ್ತು ಸಿದ್ದರಾಮಯ್ಯನವರು ಬಿಚ್ಚಿಡುತ್ತಿದ್ದು, ಅನೇಕ ಆರೋಪಗಳನ್ನು ಮಾಡುತ್ತಿರುವ ಅವರ ಹತ್ತಿರ ಯಾವುದೇ ಪೂರಕ ದಾಖಲೆಗಳಿಲ್ಲ. ಎಂಟು ವರ್ಷಗಳಿಂದ ಕೇಂದ್ರ ಸರ್ಕಾರವು ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಇದು ಪಕ್ಷದ ಬಲವರ್ಧನೆಗೆ ಪುಷ್ಠಿ ನೀಡುತ್ತಿದೆ ಎಂದರು.

Congress ಟಿಕೆಟ್ ಹಂಚಿಕೆ ವಿಚಾರದಲ್ಲಿ ಡಿಕೆಶಿ ಸಿದ್ದು ನಡುವೆ ಶೀತಲ ಸಮರ, ಕಾಂಗ್ರೆಸ್ ತಳಮಳ!

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಮಾತನಾಡಿ, ಸದ್ಯದ ವಿಧಾನ ಪರಿಷತ್‌ ಚುನಾವಣೆಯು(Vidhan Parishat Election) ಮುಂದಿನ ವಿಧಾನಸಭೆ ಚುನಾವಣೆಯ ಮುನ್ನುಡಿಯಾಗಿದ್ದು, ಪಕ್ಷದ ಕಾರ್ಯಕರ್ತರು ಸರ್ಕಾರದ ಯೋಜನೆಗಳ ಸಂಪೂರ್ಣ ಮಾಹಿತಿಯೊಂದಿಗೆ ಜನರನ್ನು ಸಂಪರ್ಕಿಸುವ ಕಾರ್ಯ ಮಾಡಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಬಿಜೆಪಿಯ ರಾಜ್ಯ ಕಾರ್ಯಕಾರಿಣಿ ಸಭೆಯ ನಂತರ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಜಿಲ್ಲಾ ಕಾರ್ಯ ಕಾರಿಣಿ ಸಭೆ ನಡೆಯುತ್ತಿದ್ದು, ಜೂ.18ರಂದು ಕಿತ್ತೂರಿನಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತದೆ. ಕಳೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲನ್ನು ಸವಾಲಾಗಿ ಸ್ವೀಕರಿಸಿ ಬರುವಂತ ಎಲ್ಲ ಚುನಾವಣೆಗಳಲ್ಲಿ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.
ವಾಯುವ್ಯ ಮತಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ಅಭ್ಯರ್ಥಿಗಳಾದ ಪದವೀಧರ ಕ್ಷೇತ್ರದ ಹನಮಂತ ನಿರಾಣಿ ಮತ್ತು ಶಿಕ್ಷಕರ ಕ್ಷೇತ್ರ ಅರುಣ ಶಹಪುರ ಮಾತನಾಡಿ, 60 ವರ್ಷಗಳಲ್ಲಿ ಆಗದೆ ಇರುವಂತ ಕೆಲಸಗಳನ್ನು ಬಿಜೆಪಿ ಸರ್ಕಾರ 16 ವರ್ಷಗಳಲ್ಲಿ ಮಾಡಿದ್ದು, ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರುವುದರ ಜೊತೆಗೆ ಸಾಕಷ್ಟು ಅಭಿವೃದ್ಧಿಯನ್ನು ಮಾಡಲಾಗಿದೆ ಎಂದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!