* ಹಾಲಿ ಶಾಸಕರನ್ನು ಸೋಲಿಸಲು ವಿರೋಧಿಗಳು ಒಗ್ಗಟ್ಟು
* ಎರಡೂ ರಾಷ್ಟ್ರೀಯ ಪಕ್ಷಗಳ ಜಗಳದ ಲಾಭ ಜೆಡಿಎಸ್‌ಗೆ
* ಈ ಬಾರಿ ಬಂಗಾರಪೇಟೆ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ
ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಮೇ.17): ಬಿಜೆಪಿಗೆ(BJP) ನೆಲೆ ಇಲ್ಲದೆ ಇರುವ ಕೋಲಾರ(Kolar) ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಲಿಷ್ಠವಾಗ್ತಿದೆ. ಸಂಸದ ಮುನಿಸ್ವಾಮಿ ಪ್ರಮುಖ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೆಳೆಯುತ್ತಿದ್ದು ಹಾಲಿ ಶಾಸಕರಿಗೆ ಟೆಂಕ್ಷನ್ ಕೊಡ್ತಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆಯ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬಿಜೆಪಿ ಪಕ್ಷ ಬಲಿಷ್ಠವಾಗ್ತಿದ್ದು, ಹಾಲಿ ಕಾಂಗ್ರೆಸ್ ಪಕ್ಷದ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಈ ಬಾರಿಯ ಗೆಲುವು ಅಷ್ಟು ಸುಲಭವಾಗಿಲ್ಲ ಅಂತ ಮೆಸೇಜ್ ಪಾಸ್ ಮಾಡ್ತಿದ್ದಾರೆ.
undefined
ಹೌದು, ಸತತ ಎರಡು ಬಾರಿ ಕಾಂಗ್ರೆಸ್(Congress) ಪಕ್ಷದಿಂದ ಆಯ್ಕೆ ಆಗಿರುವ ಎಸ್.ಎನ್.ನಾರಾಯಣಸ್ವಾಮಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಗೆಲುವು ಅಷ್ಟು ಸುಲಭವಾಗಿಲ್ಲ, ಈ ಬಾರಿ ಸೋಲಿಸಿಯೇ ತಿರುತ್ತೇವೆ ಅಂತ ನೇರವಾಗಿ ಸವಾಲು ಹಾಕಿರುವ ಸಂಸದ ಮುನಿಸ್ವಾಮಿ ಬಂಗಾರಪೇಟೆ(Bangarpet) ಕ್ಷೇತ್ರಕ್ಕೆ ಹೆಚ್ಚು ಒತ್ತಡ ನೀಡಿ ಶಾಸಕರ ಆಪ್ತರನ್ನು ಬಿಜೆಪಿ ಗೆ ಸೆಳೆಯಲು ನಿರಂತರ ಪ್ರಯತ್ನದಲ್ಲಿದ್ದು, ಈಗಾಗಲೇ ಎಸ್.ಎನ್. ನಾರಾಯಣಸ್ವಾಮಿಯ(SN Narayanaswamy0 ಆಪ್ತರು, ಕೋಲಾರ ಜಿಲ್ಲಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರು ಆಗಿದ್ದ ಚಂದ್ರಾರೆಡ್ಡಿ ಅವರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಎಸ್.ಎನ್ ನಾರಾಯಣಸ್ವಾಮಿ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ.
ಇನ್ನು ಇತ್ತ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಸಹ ಸಂಸದ ಮುನಿಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದು, ಯಾರೇ ಪಕ್ಷ ತೊರೆದು ಹೋದರು ಸಹ ಈ ಬಾರಿ ನಾನೇ ಗೆಲ್ಲೋದು ಅಂತ ಸಂಸದ ಮುನಿಸ್ವಾಮಿ ವಿರುದ್ಧ ಆಗಾಗ್ಗೆ ಬಹಿರಂಗವಾಗಿ ವಾಗ್ದಾಳಿ ಮಾಡ್ತಿದ್ದಾರೆ.
ಬಿಜೆಪಿ ನೀಡಿದ್ದ ಭರವಸೆ ಹುಸಿ, ಮತ್ತೆ ಕಾಂಗ್ರೆಸ್ ಬಾಗಿಲು ಬಡಿದ ಮಾಜಿ ಸಚಿವ..!
ಇನ್ನು ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜಿಲ್ಲಾ ಕಾಂಗ್ರೆಸ್ ನ ಮಾಜಿ ಜಿಲ್ಲಾಧ್ಯಕ್ಷ ಚಂದ್ರಾರೆಡ್ಡಿ ಸಹ ಒಳಗಿಂದ ಒಳಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೆಳೆಯುತ್ತಿದ್ದಾರೆ.ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿಗೆ ಸವಾಲು ಹಾಕಿದ್ದು,ಈ ಬಾರಿ ಸೋಲು ನಿಶ್ಚಿತ ಅಂತ ತಿರುಗಿ ಬಿದ್ದಿದ್ದಾರೆ.ಈ ಹಿನ್ನೆಲೆಯಲ್ಲಿ ಇವತ್ತು ಬಂಗಾರಪೇಟೆ ನಗರದಲ್ಲಿ ಸಾವಿರಾರು ಜನರನ್ನು ಸೇರಿಸಿ ಬೃಹತ್ ಶೋಭಯಾತ್ರೆ ಮಾಡಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡುವ ಮೂಲಕ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಗೆ ಟಕ್ಕರ್ ನೀಡಿದ್ರು.
ಇನ್ನು ಬಂಗಾರಪೇಟೆ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಇಲ್ಲಿ ಗೆಲುವು ಸಾಧಿಸಿದೆ, ಆದ್ರೆ ದಿನ ಕಳೆದಂತೆ ಇಲ್ಲಿ ಬಿಜೆಪಿ ಪಕ್ಷದ ಒಳ ಜಗಳದಿಂದ ವರ್ಚಸ್ಸು ಕ್ಷೀಣಿಸುತ್ತಿದ್ದದನ್ನು ಅರಿತ ಕಾಂಗ್ರೆಸ್ ಇಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದು,ಆದ್ರೆ ಕಳೆದ ಒಂದು ವರ್ಷದಿಂದ ಇಲ್ಲಿ ಬಿಜೆಪಿ ಸಂಘಟನೆ ಆಗ್ತಿದ್ದು,ಬಂಗಾರಪೇಟೆ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್(JDS) ನಡುವೆ ತ್ರಿಕೋನ ಸ್ಪರ್ಧೆ ಏರ್ಪಡೋದ್ರಲ್ಲಿ ಅನುಮಾನವಿಲ್ಲ.
ಕೆಜಿಎಫ್ ಬಿಜೆಪಿಯಲ್ಲಿ ಬಣ ರಾಜಕೀಯ, ಪತ್ನಿಗೆ ಟಿಕೇಟ್ ಕೊಡಿಸಲು MP ಮುನಿಸ್ವಾಮಿ ಸರ್ಕಸ್
ಹೌದು, ಬಿಜೆಪಿ ಹಾಗೂ ಕಾಂಗ್ರೆಸ್ ಜಗಳದ ನಡುವೆ ಬಂಗಾರಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಹ ಇಲ್ಲಿ ಸೈಲೆಂಟಾಗಿ ಹೆಚ್ಚು ಸಂಘಟನೆ ಆಗ್ತಿದೆ. ಈಗಾಗಲೇ ಮಲ್ಲೇಶ್ ಬಾಬು ಬಂಗಾರಪೇಟೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಕ್ಷೇತ್ರದಲ್ಲಿ ಜೆಡಿಎಸ್ ಗೆ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳ ಜಗಳದ ಲಾಭವನ್ನು ಜೆಡಿಎಸ್ ಪಡೆದುಕೊಳ್ಳಲಿದೆ ಅಂತ ಸಾರ್ವಜನಿಕವಾಗಿ ಚರ್ಚೆ ಆಗ್ತಿದೆ.
ಇನ್ನು ಬಂಗಾರಪೇಟೆ ಹಾಗೂ ಕೆಜಿಎಫ್ ಕ್ಷೇತ್ರಗಳ ಮೇಲೆ ಸಂಸದ ಮುನಿಸ್ವಾಮಿ ಹೆಚ್ಚಿನ ಗಮನ ಹರಿಸಿದ್ದು, ಯಾವುದಾದರೂ ಒಂದು ಕ್ಷೇತ್ರಕ್ಕೆ ತಮ್ಮ ಪತ್ನಿ ಶೈಲಜಾ ಅವರಿಗೆ ಟಿಕೆಟ್ ತರುವ ಪ್ರಯತ್ನದಲ್ಲಿದ್ದಾರೆ. ಈ ಬಗ್ಗೆ ಹೈಕಮಾಂಡ್ ಹಾಗೂ ಸ್ಥಳೀಯ ಮುಖಂಡರ ಬಳಿ ಚರ್ಚೆ ಮಾಡಿದ್ದಾರೆ ಅಂತ ಹೇಳಲಾಗ್ತಿದೆ. ಅದೇನೇ ಇರಲಿ ಈ ಬಾರಿ ಬಂಗಾರಪೇಟೆ ವಿಧಾನಸಭಾ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಸತತ ಎರಡು ಬಾರಿ ಗೆಲುವು ಸಾಧಿಸಿರುವ ಎಸ್.ಎನ್. ನಾರಾಯಣಸ್ವಾಮಿ ಅವರಿಗೆ ಈ ಬಾರಿಯ ಗೆಲುವು ಅಷ್ಟು ಸುಲಭವಾಗಿಲ್ಲ ಅನ್ನೋದಂತೂ ಸುಳ್ಳಲ್ಲ...