ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಿದ್ರೆ ಗಿಫ್ಟ್, ಸಿದ್ದರಾಮಯ್ಯ ಕ್ಷೇತ್ರದಲ್ಲಿ ಬಂಪರ್ ಆಫರ್

By Ramesh B  |  First Published Mar 12, 2022, 5:28 PM IST

* ಕರ್ನಾಟಕದಲ್ಲಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನ
* ಕಾಂಗ್ರೆಸ್​ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯಕರ್ತರಿಗೆ ಬಂಪರ್ ಬಹುಮಾನ 
* ಸದಸ್ಯತ್ವ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ವಿನೂತನ ಪ್ರಯತ್ನಕೈ ಹಾಕಿ ಟೀಕೆಗೂ ಗುರಿ


ಬಾಗಲಕೋಟೆ, (ಮಾ.12): ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೂ ಒಂದು ವರ್ಷ ಬಾಕಿ ಇದ್ದು, ಆಗಲೇ ರಾಜಕೀಯ ಪಕ್ಷಗಳು ಚುನಾವಣಾ ತಯಾರಿ ನಡೆಸಿವೆ.

ವಿಧಾನಸಭಾ ಚುನಾವಣೆಗೆ ಜೆಡಿಎಸ್​, ಕಾಂಗ್ರೆಸ್​ ಮತ್ತು ಬಿಜೆಪಿ ತಯಾರಿ ಶುರು ಮಾಡಿದೆ. ಪಕ್ಷದ ಜೀವಾಳವಾಗಿರುವ ಕಾರ್ಯಕರ್ತರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಎಲ್ಲ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಅದರಲ್ಲೂ ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲೇಬೇಕೆಂದು ಪಣತೊಟ್ಟಿದೆ. ನಾನಾ ತಂತ್ರಗಳನ್ನ ರೂಪಿಸುತ್ತಿದ್ದು, ಸದಸ್ಯತ್ವ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದು, ಟೀಕೆಗೂ ಗುರಿಯಾಗಿದೆ.

Tap to resize

Latest Videos

ರಾಜ್ಯದಲ್ಲಿ ನಾಳೆ ಚುನಾವಣೆ ಆದ್ರೂ ನಾವ್ ರೆಡಿ: ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಸದಸ್ಯತ್ವವನ್ನು ಹೆಚ್ಚಿಸುವ ಕಾರ್ಯಕರ್ತರಿಗೆ ಬಂಪರ್ ಬಹುಮಾನ ಘೋಷಿಸಲಾಗಿದೆ. ಫ್ರಿಡ್ಜ್, ಎಲ್​ಇಡಿ ಟಿವಿ ಮತ್ತು ಮೊಬೈಲ್ ಬಹುಮಾನವಾಗಿ ದೊರೆಯಲಿದೆ ಎಂದು ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್​ ಇಂಥದೊಂದ್ದು ಆಫರ್ ಇಡಲಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಐದು ಸಾವಿರ ಸದಸ್ಯತ್ವ ಮಾಡಿಸಿದರೆ ಮೊದಲ ಬಹುಮಾನವಾಗಿ ಫ್ರಿಡ್ಜ್, ಮೂರು ಸಾವಿರ ಸದಸ್ಯತ್ವ ಮಾಡಿಸಿದ್ರೆ ಎರಡನೇ ಬಹುಮಾನವಾಗಿ ಎಲ್‌ಇಡಿ ಟಿವಿ ಮತ್ತು ಎರಡು ಸಾವಿರ ಸದಸ್ಯತ್ವ ಮಾಡಿಸಿದ್ರೆ ಮೊಬೈಲ್ ಗಿಫ್ಟ್​ ಘೋಷಣೆ ಮಾಡಲಾಗಿದೆ. ಮಾರ್ಚ 1 ರಿಂದ ಸದಸ್ಯತ್ವ ಅಭಿಯಾನ ಆರಂಭವಾಗಿದ್ದು, ಮಾರ್ಚ್ 31ರ ವರೆಗೆ ಈ ಅಭಿಯಾನ ನಡೆಯಲಿದೆ. 

ಬಾದಾಮಿ ಮತಕ್ಷೇತ್ರದ ಬಾದಾಮಿ ಮತ್ತು ಗುಳೇದಗುಡ್ಡ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಸದಸ್ಯತ್ವ ಮಾಡಿಸಲು ಕಾಂಗ್ರೆಸ್​ ಕಾರ್ಯಕರ್ತರಿಗೆ ಉತ್ಸಾಹ ತುಂಬಲು ಗಿಫ್ಟ್​ ಆಫರ್ ಮಾಡಲಾಗಿದೆ.  ಈ ಫೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಫುಲ್ ಟ್ರೋಲ್ ಮಾಡಲಾಗುತ್ತಿದೆ.

ಬಾದಾಮಿಯಿಂದ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡ್ತಾರೋ ಇಲ್ಲವೋ ಅನ್ನುವುದು ಇನ್ನೂ ನಿಗೂಢವಾಗಿದೆ. ಆದರೆ, ಕ್ಷೇತ್ರದಲ್ಲಿ ಹೆಚ್ಚಿನ‌ ಸದಸ್ಯತ್ವ ಮಾಡಿಸಿ ಸಿದ್ದು ಅವರನ್ನು ಮತ್ತೆ ಕ್ಷೇತ್ರದಲ್ಲಿ ಉಳಿಸಿಕೊಳ್ಳಲು ಬೆಂಬಲಿಗರು ಯೋಜನೆ ರೂಪಿಸಿದಂತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 20 ಸಾವಿರ ಸದಸ್ಯತ್ವದ ಗುರಿಯನ್ನು ಹೊಂದಲಾಗಿದೆ. ಆದರೆ, ಬಾದಾಮಿ ಕ್ಷೇತ್ರದಲ್ಲಿ ಹೀಗೆ ಆಫರ್ ಇಟ್ಟು ಎರಡು ಬ್ಲಾಕ್​ಗಳಲ್ಲಿ ತಲಾ 50 ಸಾವಿರಕ್ಕೂ ಅಧಿಕ ಸದಸ್ಯತ್ವ ಮಾಡಿಸುವ ಗುರಿ ಬೆಂಬಲಿಗರದ್ದಾಗಿದೆ. ಇದಕ್ಕಾಗಿಯೇ ಕಾರ್ಯಕರ್ತರಿಗೆ ಗಿಫ್ಟ್​ ಆಫರ್ ಮಾಡಲಾಗಿದೆ.

ಈ ಆಫರ್‌ಗೆ ಬಿಜೆಪಿ ಲೇವಡಿ
ಇನ್ನು ಕಾಂಗ್ರೆಸ್​ ಗಿಫ್ಟ್​ ಆಫರ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಲೇವಡಿ ಮಾಡಿದೆ. 137 ವರ್ಷಗಳ ಇತಿಹಾಸವಿರುವ ರಾಜಕೀಯ ಪಕ್ಷಕ್ಕೆ ಇದೆಂಥಾ ಗತಿ ಬಂತು ನೋಡಿ. ಈಗ ಆಸೆ, ಆಮಿಷ ತೋರಿಸಿ ಸದಸ್ಯತ್ವ ಮಾಡಿಸುವ ಗತಿ ಬಂದಿದೆ ಅಂದರೆ, ಕಾಂಗ್ರೆಸ್ ಪಕ್ಷ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ನೀವೇ ಊಹಿಸಿ ಅಂತ ಗಿಫ್ಟ್​ ಆಫರ್​ಗೆ ಟಾಂಗ್ ನೀಡಿದ್ದಾರೆ. ವಿಧಾನಸಭಾ ವಿಪಕ್ಷ ನಾಯಕನ ಕ್ಷೇತ್ರವೇ ಹೀಗಿರಬೇಕಾದ್ರೆ ಇನ್ನುಳಿದ ಕ್ಷೇತ್ರಗಳು ಸ್ಥಿತಿ ಹೇಗಿರಬಹುದು ಎಂದು ಬಿಜೆಪಿ ಬೆಂಬಲಿಗರು ಲೇವಡಿ ಮಾಡುತ್ತಿದ್ದಾರೆ.

click me!