ಎದುರಿಗೆ ಡಿಕೆಶಿ ಸಂಬಂಧಿ ಎಂದ್ರೆ ಸಾಕಾಗೋಲ್ಲ: ಸಿಡಿದೆದ್ದ ಮುದ್ದಹನುಮೇಗೌಡ

By Suvarna News  |  First Published May 30, 2022, 4:33 PM IST

* ಕೈ ತಪ್ಪಿದ ರಾಜ್ಯಸಭಾ ಕಾಂಗ್ರೆಸ್ ಟಿಕೆಟ್ 
 * ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ಅಸಮಧಾನ.
* ಕುಣಿಗಲ್ ವಿಧಾನಸಭೆಗೆ ಸ್ಪರ್ಧೆ ಮಾಡಿಯೇ ಮಾಡ್ತೀನಿ ಎಂದ ಮುದ್ದಹನುಮೇಗೌಡ


ತುಮಕೂರು, (ಮೇ.30): ರಾಜ್ಯಸಭಾ ಸ್ಥಾನ ಕೈ ತಪ್ಪಿರುವುದಕ್ಕೆ ಕಾಂಗ್ರೆಸ್‌ ಮಾಜಿ ಸಂಸದ ಮುದ್ದಹನುಮೇಗೌಡ ಅಸಮಧಾನ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಹೆಬ್ಬೂರು ನಿವಾಸದಲ್ಲಿ ಮಾತನಾಡಿದ ಅವರು,  ನನಗೆ ಉದ್ದೇಶ ಪೂರ್ವಕವಾಗಿಯೇ  ಲೋಕಸಭೆ ಟಿಕೆಟ್‌ ತಪ್ಪಿದ್ರು, ಈ ವಿಚಾರವನ್ನು ಸ್ವತಂ ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಮುದ್ದಹನುಮೇಗೌಡರನ್ನು ಮುಗಿಸುವ ಸಲುವಾಗಿ ನನ್ನ ಇಲ್ಲಿಗೆ ಕರೆ ತಂದು ಸ್ಪರ್ಥಿಸುವಂತೆ ಮಾಡಿದರು ಎಂದು ತುಮಕೂರಿನಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಮಾಜಿ ‌ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಕಾಂಗ್ರೆಸ್ ನಾಯಕರೇ ಮುದ್ದಹನುಮೇಗೌಡರನ್ನು ಟಾರ್ಗೆಟ್ ಮಾಡಿದರು ಅಂತ ಹೇಳಿದರು, ಇದಕ್ಕೆ ಯಾವೊಬ್ಬ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಲಿಲ್ಲ, ದೇವೇಗೌಡರು ಹೇಳಿದ್ದು ಸುಳ್ಳು ಅಂತ ಹೇಳಲಿಲ್ಲ, ವಿನಾಶಕಾರಿ ರಾಜಕಾರಣದ ಸೂತ್ರಧಾರರು ನನಗೆ ಟಿಕೆಟ್‌ ತಪ್ಪಿಸುವ ಕೆಲಸ ಮಾಡಿದ್ದಾರೆ ಕಿಡಿಕಾರಿದರು.

Tap to resize

Latest Videos

ಪಕ್ಷದ ಮುಖಂಡರು ಸೌಜನ್ಯಕಾದ್ರೂ ನನಗೆ ಕರೆ ಮಾಡಲಿಲ್ಲ. ಲೋಕಸಭೆ ಟಿಕೆಟ್ ಕೈ ತಪ್ಪಿದ ವೇಳೆ ರಾಹುಲ್‌ಗಾಂಧಿ ಮತ್ತು ಆಗಿನ ಜನರಲ್‌ ಸೆಕ್ರೆಟರಿಯಾದ ವೇಣುಗೋಪಾಲ್‌ ಅವರು ರಾಜಸಭೆ ಟಿಕೆಟ್ ನೀಡುವ  ಭರವಸೆ ನೀಡಿದ್ದರು, 2020 ರಾಜಸಭೆಯಲ್ಲಿ ಬೇರೆಯವರಿಗೆ ಅವಕಾಶ ನೀಡಿದರು. ಈಗಿನ ರಾಜ್ಯಸಭೆಯಲ್ಲೂ ನನಗೆ ಅವಕಾಶ ನೀಡಲಿಲ್ಲ, ಕನಿಷ್ಟ ಸೌಜನ್ಯಕ್ಕಾದ್ರೂ ಕರೆ ಮಾಡಲಿಲ್ಲ, ಈ ಕಾರಣಗಳಿಗಾಗಿಯೇ ರಾಜ್ಯಸಭೆ ಟಿಕೆಟ್‌ ನೀಡಲಿಲ್ಲ ಅಂತ ಹೇಳಲಿಲ್ಲ ಎಂದು ಅಸಮಧಾನ ಹೊರಹಾಕಿದರು.

ಮತ್ತೆ ಕೈ ತಪ್ಪಿದ ಟಿಕೆಟ್​: ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟ

ಸೌಜನ್ಯಕ್ಕಾದ್ರೂ ನನ್ನ ಜೊತೆಗೆ ಮಾತನಾಡುತ್ತಾರೆ ಎಂಬ ನಿರೀಕ್ಷೆಯಿ.ತ್ತು ಅದು ಕೂಡು ಹುಸಿಯಾಯ್ತು.‌ ನಾನು ರಾಜ್ಯಸಭೆ ಟಿಕೆಟ್‌ ಕೊಡಿ ಅಂತ ಯಾರ ಮನೆ ಬಾಗಿಲಿಗೆ ಹೋಗಲಿಲ್ಲ, ಅರ್ಜಿಯನ್ನು ಸಲ್ಲಿಸಲಿಲ್ಲ,  ಕೊಟ್ಟ ಮಾತನ್ನು ಪಕ್ಷದ ಮುಖಂಡರು ಉಳಿಸಿಕೊಳ್ಳಲಿಲ್ಲ, ಒಂದು ರಾಷ್ಟ್ರೀಯ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳದಿದ್ದಾಗ, ಕಾರ್ಯಕರ್ತರ ನಂಬಿಕೆಯನ್ನು ಕಾಂಗ್ರೆಸ್ ಹೇಗೆ ಉಳಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ವಿನಾಶಕಾರಿ ರಾಜಕಾರಣ ಮಾಡುವವರು ಬಹಳ ಕುಬ್ಜರು. ಕಳೆದ 20-30ವರ್ಷಗಳಿಂದ ಬಿ, ಫಾರಂ, ಸಿ ಫಾರಂ ಅಂತ ಆಟವಾಡಿಸಿದ್ದಾರೆ. ಕುಣಿಗಲ್ ನಾನು ಸ್ಪರ್ಧಿಸುವುದು ಖಚಿತ, ಡಿಕೆ ಶಿವಕುಮಾರ್ ಸಂಬಂಧಿ ಕುಣಿಗಲ್‌ನಲ್ಲಿ ಶಾಸಕರಿರಬಹುದು, ನಾನು ಎದುರಿಗೆ ಸ್ಪರ್ಧಿಸುತ್ತೇನೆ ಅನ್ನೋದು ಸಂಬಂಧವಿಲ್ಲ, ಅಲ್ಲಿ ನಿಲ್ಲುವ ಹಕ್ಕು ನನಗಿದೆ, ಕುಣಿಗಲ್  ತಾಲ್ಲೂಕಿನ ಜನ ನನ್ನ ಸ್ಪರ್ಧೆಯನ್ನು ಇಷ್ಟ ಪಟ್ಟಿದ್ದಾರೆ.ಹೀಗಾಗಿ  ನಾನು ಕುಣಿಗಲ್‌ ನಿಂದ ಸ್ಪರ್ಧಿಸುತ್ತೇನೆ. ನಾನು ಯಾವ ಪಕ್ಷದಿಂದ ಸ್ಪರ್ಧಿಸಬೇಕೆಂದು‌ ಮುಂದಿನ ನಡೆಯನ್ನು ನನ್ನ ಬೆಂಬಲಿಗರ ಜೊತೆಗೆ ಸಭೆ ನಡೆಸಿ ತೀರ್ಮಾನ ಮಾಡ್ತೇನೆ ಎಂದು ಸ್ಪಷ್ಟಪಡಿಸಿದರು.

click me!