
ವರದಿ: ರವಿ ಶಿವರಾಮ್, ಏಷ್ಯಾ ನೆಟ್ ಸುವರ್ಣ ನ್ಯೂಸ್
ಬೆಂಗಳೂರು (ಮೇ.30): ರಾಜ್ಯಸಭೆಗೆ (Rajya Sabha) ಜಗ್ಗೇಶ್ (Jaggesh) ರನ್ನು ಆಯ್ಕೆ ಮಾಡಿದ್ದಕ್ಕೆ ಪಾರ್ಟಿಯಲ್ಲಿ ಆಂತರಿಕವಾಗಿ ಭಿನ್ನ ಚರ್ಚೆ ಶುರುವಾಗಿದೆ. ಜಗ್ಗೇಶ್ ಪಾರ್ಟಿಯಲ್ಲಿ ಸಕ್ರಿಯ ಇರಲಿಲ್ಲ, ಅವರು ಪಕ್ಷದ ಕೆಲಸಕ್ಕೆ ಸಮಯ ನೀಡ್ತಾ ಇರಲಿಲ್ಲ, ಪಾರ್ಟಿಗೆ ಅವರ ಕೊಡುಗೆ ಏನು ಇತ್ಯಾದಿ ಚರ್ಚೆಗಳು ರಾಜ್ಯ ಬಿಜೆಪಿ (BJP) ವಲಯದಲ್ಲಿ ಆರಂಭವಾಗಿದೆ. ಆದ್ರೆ ಹೈಕಮಾಂಡ್ ಲೆಕ್ಕಾಚಾರ ಬೇರೆ ಇದ್ದಂತೆ ಕಾಣ್ತಿದೆ.
ರಾಜ್ಯಸಭೆಗೆ ಬಿಜೆಪಿ ರಾಜ್ಯದಿಂದ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರನ್ನು ಎರಡನೇ ಅವಧಿಗೆ ಪುನರ್ ಆಯ್ಕೆ ಮಾಡಿದರೆ, ಅಚ್ಚರಿ ಎಂಬಂತೆ ನಟ, ಹಾಲಿ ಬಿಜೆಪಿ ವಕ್ತಾರ ಜಗ್ಗೇಶ್ ಹೆಸರನ್ನು ಬಿಜೆಪಿ ಹೈಕಮಾಂಡ್ ಘೋಷಣೆ ಮಾಡಿದೆ.
2018 ರ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ, ಎಸ್ ಟಿ ಸೋಮಶೇಖರ್ ವಿರುದ್ಧ ಸೋತಿದ್ದ ಜಗ್ಗೇಶ್ , ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ್ರು. ಪುನಃ ಎಸ್ ಟಿ ಸೋಮಶೇಖರ್ ಬಿಜೆಪಿಯಿಂದ ಯಶವಂತಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಗೆಲುವು ಪಡೆದು ಈಗ ಸಚಿವರಾಗಿದ್ದಾರೆ.
UDUPIಯ ಈ ಗ್ರಾಮಕ್ಕೆ ಬಂದರೆ ಮದ್ಯ -ತಂಬಾಕು ಸಿಗುವುದಿಲ್ಲ!
ಜಗ್ಗೇಶ್ ಆಯ್ಕೆ ಯಾಕೆ?: ಜಾತಿಯಿಂದ ಜಗ್ಗೇಶ್ ಒಕ್ಕಲಿಗ. ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಗಟ್ಟಿಯಾದ ನೆಲೆ ಇಲ್ಲ. ಆ ಭಾಗದಲ್ಲಿ ಪಕ್ಷವನ್ನು ಗಟ್ಟಿ ಮಾಡಲು, ಒಕ್ಕಲಿಗ ಸಮುದಾಯದ ಮತಗಳು ಅನಿವಾರ್ಯ. ಹಾಗಂತ ಒಕ್ಕಲಿಗ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ನೀಡದೆ ಕೇವಲ ಒಕ್ಕಲಿಗ ಮತವನ್ನು ಸೆಳೆಯೋದು ಮತ್ತು ಸಂಘಟನೆ ಮಾಡೋದು ಸುಲಭವಲ್ಲ. ಹೀಗಾಗಿ ಸಿನಿಮಾ ಕ್ಷೇತ್ರದಲ್ಲಿ ಹೆಸರಾಗಿರುವ, ಹೆಚ್ಚು ಜನರಿಗೆ ರೀಚ್ ಆಗಬಲ್ಲ, ಪಕ್ಷದ ತತ್ವ ಸಿದ್ಧಾಂತಗಳನ್ನು ಗಟ್ಟಿಯಾಗಿ ಸಮರ್ಥನೆ ಮಾಡಿಕೊಳ್ಳಬಲ್ಲ ಸಾಮರ್ಥ್ಯ ಜಗ್ಗೇಶ್ ಗೆ ಇದೆ.
ಮೂಲತಃ ಕಲಾವಿದನಾಗಿದ್ದರಿಂದ ಸಹಜವಾಗಿ ಜಗ್ಗೇಶ್ ಅವರಿಗೆ ಜನಾಕರ್ಶಣೆ ಇದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯಾದ್ಯಂತ ಸ್ಟಾರ್ ಪ್ರಚಾರಕನಾಗಿ ಜಗ್ಗೇಶ್ ರನ್ನು ಬಳಸಿಕೊಳ್ಳಬಹುದು ಎಂಬುದು ಹೈಕಮಾಂಡ್ ಲೆಕ್ಕಾಚಾರ ಇದ್ದಂತೆ ಇದೆ. ಅದು ಅಲ್ಲದೇ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಬಲ ಪಡಿಸಲು ಒಕ್ಕಲಿಗ ಮತಗಳ ಕ್ರೂಢೀಕರಿಸುವ ಅಗತ್ಯ ಇದೆ ಎನ್ನುವ ಸಲಹೆಯನ್ನು ಬಿಜೆಪಿ ವರಿಷ್ಠ ನಾಯಕ ಅಮಿತ್ ಶಾ ರಾಜ್ಯಕ್ಕೆ ಬಂದಂತ ಸಮಯದಲ್ಲಿ ರಾಜ್ಯ ನಾಯಕರಿಗೆ ಸೂಚನೆ ಕೂಡ ನೀಡಿದ್ರು. ಹೀಗಾಗಿ ಒಕ್ಕಲಿಗ ಸಮುದಾಯದ ಜನಪ್ರಿಯ ವ್ಯಕ್ತಿಯಾದ ಜಗ್ಗೇಶ್ ಗೆ ಪಕ್ಷ ಮಣೆ ಹಾಕಿದೆ ಎಂಬುದು ರಾಜಕೀಯ ಲೆಕ್ಕಾಚಾರ.
ಮೊಣಕೈ ನೋವಿಗೆ ಆಸ್ಪತ್ರೆಗೆ ದಾಖಲಾದವಳು ಸಾವು, ಖಾಸಗಿ ಆಸ್ಪತ್ರೆ ವಿರುದ್ಧ ಎಫ್ ಐಆರ್ ದಾಖಲು
ನಿರೀಕ್ಷೆ ಇರಲಿಲ್ಲ ಎಲ್ಲಾ ರಾಯರ ಆಶಿರ್ವಾದ ಎಂದ ಜಗ್ಗೇಶ್: ರಾಜ್ಯಸಭೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಡಿಸಿದ ಜಗ್ಗೇಶ್,
ನನಗೆ ಹಿರಿಯರು ಫೋನ್ ಮಾಡಿ ದಾಖಲೆ ರೆಡಿಮಾಡಿಕೊಳ್ಳಲು ಹೇಳಿದ್ರು. ಆದ್ರೆ ಆಗಲೂ ನನಗೆ ನಂಬಿಕೆ ಇರಲಿಲ್ಲ. ನಾನು ಟಿಕೆಟ್ ಪಡೆಯಲು ಯಾವುದೇ ಪ್ರಯತ್ನ ಕೂಡ ಮಾಡಿಲ್ಲ. ಯಾವ ಹುದ್ದೆಯನ್ನೂ ಕೇಳಿರಲಿಲ್ಲ.
ಕಳೆದ ಬಾರಿ ಕಡೆಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದ್ರು. ಆಗ ನಾನು ಟಿಕೆಟ್ ಬೇಡ ಎಂದಿದ್ದೆ. ಕಾರಣ ನಾವು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾದರೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರಬೇಕು. ಆದ್ರೂ ಪಕ್ಷದ ಸೂಚನೆ ಹಿನ್ನಲೆಯಲ್ಲಿ ಸ್ಪರ್ಧೆ ಮಾಡಿ,12 ಸಾವಿರ ಇದ್ದ ಮತಗಳನ್ನು 61ಸಾವಿರ ಮತಕ್ಕೆ ತಂದಿದ್ದೆ. ಅದು ನನಗೂ ಆಶ್ಚರ್ಯ ಆಗಿತ್ತು. ಜೊತೆಗೆ ಇದರಿಂದ ನನಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಹೀಗಾಗಿ ನನ್ನ ವೃತ್ತಿಯಲ್ಲಿ ಮುಂದುವರೆಯಿತ್ತಿದ್ದೆ. ಪಕ್ಷ ನನಗೆ ವಕ್ತಾರ ಹುದ್ದೆ ಕೊಟ್ಟಿತ್ತು, ನಾನು ಸಂಪೂರ್ಣವಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲಸ ಮಾಡುತ್ತಿದ್ದೆ. ಈಗ ಸಂಪೂರ್ಣ ರಾಯರ ಆಶಿರ್ವಾದದಿಂದ ನನಗೆ ಟಿಕೆಟ್ ಸಿಕ್ಕಿದೆ ಎಂದು ಜಗ್ಗೇಶ್ ಹೇಳಿಕೆ ನೀಡಿದ್ದಾರೆ.
ಕನ್ನಡ ಡಿಂಡಿಮವಾ ರಾಷ್ಟ್ರ ಮಟ್ಟದಲ್ಲಿ ಬಾರಿಸುವೆ: ಇನ್ನು ಭಾಷೆ ವಿಚಾರವಾಗಿ ಮಾತನಾಡಿದ ಜಗ್ಗೇಶ್, ನನಗೆ ಭಾಷೆ ಸಮಸ್ಯೆ ಇಲ್ಲ. ನಾನು ಹಿಂದಿ, ಇಂಗ್ಲಿಷ್, ಕನ್ನಡ ತಮಿಳ್ ಈ ಎಲ್ಲಾ ಭಾಷೆ ಮಾತನಾಡುತ್ತೇನೆ. ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ ಎಂದ ಜಗ್ಗೇಶ್, ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಹಿರಿಯರ ಸಲಹೆ ಪಡೆಯುತ್ತೇನೆ ಎಂದರು. ಕಾಯಾ ವಾಚಾ ಮನಸಾ ಕನ್ನಡದ ಡಿಂಡಿಮವನ್ನ ಖಂಡಿತವಾಗಿ ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸದ ಮಾತುಗಳನ್ನು ಆಡಿದ್ರು. ಇನ್ನು ಮಾಧ್ಯಮದವರು ಹಿಂದಿ ಹೇರಿಕೆ ಬಗ್ಗೆ ಪ್ರಶ್ನೆ ಮಾಡಿದಾಗ ಈಗ ಆ ಬಗ್ಗೆ ಪ್ರತಿಕ್ರಿಯೆ ನೀಡೋದಿಲ್ಲ. ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೇನೆ, ಎಲ್ಲರ ಹಾರೈಕೆ ಇರಲಿ ಎಂದರು.
ಮಾಧ್ಯಮಕ್ಕೆ ಧನ್ಯವಾದಗಳು: ಇದೇ ವೇಳೆ ಮಾಧ್ಯಮದ ಪಾತ್ರ ನೆನೆದ ಜಗ್ಗೇಶ್, ನನ್ನ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರ ಬಹಳ ದೊಡ್ಡದಿದೆ.ನಾನು ಹಳ್ಳಿಯಿಂದ ಬಂದವ ನನ್ನ ಬೆಳೆಸಿದ್ದು ಮಾಧ್ಯಮ. ನನ್ನ ಕರೆದು ಪ್ರೋತ್ಸಾಹ ಮಾಡಿದ್ದು ಮಾಧ್ಯಮ ಎಂದು ಮಾಧ್ಯಮದವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.