ಎರಡೂವರೆ ವರ್ಷದಿಂದ ಟಿಟಿಡಿ ಸದಸ್ಯನಾಗಿದ್ದೇನೆ. ಅಂದಿನಿಂದಲೂ ಕ್ಷೇತ್ರದ ಜನತೆಯ ಬಿಜೆಪಿ ಪಕ್ಷದವರೂ ಅಂತೇನಿಲ್ಲ. ಯಾವುದೇ ಪಕ್ಷದವರು ಬಂದರೂ ಜೊತೇಲಿ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿಸುತ್ತೇನೆ. ನಾನು ದೇವಸ್ಥಾನದಲ್ಲಿ ರಾಜಕೀಯ ಮಾತನಾಡುವುದೇ ಇಲ್ಲ. ನಾನು ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಆಣೆ ಪ್ರಮಾಣ ಹಿಂದೆಯೂ ಮಾಡಿಸಿಲ್ಲ. ಮುಂದೇನೂ ಮಾಡಿಸಲ್ಲ: ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್
ದಾಬಸ್‌ಪೇಟೆ(ಮಾ.15): ನಾನು ಟಿಟಿಡಿ ಸದಸ್ಯತ್ವವನ್ನು ಮತಕ್ಕಾಗಿ, ರಾಜಕೀಯಕ್ಕಾಗಿ ಬಳಸಿಕೊಂಡಿಲ್ಲ. ಇದೆಲ್ಲಾ ವಿರೋಧಪಕ್ಷಗಳ ಷಡ್ಯಂತ್ರ, ಅವರ ಆರೋಪದಲ್ಲಿ ಹುರುಳಿಲ್ಲ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದರು.
ಸೋಂಪುರ ಹೋಬಳಿಯ ವಿವಿಧ ಗ್ರಾಮಗಳ ಜೆಡಿಎಸ್ ಮುಖಂಡರ ಮನೆಗಳಿಗೆ ತೆರಳಿ ಮೈತ್ರಿ ಕೂಟದ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿ ಮಾತನಾಡಿದ ಅವರು, ಎರಡೂವರೆ ವರ್ಷದಿಂದ ಟಿಟಿಡಿ ಸದಸ್ಯನಾಗಿದ್ದೇನೆ. ಅಂದಿನಿಂದಲೂ ಕ್ಷೇತ್ರದ ಜನತೆಯ ಬಿಜೆಪಿ ಪಕ್ಷದವರೂ ಅಂತೇನಿಲ್ಲ. ಯಾವುದೇ ಪಕ್ಷದವರು ಬಂದರೂ ಜೊತೇಲಿ ಕರೆದುಕೊಂಡು ಹೋಗಿ ದೇವರ ದರ್ಶನ ಮಾಡಿಸುತ್ತೇನೆ. ನಾನು ದೇವಸ್ಥಾನದಲ್ಲಿ ರಾಜಕೀಯ ಮಾತನಾಡುವುದೇ ಇಲ್ಲ. ನಾನು ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಆಣೆ ಪ್ರಮಾಣ ಹಿಂದೆಯೂ ಮಾಡಿಸಿಲ್ಲ. ಮುಂದೇನೂ ಮಾಡಿಸಲ್ಲ. ಅಂತಹ ಯೋಚನೆಯೂ ಮಾಡಿಲ್ಲ. ನಾನೇನಿದ್ದರೂ ಕೆಲಸ ಮಾಡಿ ಮತ ಹಾಕಿಸಿಕೊಳ್ಳುವವನು. ವಿರೋಧಪಕ್ಷದವರ ಆರೋಪದಲ್ಲಿ ಹುರುಳಿಲ್ಲ ಎಂದರು.
undefined
ಕಾಂಗ್ರೆಸ್‌ದು ಕೇವಲ ಚುನಾವಣೆ ಗಿಮಿಕ್ ಅಷ್ಟೇ: ಎಂಟಿಬಿ ನಾಗರಾಜ್
ಮೈತ್ರಿ ಅಭ್ಯರ್ಥಿಗೆ ಮತ ನೀಡಿ:
ಈಗಾಗಲೇ ದಕ್ಷಿಣಕಾಶಿ ಶಿವಗಂಗೆಯಲ್ಲಿ ನೆಲಮಂಗಲ ಕ್ಷೇತ್ರದ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ. ಇದೀಗ ಅನ್ಯಪಕ್ಷದ ಮುಖಂಡರನ್ನು ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದೇವೆ. ಈಗಾಗಲೇ ಜೆಡಿಎಸ್ ಮಾಜಿ ಶಾಸಕರು, ತಾಲೂಕು ಅಧ್ಯಕ್ಷರು ಭೇಟಿ ಮಾಡಿ ಮಾತನಾಡಿದ್ದೇವೆ. ರಾಜ್ಯದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಗೆಲವು ಸಾಧಿಸುವ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದ ಸಮಸಮಾಜ ನಿರ್ಮಾಣ: ಸಿಎಂ ಸಿದ್ದರಾಮಯ್ಯ
ಮಗನಿಗೆ ಟಿಕೆಟ್ ಕೊಡುವ ವಿಶ್ವಾಸ:
ಪ್ರಧಾನಿ ನರೇಂದ್ರ ಮೋದಿ ಯುವಜನತೆ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನ್ನ ಮಗನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದೇನೆ. ಕಳೆದ ೩ ತಿಂಗಳಿಂದಲೂ ಅಲೋಕ್ ವಿಶ್ವನಾಥ್ ಕ್ಷೇತ್ರಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪಣ ತೊಟ್ಟಿರುವ ನನ್ನ ಮಗನಿಗೆ ಟಿಕೆಟ್ ಕೊಡುವ ವಿಶ್ವಾಸವಿದೆ ಎಂದು ಹೇಳಿದರು.
ಯಾರಿಗೇ ಟಿಕೆಟ್ ಕೊಟ್ಟರೂ ಕೆಲಸ: ನನ್ನ ಮಗನಿಗೆ ಟಿಕೆಟ್ ಕೊಟ್ಟರೆ ಸಂತೋಷ. ಬೇರೆಯವರಿಗೆ ನೀಡಿದರೂ ಪಕ್ಷದ ಪರ ಕೆಲಸ ಮಾಡುತ್ತೇನೆ. ಮತ್ತೊಮ್ಮೆ ನರೇಂದ್ರಮೋದಿಯನ್ನು ಪ್ರಧಾನಿ ಮಾಡುವುದೇ ನಮ್ಮೆಲ್ಲರ ಗುರಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ವಿ.ನಾಗರಾಜು, ಪರಾಜಿತ ಅಭ್ಯರ್ಥಿ ಸಪ್ತಗಿರಿ ಶಂಕರ್ ನಾಯಕ್, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ, ಹೋಬಳಿ ಅಧ್ಯಕ್ಷ ಮುರುಳಿಗೌಡ, ಗ್ರಾಪಂ ಅಧ್ಯಕ್ಷರಾದ ರಾಹುಲ್ ಗೌಡ, ಹರ್ಷ ಮುಖಂಡರಾದ ರಾಯರಪಾಳ್ಯ ಮಹೇಶ್, ನರಸೀಪುರ ನಾಗರಾಜು, ವೀರಸಾಗರ ಮಂಜುನಾಥ್, ಗುಬ್ಬಣ್ಣಸ್ವಾಮಿ, ನಾಗರಾಜು ಹೃದಯವಂತ, ರುದ್ರಣ್ಣ, ಮಂಜುಳ, ಲತಾ ಇತರರಿದ್ದರು.