Karnataka Politics: 'ಕಾಂಗ್ರೆಸ್‌ನಿಂದ ಟೂಲ್‌ಕಿಟ್‌ ಟೆರರಿಸಂ'

By Kannadaprabha News  |  First Published Jun 2, 2022, 8:28 AM IST

*  ಕೈ ಟೂಲ್‌ ಕಿಟ್‌ ಟೆರರಿಸಂಗೆ ಬಲಿಪಶು ಆಗಬಾರದು
*  ಮುಗ್ಧ ಜನರಲ್ಲಿ, ಸಾಹಿತಿಗಳನ್ನ ಉದ್ರೇಕಗೊಳಿಸುವ ಪರಿಸ್ಥಿತಿ ಕಾಂಗ್ರೆಸ್‌ ಮಾಡುತ್ತಿದೆ
*  ಬರಗೂರು ರಾಮಚಂದ್ರಪ್ಪ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ
 


ಬೆಳಗಾವಿ(ಜೂ.02): ಪಠ್ಯಕ್ರಮದ ವಿಷಯದಲ್ಲಿ ಜನರ ಭಾವನೆ ಉದ್ರೇಕಗೊಳಿಸುವುದು, ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್‌ನ ಕೀಳುಮಟ್ಟದ ಟೂಲ್‌ ಕಿಟ್‌ ಟೆರರಿಸಂ ಎಂದು ಶಾಸಕ ಪಿ.ರಾಜೀವ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಗ್ಧ ಜನರಲ್ಲಿ, ಸಾಹಿತಿಗಳಲ್ಲಿ ಅವರನ್ನು ಉದ್ರೇಕಗೊಳಿಸುವ ಪರಿಸ್ಥಿತಿ ಕಾಂಗ್ರೆಸ್‌ ಮಾಡುತ್ತಿದೆ. ಹಿಟ್‌ ಆ್ಯಂಡ್‌ ರನ್‌ ಎಂಬುವುದು ಕಾಂಗ್ರೆಸ್‌ನಲ್ಲಿದೆ. ಬಿಟ್‌ ಕಾಯಿನ್‌, ಸಾಹಿತ್ಯದ ವಿಷಯ ತೆಗೆದುಕೊಳ್ಳುತ್ತಾರೆ. ಅದು ಪೂರ್ಣಗೊಳ್ಳುವುದು ಕಡಿಮೆ. ಈಗ ಪಠ್ಯ ಕ್ರಮದ ಬಗ್ಗೆ ಅಪಸ್ವರ ಎತ್ತಿರುವ ಕಾಂಗ್ರೆಸ್‌ ಟೂಲ್‌ ಕಿಟ್‌ ಟೆರರಿಸಂ ಎಂದು ಹರಿಹಾಯ್ದರು. ಪಠ್ಯಕ್ರಮ ಪರಿಷ್ಕರಣೆಯಲ್ಲಿ ಏನೇಲ್ಲ ಆಗಿಲ್ಲವೋ ಅದು ಆಗಿದೆ ಎಂದು ಸಾಹಿತಿಗಳನ್ನು ಉದ್ರೇಕಗೊಳಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಸಾಹಿತಿಗಳಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ, ಕಾಂಗ್ರೆಸ್‌ ಮಾತಿಗೆ ಗೌರವ ಕೊಡಬೇಡಿ ಎಂದರು.

Tap to resize

Latest Videos

ಕಾಂಗ್ರೆಸ್‌ನಿಂದ ಹೊರನಡೆದ ಮತ್ತೊಬ್ಬ ನಾಯಕ: ಆಮ್‌ ಆದ್ಮಿಯಾಗ್ತಾರ ಬ್ರಿಜೇಶ್‌ ಕಾಳಪ್ಪ?

ಬಸವಣ್ಣನವರ ವಚನ ಕೈಬಿಟ್ಟಿಲ್ಲ:

ಯಾವ ಕಾರಣಕ್ಕೂ ಪಠ್ಯದಲ್ಲಿ ಯಾರನ್ನೂ ನೋಯಿಸುವ ಕೆಲಸವನ್ನು ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ಮಾಡಿಲ್ಲ. 2014-​15ರಲ್ಲಿ ಬಡಂಬಡಿಪ್ಪಾಯ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಪಠ್ಯಕ್ರಮ ನೀಡಿತ್ತು. ಬಳಿಕ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರಗೂರು ರಾಮಚಂದ್ರ ಸಮಿತಿ ಸ್ಥಾಪಿಸಿತು. ಬರಗೂರು ರಾಮಚಂದ್ರ ಸಮಿತಿ ಹಿಂದಿನ ಪಠ್ಯಕ್ರಮ ಸಂಪೂರ್ಣ ಬದಲಾವಣೆ ಮಾಡಿತು. ಬರಗೂರು ಅವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಈ ನಾಡಿಗೆ ಅಕ್ಷರದ ಸೇವೆ ಕೊಟ್ಟಿದ್ದಾರೆ. ಹೀಗಾಗಿ ಅವರನ್ನು ಗೌರವಿಸುತ್ತೇನೆ. ಆದರೆ ಅವರ ಮೊಂಡು ವಾದ ಸರಿಯಲ್ಲ. ರೋಹಿತ ಚಕ್ರತೀರ್ಥ ಪಠ್ಯಕ್ರಮದ ಸಮಿತಿಯನ್ನು ಬರಗೂರು ರಾಮಚಂದ್ರಪ್ಪನವರು ವಿರೋಧ ಮಾಡುವವರು ಅವರು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಏನು ಮಾಡಿದರು ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದು ಪ್ರಶ್ನಿಸಿದರು.

ಬಸವಣ್ಣನವರ ವಚನಗಳನ್ನು ಪಠ್ಯಕ್ರಮದಲ್ಲಿ ಕೈಬಿಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರ ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬ್ರಿಟಿಷ್‌ ಆಡಳಿತದ ವಿರೋಧಿಗಳು ಎಂಬ ವಿಷಯದಲ್ಲಿ ಕೇವಲ ಟಿಪ್ಪು ಸುಲ್ತಾನ್‌, ಹೈದರಾಲಿ ಸೇರಿದಂತೆ ಕೆಲವೇ ಕೆಲವು ಜನರ ವಿಷಯ ಹಾಕಿದ್ದರು. ಯಾಕೆ ಕಿತ್ತೂರು ರಾಣಿ ಚೆನ್ನಮ್ಮ, ವೀರಮದಕರಿ ಅಂಥವರ ಹೆಸರನ್ನು ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಮೆಚ್ಚಿಸಲು ಬದಲಾವಣೆ:

ರೋಹಿತ್‌ ಚಕ್ರತೀರ್ಥ ಸಮಿತಿ ವಿರುದ್ಧ ಕುವೆಂಪು ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಅವರು, ಬರಗೂರು ರಾಮಚಂದ್ರಪ್ಪ ಸಮಿತಿ ಕುವೆಂಪು ಅವರ ಎಂಟು ಕೃತಿಗಳನ್ನು ಏಳಕ್ಕೆ ಇಳಿಸಿತ್ತು. ಆದರೆ ರೋಹಿತ್‌ ಚಕ್ರತೀರ್ಥ ಸಮಿತಿ ಏಳಕ್ಕೆ ಇದ್ದ ಸಂಖ್ಯೆಯನ್ನು ಹತ್ತಕ್ಕೆರಿಸಿದೆ. ಬರಗೂರು ರಾಮಚಂದ್ರಪ್ಪನವರಿಗೆ ಏಕೆ ಅಸಹನೆ ಹುಟ್ಟುತ್ತಿದೆ? ಭಗತ್‌ಸಿಂಗ್‌ ಪಠ್ಯ ತೆಗೆಯಲಾಗಿದೆ ಎಂದು ಕಾಂಗ್ರೆಸ್‌ ಸುಳ್ಳು ಆರೋಪ ಮಾಡುತ್ತಿದ್ದು, ಭಗತ್‌ಸಿಂಗ್‌ ಜತೆಗೆ ರಾಜಗುರು ಸುಖದೇವ್‌ ವಿವರ ಪಠ್ಯದಲ್ಲಿ ಅಳವಡಿಸಲಾಗಿದೆ. ಬರಗೂರು ರಾಮಚಂದ್ರಪ್ಪ ಸಿದ್ದರಾಮಯ್ಯ ಅವರನ್ನು ಓಲೈಸಲು ಏನೆಲ್ಲ ಮಾಡಿದ್ದಾರೆ ನೆನಪಿಸಿಕೊಳ್ಳಲಿ ಎಂದರು.

National Herald case: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿ ಸಮನ್ಸ್!

ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ದಾದಾಗೌಡಾ ಬಿರಾದಾರ, ಮುರುದ್ರಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೈ ಟೂಲ್‌ ಕಿಟ್‌ ಟೆರರಿಸಂಗೆ ಬಲಿಪಶು ಆಗಬಾರದು

ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವೀರ ಮದಕರಿ, ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮದ ಹೆಸರು ಸೇರಿಸುವ ಕನಿಷ್ಠ ಜ್ಞಾನ ಬರಗೂರು ರಾಮಚಂದ್ರರಿಗೆ ಇಲ್ವಾ? ಇದನ್ನು ಸುಧಾರಣೆ ಮಾಡುವ ಪ್ರಯತ್ನ ರೋಹಿತ್‌ ಚಕ್ರತೀರ್ಥ ಮಾಡಿದ್ದು ತಪ್ಪಾ? ಬರಗೂರು ರಾಮಚಂದ್ರಪ್ಪ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ ಕೈಬಿಟ್ಟಿದ್ದ ಹಲವಾರು ಮಹಾತ್ಮರ ಉದಾತ್‌ ಚಿಂತನೆಗಳನ್ನು ರೋಹಿತ್‌ ಚಕ್ರತೀರ್ಥ ಸಮಿತಿ ಸೇರ್ಪಡೆ ಮಾಡಿದೆ. ಪ್ರಸಿದ್ಧ ದೇವಾಲಯಗಳು ಹಿಂದೂ ದೇವಾಲಯಗಳು, ಹಿಂದೂ ಧರ್ಮವಿಚಾರತನ ಧರ್ಮ ಪಾಠ, ಏಣಗಿ ಬಾಳಪ್ಪ ಜೀವನ ಕುರಿತ ನನ್ನ ಬಾಲ್ಯ, ಕಯ್ಯಾರ್‌ ಕಿಞ್ಞಣ್ಣ ರೈ ಅವರ ಕವನ ಕೆ.ಎಸ್‌.ನರಸಿಂಹಸ್ವಾಮಿ ಅವರ ಭಾರತೀಯತೆ ಕವನಗಳನ್ನು ಸೇರಿಸಲಾಗಿದೆ. ಕಾಂಗ್ರೆಸ್‌ನ ಟೂಲ್‌ ಕಿಟ್‌ ಟೆರರಿಸಂಗೆ ಈ ನಾಡಿನ ಜನತೆ ಬಲಿ ಪಶುಗಳು ಆಗಬಾರದು ಎಂದು ಮನವಿ ಮಾಡಿದರು.
 

click me!