ಚು. ಆಯೋಗದ ಮುಂದೆ ಟಿಎಂಸಿ ಪ್ರತಿಭಟನೆ: ಸಿಬಿಐ, ಇ.ಡಿ., ಐಟಿ, ಎನ್‌ಐಎ ಮುಖ್ಯಸ್ಥರ ಬದಲಿಸಲು ಮನವಿ

By Kannadaprabha NewsFirst Published Apr 9, 2024, 10:18 AM IST
Highlights

ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ., ಎನ್‌ಐಎ ಹಾಗೂ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರನ್ನು ಬದಲಿಸುವಂತೆ ಆಗ್ರಹಿಸಿ ಟಿಎಂಸಿ ಪಕ್ಷದ ನಾಯಕರು ಸೋಮವಾರ ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನವದೆಹಲಿ: ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ., ಎನ್‌ಐಎ ಹಾಗೂ ಆದಾಯ ತೆರಿಗೆ ಇಲಾಖೆಯ ಮುಖ್ಯಸ್ಥರನ್ನು ಬದಲಿಸುವಂತೆ ಆಗ್ರಹಿಸಿ ಟಿಎಂಸಿ ಪಕ್ಷದ ನಾಯಕರು ಸೋಮವಾರ ದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಜೊತೆಗೆ ಟಿಎಂಸಿ ಸಂಸದರಾದ ಡೆರಿಕ್‌ ಒಬ್ರಿಯಾನ್‌ ಅವರ ನಿಯೋಗ ಆಯೋಗಕ್ಕೆ ಮನವಿ ಸಲ್ಲಿಸಿತು. ಆದರೆ ಪ್ರತಿಭಟನೆ ಜೋರಾಗುತ್ತಿದ್ದಂತೆ ಡೆರೆಕ್‌ ಸೇರಿದಂತೆ ಟಿಎಂಸಿ ನಾಯಕರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದರು.

ಈ ಕುರಿತು ಮಾತನಾಡಿದ ಟಿಎಂಸಿ ನಾಯಕರ ನಿಯೋಗ, ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ವಿಪಕ್ಷಗಳ ನಾಯಕರ ಮೇಲೆ ದಾಳಿ ಮಾಡಲು ಬಳಸಿಕೊಳ್ಳುತ್ತಿದೆ. ಹಾಗಾಗಿ ಅದರ ಮುಖ್ಯಸ್ಥರನ್ನು ಬದಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದು ಹೇಳಿತು.

ಲೋಕ ಚುನಾವಣೆ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಂ.1 ಪಕ್ಷವಾಗಲಿದೆ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್

ಕೇಜ್ರಿವಾಲ್ ವಜಾ ಕೋರಿದ್ದ ಪಿಐಎಲ್ ಕೇವಲ ಪ್ರಚಾರಕ್ಕೆ: ಕೋರ್ಟ್ ಗರಂ

ನವದೆಹಲಿ : ಬಂಧನಕ್ಕೊಳಗಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು, ಅರ್ಜಿದಾರರ ವಿರುದ್ಧ ಗರಂ ಆಗಿದೆ.

ಕೇಜ್ರಿವಾಲ್‌ರನ್ನು ಸಿಎಂ ಸ್ಥಾನದಿಂದ ವಜಾಗೊಳಿಸುವಂತೆ ಸಲ್ಲಿಸಿದ್ದ 3ನೇ ಪಿಐಎಲ್‌ ಇದಾಗಿತ್ತು. ಮುಖ್ಯಮಂತ್ರಿ ಹುದ್ದೆಯನ್ನು ನಿರ್ವಹಿಸುವುದಕ್ಕೆ ಕೇಜ್ರಿ ಅಸಮರ್ಥರು ಎಂದು ಉಲ್ಲೇಖಿಸಲಾಗಿತ್ತು. ಈ ಅರ್ಜಿ ವಜಾಗೊಳಿಸಿದ ಕೋರ್ಟ್‌, ಇದು ಪಿಎಎಲ್ ಅರ್ಜಿ ಅಡಿಯಲ್ಲಿ ಬರುವುದಿಲ್ಲ. ಕೇಜ್ರಿವಾಲ್ ಸಮರ್ಥತೆಯನ್ನು ಪ್ರಶ್ನಿಸುವುದಾದರೆ, ಕ್ವೋ ವಾರಂಟೋ ರಿಟ್ ಮೊರೆ ಹೋಗಿ ಇದು ಪ್ರಚಾರಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿ. ಅರ್ಜಿದಾರರ ಮೇಲೇ ಭಾರಿ ದಂಡ ವಿಧಿಸುವ ಅರ್ಹ ಅರ್ಜಿ ಇದು ಎಂದು ಕೋರ್ಟ್‌ ಕಿಡಿಕಾರಿತು.

ಬಾಂಬ್ ಬ್ಲಾಸ್ಟ್‌ ಪ್ರಕರಣದ ತನಿಖೆಗೆ ಬಂದ ಎನ್‌ಐಎ ಅಧಿಕಾರಿಗಳ ವಿರುದ್ಧವೇ ಲೈಂಗಿಕ ಕಿರುಕುಳ ಕೇಸ್

click me!