ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಕೆ.ಟಿ ಶಾಂತಕುಮಾರ್, ಕುಮಾರಸ್ವಾಮಿಯಿಂದ ಸ್ವಾಗತ

By Gowthami K  |  First Published Feb 3, 2023, 4:04 PM IST

ತಿಪಟೂರು ವಿಧಾನ ಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರುವ ಶಾಂತಕುಮಾರ್ ಕಾಂಗ್ರೆಸ್ ನಲ್ಲಿ ಸಾಕಷ್ಟು ಪ್ರಯತ್ನಿಸಿದ್ರು, ಟಿಕೆಟ್ ಸಿಗುವುದು ಕಷ್ಟವಾದ ಪರಿಣಾಮ ಕೈ ಪಕ್ಷ  ತೊರೆದು ಜೆಡಿಎಸ್‌  ಸೇರ್ಪಡೆಯಾಗಿದ್ದಾರೆ.


ತುಮಕೂರು (ಫೆ.3): ತಿಪಟೂರಿನಲ್ಲಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿ ಜೆಡಿಎಸ್ ನತ್ತ ಮುಖ ಮಾಡಿದ ಕೆಟಿ ಶಾಂತಕುಮಾರ್ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಪಕ್ಷಕ್ಕೆ ಸ್ವಾಗತಿಸಿದ್ದಾರೆ.‌ ತಿಪಟೂರು ವಿಧಾನ ಸಭಾ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿರುವ ಶಾಂತಕುಮಾರ್ ಕಾಂಗ್ರೆಸ್ ನಲ್ಲಿ ಸಾಕಷ್ಟು ಪ್ರಯತ್ನಿಸಿದ್ರು, ಟಿಕೆಟ್ ಸಿಗುವುದು ಕಷ್ಟವಾದ ಪರಿಣಾಮ ಕೈ ಪಕ್ಷ  ತೊರೆದು ಜೆಡಿಎಸ್‌  ಸೇರ್ಪಡೆಯಾಗಿದ್ದಾರೆ. ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಪಕ್ಷದ ಸೇರ್ಪಡೆಗೊಂಡಿದ್ದಾರೆ.

ತಿಪಟೂರು ಕ್ಷೇತ್ರದಿಂದ ಸೂಕ್ತ ಜೆಡಿಎಸ್  ಅಭ್ಯರ್ಥಿ ಇಲ್ಲದೇ ಖಾಲಿಯಾಗಿತ್ತು. ಈ ಹಿಂದೆ ತುಮಕೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಸಲಾಗಿತ್ತು. ಆದರೆ ತಿಪಟೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಇಲ್ಲದ ಪರಿಣಾಮ ಪಂಚರತ್ನ ರಥಯಾತ್ರೆ ಕಾರ್ಯಕ್ರಮವನ್ನು ಜೆಡಿಎಸ್ ಮಾಡಿರಲಿಲ್ಲ, ಇದೀಗ ಕೆಟಿ ಶಾಂತಕುಮಾರ್ ಜೆಡಿಎಸ್ ಸೇರ್ಪಡೆಯಾಗುತ್ತಿರುವುದರಿಂದ ತಿಪಟೂರು ಕ್ಷೇತ್ರದಲ್ಲಿ  ಜೆಡಿಎಸ್ ಗೆ ಶಕ್ತಿ ತುಂಬಿದಂತಾಗಿದೆ.

Latest Videos

undefined

ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿಎಂ ಇಬ್ರಾಹಿಂ, ಶಾಸಕ ಬಾಲಕೃಷ, ಮಾಜಿ ಶಾಸಕ ಕೃಷ್ಣಪ್ಪ, ಸುರೇಶ್ ಬಾಬು, ಡಿ.ನಾಗರಾಜಯ್ಯ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು.

Assembly election: ಜೆಡಿಎಸ್‌ ಬಹುಮತದೊಡನೆ ಅಧಿಕಾರಕ್ಕೆ ಬರಲು ಸಹಕರಿಸಿ: ಶಾಸಕ ಕೆ. ಮಹದೇವ್‌ ಮನವಿ

ಮೃತ ಅಭ್ಯರ್ಥಿ ಪತ್ನಿಗೆ ಜೆಡಿಎಸ್‌ ಟಿಕೆಟ್‌ ಘೋಷಣೆ
ವಿಜಯಪುರ: 2023ರ ವಿಧಾನ ಸಭಾ ಚುನಾವಣೆಯ ಸಿಂದಗಿ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ದಿ.ಶಿವಾನಂದ ಪಾಟೀಲ ಅವರ ಪತ್ನಿ ವಿಶಾಲಾಕ್ಷಿ ಪಾಟೀಲ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದರು.

ಅರಸೀಕೆರೆಯಲ್ಲಿ ಶುರುವಾಯ್ತು ಜೆಡಿಎಸ್‌ ಟಿಕೆಟ್‌ ಫೈಟ್: ಶಿವಲಿಂಗೇಗೌಡ ಬಗ್ಗೆ ರೇವಣ್ಣ ಫ್ಯಾಮಿಲಿ ಏನಂದ್ರು?

ಪಟ್ಟಣದ ಶಹಾಪೂರ ಪೆಟ್ರೋಲ್‌ ಪಂಪ್‌ ಹತ್ತಿರ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದಿ.ಶಿವಾನಂದ ಪಾಟೀಲರು ನನಗೊಂದು ಮಾತು ಹೇಳಿದ್ದರು, ನಿಮ್ಮ ಪ್ರೀತಿ, ಸಹಕಾರ ನನ್ನ ಮೇಲೆ ಇದ್ದರೆ ನನಗೊಂದು ಅವಕಾಶ ನೀಡಿ. ನಿಮ್ಮ 123ರ ಕನಸಿನ ಹಾಗೆ ನಾನೊಬ್ಬ ಶಾಸಕನಾಗಿ ನಿಮ್ಮ ಜೊತೆಗೆ ವಿಧಾನಸೌಧದ ಮೆಟ್ಟಿಲೇರುವೆ ಎಂಬ ಶಕ್ತಿಯನ್ನು ತುಂಬಿದ್ದರು. ಆದರೆ ಜ.20ರಂದು ಜೆಡಿಎಸ್‌ ಅಭ್ಯರ್ಥಿಯಾಗಿದ್ದ ದಿ.ಶಿವಾನಂದ ಪಾಟೀಲ್‌ ಅವರ ಅಕಾಲಿಕವಾಗಿ ಮರಣ ಹೊಂದಿದರು. ಈ ಹಿನ್ನೆಲೆಯಲ್ಲಿ ಸಿಂದಗಿಯಲ್ಲಿ ಹಮ್ಮಿಕೊಂಡ ನುಡಿ ನಮನ ಕಾರ್ಯಕ್ರಮಕ್ಕೆ ನಾನು ಕೇವಲ ಶಿವಾನಂದ ಪಾಟೀಲರಿಗೆ ಶ್ರದ್ಧಾಂಜಲಿ ಅಥವಾ ನುಡಿ ನಮನ ಸಲ್ಲಿಸಲು ಬಂದಿಲ್ಲ. ಈ ನನ್ನ ತಂಗಿಯನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಿ.ಶಿವಾನಂದ ಪಾಟೀಲ ಅವರ ಆತ್ಮಕ್ಕೆ ಶಾಂತಿ ನೀಡುವ ಹಾಗೆ ಸಿಂದಗಿ ಜನತೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.

click me!