ಸೋನಿಯಾ, ರಾಹುಲ್‌ ಇಟಲಿಗೆ ಮರಳುವ ಕಾಲ ಸನ್ನಿಹಿತ: ಕಟೀಲ್‌

By Kannadaprabha News  |  First Published Oct 14, 2022, 12:15 PM IST

ನರೇಂದ್ರ ಮೋದಿ ಇಡೀ ದೇಶದ ಜನರ ಮನಸ್ಸು ಆವರಿಸಿದ್ದಾರೆ. ಹೀಗಾಗಿ ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಕಾಂಗ್ರೆಸ್‌ ಕಾಲು ಕಿತ್ತಿದೆ. ಈ ಕಾರಣದಿಂದ ತಾಯಿ-ಮಗ ಇಬ್ಬರೂ ಮರಳಿ ಇಟಲಿಗೆ ಹೋಗುವ ಸಮಯ ಬಂದಾಗಿದೆ: ಕಟೀಲ್‌


ಕಲಘಟಗಿ(ಅ.14):  ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಮರಳಿ ಇಟಲಿಗೆ ಹೋಗುವ ಸಮಯ ಬಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪರಿವರ್ತನೆ ಬಿಜೆಪಿಯಿಂದ ಪ್ರಾರಂಭವಾಗಿದೆ. ನರೇಂದ್ರ ಮೋದಿ ಅವರು ಇಡೀ ದೇಶದ ಜನರ ಮನಸ್ಸು ಆವರಿಸಿದ್ದಾರೆ. ಹೀಗಾಗಿ ಈಗಾಗಲೇ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದ್ದು ಕಾಂಗ್ರೆಸ್‌ ಕಾಲು ಕಿತ್ತಿದೆ. ಈ ಕಾರಣದಿಂದ ತಾಯಿ-ಮಗ ಇಬ್ಬರೂ ಮರಳಿ ಇಟಲಿಗೆ ಹೋಗುವ ಸಮಯ ಬಂದಾಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮಾತನಾಡಿ, ಪ್ರತಿಯೊಂದು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ನಶಿಸಿ ಹೋಗುತ್ತಿದೆ. ಮನಮೋಹನ್‌ ಸಿಂಗ್‌ ಪ್ರಧಾನಿ ಇದ್ದಾಗ ಸಾಲು ಸಾಲು ಭ್ರಷ್ಟಾಚಾರದ ಹಗರಣಗಳು ನಡೆದವು. ಸಿದ್ದರಾಮಯ್ಯ 900 ಕೋಟಿ ಅರ್ಕಾವತಿ ಡಿ ನೋಟಿಫಿಕೇಶನ್‌ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ಡಿ.ಕೆ. ಶಿವಕುಮಾರ ಅಕ್ರಮ ಹಣ ವರ್ಗಾವಣೆ ತೊಡಗಿದ್ದು ಸಿಬಿಐ ತನಿಖೆ ಎದುರಿಸಿದ್ದಾರೆ. ಇವರನ್ನು ನಾಡಿನ ಜನ ಹೇಗೆ ನಂಬುತ್ತಾರೆ ಎಂದು ಪ್ರಶ್ನಿಸಿದರು.

Tap to resize

Latest Videos

ನನ್ನನ್ನು ಸಭಾಪತಿ ಮಾಡಲು ನಾಲ್ವರ ವಿರೋಧ: ಬಸವರಾಜ ಹೊರಟ್ಟಿ

ಶಾಸಕ ಸಿ.ಎಂ. ನಿಂಬಣ್ಣವರ ಅವರು ಈ ಭಾಗದಲ್ಲಿ ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದಾರೆ. ನೂರಾರು ಕೋಟಿ ಅನುದಾನ ತಂದು ಮತ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕಲಘಟಗಿ ಮುಂದಿನ ದಿನಗಳಲ್ಲಿ ಸ್ಥಳೀಯರನ್ನು ಆಯ್ಕೆ ಮಾಡುವ ಮುಖಾಂತರ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಂತೋಷ ಲಾಡ್‌ ಅವರಿಗೆ ಮಣೆ ಹಾಕಬೇಡಿ ಎಂದು ಪರೋಕ್ಷವಾಗಿ ಕಟೀಲ್‌ ಹೇಳಿದರು.

ಪಪಂ ಸದಸ್ಯ ಸುನೀಲ ಗಬ್ಬೂರ ಅವರ ಮನೆಗೆ ತೆರಳಿದ ನಳಿನ್‌ ಕುಮಾರ್‌ ಕಟೀಲ್‌ ಹಾಗೂ ಮುಖಂಡರು ಅಲ್ಪ ಉಪಾಹಾರ ಸೇವಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್‌, ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಬಸವರಾಜ ಶರೇವಾಡ, ಸದಾನಂದ ಚಿಂತಾಮಣಿ, ಫಕ್ಕೀರೇಶ ನೇಸ್ರೇಕರ, ಸೋಮು ಕೂಪ್ಪದ, ನಿಂಗಪ್ಪ ಸುತಗಟ್ಟಿ ಇದ್ದರು.
 

click me!