ಸೋನಿಯಾ ಕಾಲಿಗೆ ಬಿದ್ದು ಸಿಎಂ ಆದ ಸಿದ್ದು: ನಳಿನ್‌ ಕುಮಾರ್‌ ಕಟೀಲ್‌

By Govindaraj S  |  First Published Oct 14, 2022, 1:00 AM IST

ಭಿಕ್ಷೆ ಬೇಡಿ, ಕಾಲಿಗೆ ಬಿದ್ದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ಬಿಜೆಪಿ ಮಾಡುತ್ತಿರುವ ಯಾತ್ರೆಯ ಬಗ್ಗೆ ಮಾತನಾಡಲು ನೈತಿಕತೆ ಹೊಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಿದ್ದರಾಮಯ್ಯ ಅವರಿಗೆ ಮಾತಿನ ಏಟು ನೀಡಿದ್ದಾರೆ.


ಧಾರವಾಡ (ಅ.14): ಭಿಕ್ಷೆ ಬೇಡಿ, ಕಾಲಿಗೆ ಬಿದ್ದು ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ, ಬಿಜೆಪಿ ಮಾಡುತ್ತಿರುವ ಯಾತ್ರೆಯ ಬಗ್ಗೆ ಮಾತನಾಡಲು ನೈತಿಕತೆ ಹೊಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಸಿದ್ದರಾಮಯ್ಯ ಅವರಿಗೆ ಮಾತಿನ ಏಟು ನೀಡಿದ್ದಾರೆ. ಧಾರವಾಡದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾತ್ರೆ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾರು? ಕಾಂಗ್ರೆಸ್‌ ಪಾದಯಾತ್ರೆ ಈಗ ಆರಂಭವಾಗಿದೆ. ಬಿಜೆಪಿ ಯಾತ್ರೆಯಿಂದಲೇ ಬೆಳೆದಿದೆ. ಅದೇ ಯಾತ್ರೆಯಿಂದಲೇ ಅಧಿಕಾರಕ್ಕೂ ಬಂದಿದೆ. 

ಯಾತ್ರೆಯಲ್ಲಿ ನಾಲ್ಕು ಕಿಮೀ ನಡೆಯಲಿ ಎಂದು ಬಿ.ಎಸ್‌. ಯಡಿಯೂರಪ್ಪ ಅವರ ಬಗ್ಗೆ ಮತನಾಡಿರುವ ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಅವರ ಯಾತ್ರೆ ಬಗ್ಗೆ ಗೊತ್ತಿಲ್ಲವೇ? ಅವರು ಮಾಡಿರುವಷ್ಟುಯಾತ್ರೆ ರಾಜ್ಯದಲ್ಲಿ ಯಾರೂ ಮಾಡಿಲ್ಲ. ಸೈಕಲ್‌ ಯಾತ್ರೆಯಿಂದಲೇ ಬಿ.ಎಸ್‌. ಯಡಿಯೂರಪ್ಪ ರಾಜ್ಯದ ಜನತೆ ಗಮನ ಸೆಳೆದವರು. ಜೆಡಿಎಸ್‌ನಲ್ಲಿದ್ದಾಗ ಇಂದಿರಾ ಗಾಂಧಿ ಅವರನ್ನು ಕೆಟ್ಟಶಬ್ದಗಳಿಂದ ನಿಂದಿಸಿದ ಸಿದ್ದರಾಮಯ್ಯ ಆನಂತರ ಕಾಂಗ್ರೆಸ್‌ಗೆ ಬಂದು ಸೋನಿಯಾ ಕಾಲಿಗೆ ಬಿದ್ದು ಮುಖ್ಯಮಂತ್ರಿ ಆದರು ಎಂದರು.

Tap to resize

Latest Videos

ನಮ್ಮಪ್ಪನ ಮೇಲಾಣೆ, ಸಿದ್ದು ಸಿಎಂ ಆಗಲ್ಲ: ನಳಿನ್‌ ಕುಮಾರ್‌ ಕಟೀಲ್‌

ಹುಚ್ಚರನ್ನಾಗಿ ಮಾಡಿದ ಭಯ: ಮುಖ್ಯಮಂತ್ರಿ ರೇಸ್‌ನಲ್ಲಿ ಡಿ.ಕೆ. ಶಿವಕುಮಾರ ಹಾಗೂ ಮಲ್ಲಿಕಾರ್ಜುನ ಖರ್ಗೆ ಇರುವುದಕ್ಕೆ ಭಯ ಹೊಂದಿರುವ ಸಿದ್ದರಾಮಯ್ಯ, ಆ ಭಯ ಅವರನ್ನು ಹುಚ್ಚರನ್ನಾಗಿ ಮಾಡಿದೆ. ಅಧಿಕಾರ ಕಳೆದುಕೊಂಡು ಹುಚ್ಚರಂತೆ ವರ್ತಿಸುತ್ತಿದ್ದು ದುರಂಹಕಾರ ತೋರುತ್ತಿದ್ದಾರೆ. ಜತೆಗೆ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಏಕವಚನದಲ್ಲಿ ಮಾತನಾಡುವುದನ್ನು ಕಾಂಗ್ರೆಸ್‌ ಮುಖಂಡರು ಪ್ರತಿಷ್ಠೆ ಎಂದುಕೊಂಡಿದ್ದಾರೆ. ಇಂದಿರಾ ಗಾಂಧಿ ಪ್ರಧಾನಿ ಇದ್ದಾಗ ಅಟಲ್‌ ಬಿಹಾರಿ ವಾಜಪೇಯಿ ಯಾವತ್ತೂ ಏಕವಚನ ಬಳಕೆ ಮಾಡಿಲ್ಲ. ವಿರೋಧ ಪಕ್ಷ ಹೇಗೆ ನಡೆಯಬೇಕು ಎಂದು ಅಟಲ್‌ ಅವರು ತೋರಿಸಿದ್ದಾರೆ. 

ಇವತ್ತು ಸಿದ್ದರಾಮಯ್ಯ ಹಾಗೂ ರಾಹುಲ್‌ ಗಾಂಧಿ ಪ್ರಧಾನಿ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಹೀಗಾಗಿಯೇ ಯಡಿಯೂರಪ್ಪ ಅವರು ರಾಹುಲ್‌ ಗಾಂಧಿ ಮೋದಿ ಎದುರು ಸಣ್ಣ ಹುಡುಗ ಎಂದಿದ್ದು ಸರಿಯಾಗಿದೆ ಎಂದರು. ಕಟೀಲ್‌ ಒಬ್ಬ ವಿದೂಷಕ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ಸಿದ್ದರಾಮಯ್ಯ ವಿಲನ್ನಾ? ಎಂದು ಪ್ರಶ್ನಿಸಿದರು. ಮೀಸಲಾತಿ ಬಗ್ಗೆ ಶಾಸಕ ಅರವಿಂದ ಬೆಲ್ಲದ ಹೇಳಿಕೆ ವಿಚಾರಕ್ಕೆ, ಬೆಲ್ಲದ ತಮ್ಮ ಅನಿಸಿಕೆ ಹೇಳಿದ್ದಾರೆ. ಅದು ಅವರ ಅಭಿಪ್ರಾಯ ಎಂದಷ್ಟೇ ಪ್ರತಿಕ್ರಿಯೆ ನೀಡಿದರು. ಇನ್ನು, ಹಿಜಾಬ್‌ ಪ್ರಕರಣ ನ್ಯಾಯಾಲಯದ ಮುಂದಿದ್ದು ತೀರ್ಪು ಬಂದ ಆನಂತರ ಚರ್ಚೆ ಮಾಡೋಣ ಎಂದರು.

ಭಯೋತ್ಪಾದನೆ, ಆತಂಕವಾದ ಬೆಳೆಸಿದ್ದೇ ಕ್ರಾಂಗ್ರೆಸ್‌: ಕಾಂಗ್ರೆಸ್‌ ಭಯೋತ್ಪಾದನೆ, ಆತಂಕವಾದ ಬೆಳೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಆರೋಪಿಸಿದರು. ಬುಧವಾರ ಸಂಜೆ ಇಲ್ಲಿ ಬಿಜೆಪಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿದ ಅವರು, ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್‌. ಸೋನಿಯಾ, ವಾದ್ರಾ, ರಾಹುಲ್‌ ಗಾಂಧಿ, ಡಿ.ಕೆ. ಶಿವಕುಮಾರ ಎಲ್ಲರೂ ಬೇಲ್‌ನಲ್ಲಿ ಹೊರಗಿದ್ದಾರೆ ಎಂದರು.

ಗಾಂಧೀಜಿ ರಾಮರಾಜ್ಯದ ಕನಸು ಮೋದಿಯಿಂದ ಸಾಕಾರ -ನಳಿನ್ ಕುಮಾರ್ ಕಟೀಲ್

ಇಂದಿರಾಗಾಂಧಿ ಕಾಲದಲ್ಲಿ ಭಯೋತ್ಪಾದನೆ ಹುಟ್ಟಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಭಯೋತ್ಪಾದನೆ ಬಂದ್‌ ಆಗಿದೆ. 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ದೇಶವನ್ನು ಭಿಕ್ಷುಕರ ದೇಶವನ್ನಾಗಿಸಿತ್ತು. ಆದರೆ ಬಿಜೆಪಿ ಭಾರತವನ್ನು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗಿದೆ. ಇಡೀ ಜಗತ್ತೇ ಭಾರತವನ್ನು ತಿರುಗಿ ನೋಡುವಂತಾಗಿದೆ. ರಷ್ಯಾ-ಉಕ್ರೇನ್‌ ಯುದ್ಧವನ್ನೇ 6 ಗಂಟೆ ನಿಲ್ಲಿಸಿ ನಮ್ಮ ವಿದ್ಯಾರ್ಥಿಗಳನ್ನು ರಕ್ಷಿಸಿದ ಕೀರ್ತಿ ಮೋದಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

click me!