Karnataka Politics : ಕಾಂಗ್ರೆಸ್ ಬಿಟ್ಟು ಹೋದವರು ಪಕ್ಷಕ್ಕೆ ವಾಪಸ್ ಬರಲು ಕಾದಿದ್ದಾರೆ

By Kannadaprabha NewsFirst Published Dec 26, 2021, 2:21 PM IST
Highlights
  • ಕಾಂಗ್ರೆಸ್ ಪಕ್ಷದಲ್ಲಿ 80 ಸೀಟುಗಳಿತ್ತು. ಅದರಲ್ಲಿ  13 ಜನರು ಹೊರಕ್ಕೆ ಹೋಗಿದ್ದರು
  • ಈಗ ಕಾಂಗ್ರೆಸ್ ಬಿಟ್ಟು  ಹೋಗಿರುವವರು ಪುನಃ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಸಾಲಿನಲ್ಲಿ ನಿಂತಿದ್ದಾರೆ.

ಹಾಸನ (ಡಿ.26) :  ಕಾಂಗ್ರೆಸ್ ಪಕ್ಷದಲ್ಲಿ 80 ಸೀಟುಗಳಿತ್ತು. ಅದರಲ್ಲಿ  13 ಜನರು ಹೊರಕ್ಕೆ ಹೋಗಿದ್ದರು. ಈಗ ಕಾಂಗ್ರೆಸ್ ಬಿಟ್ಟು  ಹೋಗಿರುವವರು ಪುನಃ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಸಾಲಿನಲ್ಲಿ ನಿಂತಿದ್ದಾರೆ. ನನಗೆ ಅಧಿಕಾರ ಕೊಡಿ. ಹಾಸನ ಜಿಲ್ಲೆಯಲ್ಲಿ ಪ್ರೀತಿ ನೀಡಿದ್ದೀರಿ. ಕಾಂಗ್ರೆಸ್ಗೆ (Congress) ಅಧಿಕಾರ ಕೊಡಿ.ಹಾಸನ ಜಿಲ್ಲೆಯಲ್ಲಿ  ಪ್ರೀತಿ ನೀಡಿದ್ದೀರಿ ಎಂದರು.  ಕಾಂಗ್ರೆಸ್‌ಗೆ  ಮತ್ತೆ ಶಕ್ತಿ ಬರಲಿದ್ದು 2023ರಲ್ಲಿ ಹಾಸನದಿಂದ ಹೆಚ್ಚಿನ ಶಾಸಕರನ್ನು ಕೊಡಲಿದ್ದಾರೆ ಎಂದು ಡಿಕೆಶಿ ವಿಶ್ವಾಸ  ವ್ಯಕ್ತಪಡಿಸಿದರು. 

ಪ್ರಭಾವಿ ನಾಯಕ ಕಾಂಗ್ರೆಸ್‌ಗೆ: ಗೋಕಾಕ್​​ ಜೆಡಿಎಸ್ (JDS)  ಮುಖಂಡ ಅಶೋಕ್ ಪೂಜಾರಿ(Ashok Pujari) ಅವರು ಅಧಿಕೃತವಾಗಿ ಕಾಂಗ್ರೆಸ್ (Congress) ಸೇರ್ಪಡೆಗೊಂಡರು.  ಬೆಳಗಾವಿ ಕಾಂಗ್ರೆಸ್(Belagavi Congress) ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ (DK Shivakumar), ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರ ಸಮ್ಮುಖದಲ್ಲಿ ಅಶೋಕ್ ಪೂಜಾರಿ ಅವರು ಕಾಂಗ್ರೆಸ್ ಸೇರ್ಪಡೆಯಾದರು.

MLC ಚುನಾವಣೆ ಗೆಲುವಿನ ಬಳಿಕ ಡಿಕೆಶಿಗೆ ವಿಧಾನಸಭೆ ಚುನಾವಣೆಯೇ ಟಾರ್ಗೆಟ್ ಆಗಿದೆ. ಈ ಹಿನ್ನೆಲೆಯಲ್ಲಿ ಅಶೋಕ್​ ಪೂಜಾರಿ ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಮುಖ್ಯವಾಗಿ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ಸೋಲಿಸಲು  ಡಿಕೆ ಶಿವಕುಮಾರ್​​ ಪ್ಲಾನ್ ಮಾಡಿದ್ದಾರೆ.

ಗೋಕಾಕ್ ಕ್ಷೇತ್ರದ ಪ್ರಭಾವಿ ಲಿಂಗಾಯತ ಮುಖಂಡ ಆಗಿರುವ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆಯಿಂದ ಬಲ ಹೆಚ್ಚಾಗಿದೆ. ಈ ರಾಜಕೀಯ ಲೆಕ್ಕಾಚಾರದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್​ , ಕಾಂಗ್ರೆಸ್​ಗೆ ಸೇರ್ಪಡೆ ಆಗುವವರ ಲಿಸ್ಟ್ ಇನ್ನೂ ಇದೆ. ಲಿಸ್ಟ್ ಇಲ್ಲ ಎಂದು ಅನ್ನೋದಿಲ್ಲ ಎಂದರು.

ಇನ್ನೊಂದು ದಿನ ನಾವು ಗೋಕಾಕ್​ಗೆ ಬರ್ತಿವಿ. ಸತೀಶ್ ಜಾರಕಿಹೊಳಿ ಯಾವಾಗ ದಿನಾಂಕ ನಿಗದಿ ಮಾಡ್ತಾರೋ ಅವತ್ತು ಗೋಕಾಕ ಬಂದು ಉಳಿದೆಲ್ಲ ಕಾರ್ಯಕರ್ತರನ್ನ ಕಾಂಗ್ರೆಸ್​ಗೆ ಸೇರ್ಪಡೆ ಮಾಡ್ಕೊತ್ತಿವಿ. ಗೋಕಾಕನಲ್ಲಿ ಕಾಂಗ್ರೆಸ ಪಕ್ಷಕ್ಕೆ ಇನ್ನಷ್ಟು ಶಕ್ತಿ ತಂದುಕೊಡುವ ಕೆಲಸ ಮಾಡಬೇಕು. ಬೆಳಗಾವಿ ಜಿಲ್ಲೆ ಹಾಲಿ ಮಾಜಿ ಶಾಸಕರು ಒಮ್ಮತದಿಂದ ಅಶೋಕ ಪೂಜಾರಿ ಕಾಂಗ್ರೆಸ ಸೇರ್ಪಡೆ ಮಾಡ್ಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ಕೊಟ್ಟ ಎಸ್‌ಟಿಎಸ್:    ಮುಂಬರುವ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಆಗಲೇ ರಾಜಕೀಯ ನಾಯಕರುಗಳು ಭರ್ಜರಿ ತಯಾರಿಗಳು ನಡೆದಿವೆ. ಹೌದು... ಮಂದಿನ ರಾಜಕೀಯ ಭವಿಷ್ಯಕ್ಕೆ ಕೆಲ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಂಪ್ ಆಗುತ್ತಿದ್ದಾರೆ. ಅದರಲ್ಲೂ ಜೆಡಿಎಸ್ ನಾಯಕರು ಸಾಲುಗಟ್ಟಿ ನಿಂತಿದ್ದಾರೆ. ಇನ್ನು ಇದರ ಮಧ್ಯೆ ಸಚಿವ ಎಸ್‌ಟಿ ಸೋಮಶೇಖರ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

 ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವತ್ರಿಕ ಚುನಾವಣೆಗೆ ಇನ್ನೂ ಸಮಯವಿದೆ. ಕಾಂಗ್ರೆಸ್ ಸೇರುವ ಬಗ್ಗೆ ಏನೂ ಯೋಚಿಸಿಲ್ಲ. ಸದ್ಯ ಬಿಜೆಪಿಯಲ್ಲಿ ಇದ್ದೇನೆ ಎಂದು ಸ್ಪಷ್ಟಪಡಿಸಿದರು.

 ಕಾಂಗ್ರೆಸ್ ಗೆ ವಾಪಸ್ಸಾಗುವ ವದಂತಿ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿ.ಕೆ ಶಿವಕುಮಾರ್ ನಮ್ಮ ಹಳೆಯ ಸ್ನೇಹಿತರು. ರಾಜಕೀಯವೇ ಬೇರೆ, ಸ್ನೇಹವೇ ಬೇರೆ. ಕೆಲವೊಮ್ಮೆ ಮುಖಾಮುಖಿಯಾದಾಗ‌ ಪರಸ್ಪರ ಕುಶಲೋಪರಿ ಮಾತನಾಡುತ್ತೇವೆ. ಸದ್ಯಕ್ಕೆ ನಾನು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಗೆ ವಾಪಸ್ಸಾಗುವ ಪ್ರಶ್ನೆಯೇ ಇಲ್ಲ ಎಂದರು.

ನಾಯಕತ್ವ ಬದಲಾವಣೆ ವದಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರು ಆಗಾಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಬದಲಾವಣೆಯಾಗುವುದಿಲ್ಲ. ಮುಂದಿನ ಚುನಾವಣೆ ಅವರ ನೇತೃತ್ವದಲ್ಲೇ ನಡೆಯಲಿದೆ. ಈಗಾಗಲೇ ಅಮಿತ್ ಶಾ ಕೂಡ ಇದನ್ನ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನಿಂದ ಬಿಜೆಪಿಗೆ :  ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಎಸ್‌ಟಿ ಸೋಮೇಶಖರ್ ಅವರು ಬಿಜೆಪಿ ಸೇರಿದ್ದರು. ಬಳಿಕ ಉಪಚುನಾವಣೆ ಅಖಾಡಕ್ಕಿಳಿದು ಗೆಲುವು ಸಾಧಿಸಿದ್ದರು. 

ಬೊಮ್ಮಾಯಿ ಬದಲಾವಣೆಯಾಗುತ್ತಾ? :  ಅನಾರೋಗ್ಯ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ತೆರಳುತ್ತಾರೆ. ಹೀಗಾಗಿ ” ಸಿಎಂ ಬದಲಾವಣೆ” ಗುಸು ಗುಸು ಶುರುವಾಗಿದೆ. ಒಂದು ವೇಳೆ ಬಸವರಾಜ ಬೊಮ್ಮಾಯಿ ಬದಲಾವಣೆ ಆಗಿದ್ದಲ್ಲಿ ಮುಂದಿನ ಸಿಎಂ ಯಾರು ಎನ್ನುವುದು ಮಾತ್ರ ತೀವ್ರ ಕುತೂಹಲ ಮೂಡಿಸಿದೆ. 

ಒಂದು ಕಡೆ ಸಚಿವ ಮುರುಗೇಶ್ ನಿರಾಣಿ ಹೆಸರು ಕೇಳಿಬರುತ್ತಿದ್ದರೆ, ಮತ್ತೊಂದು ಗುಂಪಿನಿಂದ ಈಗಾಗಲೇ ಒಂದು ಬಾರಿ ಮುಖ್ಯಮಂತ್ರಿಯಾಗಿರುವ ಜಗದೀಶ್ ಶೆಟ್ಟರ್ ಹೆಸರು ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶ ಮುಗಿಯುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗಳು ಆಗುವ ಲಕ್ಷಣಗಳು ಕಾಣುತ್ತಿವೆ, ಅದರಲ್ಲೂ ಆಡಳಿತ ಪಕ್ಷ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳಾಗುವ ಸಾಧ್ಯತೆಗಳಿ ಎನ್ನಲಾಗಿದೆ.

click me!