ನನಗೆ ಮಂತ್ರಿಯನ್ನೇ ಮಾಡಲಿಲ್ಲ, ಇನ್ನು ಸಿಎಂ ಮಾಡ್ತಾರಾ?: ಶಾಸಕ ಯತ್ನಾಳ

By Govindaraj S  |  First Published Dec 15, 2023, 6:21 PM IST

ನನಗೆ ಮಂತ್ರಿಯನ್ನೇ ಮಾಡಲಿಲ್ಲ, ಇನ್ನು ಮುಖ್ಯಮಂತ್ರಿ ಮಾಡ್ತಾರಾ? ಅಂತಹ ಯಾವ ಆಸೆಯೂ ನನಗಿಲ್ಲ..!ಇದು ಸದನದಲ್ಲಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ಹಿರಿಯರಿಗೆ ಛಾಟಿ ಬೀಸಿದ ಪರಿ.


ವಿಧಾನಸಭೆ (ಡಿ.15): ನನಗೆ ಮಂತ್ರಿಯನ್ನೇ ಮಾಡಲಿಲ್ಲ, ಇನ್ನು ಮುಖ್ಯಮಂತ್ರಿ ಮಾಡ್ತಾರಾ? ಅಂತಹ ಯಾವ ಆಸೆಯೂ ನನಗಿಲ್ಲ..!ಇದು ಸದನದಲ್ಲಿ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಪಕ್ಷದ ಹಿರಿಯರಿಗೆ ಛಾಟಿ ಬೀಸಿದ ಪರಿ. ಉತ್ತರ ಕರ್ನಾಟಕದ ನಡೆಯುತ್ತಿದ್ದ ವಿಶೇಷ ಚರ್ಚೆ ವೇಳೆ ಆಡಳಿತ ಪಕ್ಷದ ಸದಸ್ಯ ಬಿ.ಆರ್.ಪಾಟೀಲ ಮಾತನಾಡುತ್ತಿದ್ದರು. ಉತ್ತರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಎಂದು ಎಳೆ ಎಳೆಯಾಗಿ ವಿವರಿಸುತ್ತಿದ್ದರು. ಈ ವೇಳೆ ಪ್ರತಿಪಕ್ಷದ ಸದಸ್ಯರಾದ ಯತ್ನಾಳ ಹಾಗೂ ಸುನೀಲಕುಮಾರ ನಿಮಗೂ ಅನ್ಯಾಯವಾಗಿದೆ ಬಿಡಿ. 

ನೀವು ಇಷ್ಟೊಂದು ಸಿನಿಯರ್. ಆದರೂ ನಿಮಗೆ ಸರ್ಕಾರದಲ್ಲಿ ಅನ್ಯಾಯವಾಗಿದೆ ಎಂದು ಕಿಚಾಯಿಸಿದರು.ಅದಕ್ಕೆ ಆಡಳಿತ ಪಕ್ಷದ ಸದಸ್ಯರು, ನಿಮ್ಮ ಪಕ್ಷದಲ್ಲ ನಿಮಗೆ ಆದಷ್ಟು ಅನ್ಯಾಯ ಮತ್ತೆ ಯಾರಿಗೂ ಆಗಿಲ್ಲ ಬಿಡಿ ಎಂದು ಕಾಲೆಳೆದರು.ಅದಕ್ಕೆ ಯತ್ನಾಳ, ನಮಗೆ ಅನ್ಯಾಯವಾಗಿದೆ ಎಂದು ನೀವು. ನಿಮಗೆ ಅನ್ಯಾಯವಾಗಿದೆ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳೋಣ. ಉತ್ತರ ಕರ್ನಾಟಕದ ಶಾಸಕರೆಂದರೆ ಸಂತ್ರಸ್ತರಿದ್ದಂತೆ ಎಂದು ಚಟಾಕಿ ಹಾರಿಸಿದರು. ಆಗ ಬಿ.ಆರ್.ಪಾಟೀಲ್, ನೀವು ಐದು ವರ್ಷ ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮೆಲ್ಲರ ಆಸೆ. 

Tap to resize

Latest Videos

ಬಿಜೆಪಿಗೆ ಸಾಮಾಜಿಕ ನ್ಯಾಯ ಬಗ್ಗೆ ಮಾತಾಡೋ ಹಕ್ಕಿಲ್ಲ: ಸಿಎಂ ಸಿದ್ದರಾಮಯ್ಯ

ಮುಂದೊಂದು ಆಗುತ್ತೀರಿ ಬಿಡಿ ಎಂದು ಯತ್ನಾಳಗೆ ಮತ್ತೆ ಕಿಚಾಯಿಸಿದರು. ಅದಕ್ಕೆ ಯತ್ನಾಳ, ನನ್ನನ್ನು ಮಂತ್ರಿಯನ್ನೇ ಮಾಡಲಿಲ್ಲ. ಇನ್ನು ಮುಖ್ಯಮಂತ್ರಿ ಮಾಡ್ತಾರಾ? ಪಾಟೀಲರೇ ನಮಗೆಲ್ಲ ಮಂತ್ರಿಗಿರಿ ಪಡೆಯಬೇಕೆಂದರೆ ಯಾವ ರೀತಿ ಲಾಬಿ ನಡೆಸಬೇಕು, ದೆಹಲಿಗೆ ಹೋಗಿ ಏನೇನು ಮಾಡಬೇಕು ಎಂಬುದು ಏನು ಗೊತ್ತಾಗಲ್ಲ. ಅದನ್ನು ನಮಗೆ ದಕ್ಷಿಣದವರು ಹೇಳಿ ಕೊಡುವುದಿಲ್ಲ ಎಂದು ಸ್ವಾರಸ್ಯಕರವಾಗಿ ಚರ್ಚಿಸು ತ್ತಲೇ ಪಕ್ಷದ ಮುಖಂಡರಿಗೆ ಛಾಟಿ ಬೀಸಿದರು. ಎಲ್ಲರೂ ಕೆಲಕ್ಷಣ ನಕ್ಕು ಸುಮ್ಮನಾದರು.

ಯತ್ನಾಳ್‌ಗೆ ಸಿಎಂ ಆಗಲಿ ಎಂದ ರಾಜಣ್ಣ: ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಹುಟ್ಟು ಹಬ್ಬದ ಶುಭಾಶಯ. ಅವರು ಬಿಪಿ ಕಡಿಮೆ ಮಾಡಿಕೊಂಡು ಮುಂದಿನ ವರ್ಷಗಳಲ್ಲಾದರೂ ಸಹೋದರತೆ ಹಾಗೂ ಸೌಹಾರ್ದತೆನ್ನು ರೂಢಿಸಿಕೊಳ್ಳಬೇಕು ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದರು. ಇದೇ ವೇಳೆ ಸಚಿವ ಕೆ.ಎನ್‌.ರಾಜಣ್ಣ ಅವರು, ‘ಯತ್ನಾಳ್‌ ಮುಖ್ಯಮಂತ್ರಿ ಆಗಬೇಕು’ ಎಂದು ಹೇಳಿದ್ದರಿಂದ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಹಾಸ್ಯ ದಾಟಿಯಲ್ಲಿ ಆರೋಪ-ಪ್ರತ್ಯಾರೋಪಗಳ ವಿನಿಮಯ ಆಯಿತು.

ತಿಂಗಳಾಂತ್ಯಕ್ಕೆ ರೈತರಿಗೆ ಬೆಳೆ ವಿಮೆ ಪಾವತಿ: ಸಚಿವ ಚಲುವರಾಯಸ್ವಾಮಿ ಭರವಸೆ

ವಿಧಾನಸಭೆಯಲ್ಲಿ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಅವರು ಯತ್ನಾಳ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಇದಕ್ಕೆ ಪೂರಕವಾಗಿ ಮಾತನಾಡಿದ ಸಚಿವ ಕೆ.ಎನ್‌.ರಾಜಣ್ಣ, ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮುಖ್ಯಮಂತ್ರಿ ಆಗಬೇಕು. ಅವರಿಗೆ ಆ ಶಕ್ತಿ ಬರಬೇಕು ಎಂದು ಹಾರೈಸಿದರು. ಇದಕ್ಕೆ ಬಿಜೆಪಿಯ ಸಿದ್ದು ಸವದಿ, ಸಚಿವರೇ ಈ ಅವಧಿಯಲ್ಲೇ ಆಗಬೇಕಾ? ಅವಕಾಶ ಕೊಡಿ ಆಗುತ್ತಾರೆ ಎಂದು ಕಾಲೆಳೆಯಲು ಯತ್ನಿಸಿದರು. ಮಧ್ಯಪ್ರವೇಶಿಸಿದ ಸಚಿವ ಪ್ರಿಯಾಂಕ್‌ ಖರ್ಗೆ, ಮೊದಲು ನಿಮ್ಮ ಪಕ್ಷದಲ್ಲಿ ಒಂದು ಅಧಿಕಾರ ಕೊಡಿ. ಅಲ್ಲಿಂದ ಪೀಠಿಕೆ ಶುರುವಾಗಲಿ. ಬಳಿಕ ಮುಖ್ಯಮಂತ್ರಿ ಸ್ಥಾನ ಸಿಗಬಹುದು ಎಂದು ತಿರುಗೇಟು ನೀಡಿದರು.

click me!