ನಮ್ಮ ನಿಷ್ಠೆ ಎದೆ ಬಗೆದು ತೋರಿಸಲು ಆಗೋದಿಲ್ಲ: ಸಿ.ಟಿ.ರವಿ

By Kannadaprabha News  |  First Published Feb 25, 2024, 4:21 PM IST

ಇಲ್ಲಿ ಯಾವುದೂ ಬಣ ಇಲ್ಲ, ಬಿಜೆಪಿ ಮಾತ್ರ ಇರೋದು, ಹಿಂದೆಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ನಮ್ಮ ನಿಷ್ಟೆಯನ್ನು ಎದೆ ಬಗೆದು ತೋರಿಸಲು ಆಗುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. 


ಚಿಕ್ಕಮಗಳೂರು (ಫೆ.25): ಇಲ್ಲಿ ಯಾವುದೂ ಬಣ ಇಲ್ಲ, ಬಿಜೆಪಿ ಮಾತ್ರ ಇರೋದು, ಹಿಂದೆಯೂ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ನಮ್ಮ ನಿಷ್ಟೆಯನ್ನು ಎದೆ ಬಗೆದು ತೋರಿಸಲು ಆಗುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ನಡೆಯುತ್ತಿರುವ ಗೋ ಬ್ಯಾಕ್ ಶೋಭಾ ಅಭಿಯಾನದ ಹಿಂದೆ ತಮ್ಮ ಕೈವಾಡ ಇದೆ ಎಂಬ ಆರೋಪಕ್ಕೆ ಸುದ್ದಿಗಾರರೊಂದಿಗೆ ಮಾತನಾಡುವಾಗ ತೀಕ್ಷ್ಣವಾಗಿ ಅವರು ಪ್ರತಿಕ್ರಿಯೆ ನೀಡಿದರು.

ನಾನು, ಒಂದು ಚುನಾವಣೆಗೆ ಒಂದು, ಇನ್ನೊಂದು ಚುನಾವಣೆ ಇನ್ನೊಂದು ರೀತಿ ಅಲ್ಲ. ಹುಟ್ಟಿದ್ದು ಬಿಜೆಪಿಯಲ್ಲೇ ಸಾಯೋದು ಬಿಜೆಪಿಯಲ್ಲೇ ಎಂದು ಹೇಳಿದರು. ನಮ್ಮ ಪಕ್ಷ ನಿಷ್ಟೆಯನ್ನು ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲ. ನಮ್ಮ ನಿಯತ್ತು ಏನೆಂದು ಗೊತ್ತಿಗೆ ಯಾರೂ ಪ್ರಶ್ನೆ ಮಾಡಲು ಅವಕಾಶ ಕೊಟ್ಟಿಲ್ಲ ಎಂದರು. ನಾನು ಹಲವಾರು ರಾಜ್ಯಗಳಲ್ಲಿ ಚುನಾವಣೆಯಲ್ಲಿ ಕೆಲಸ ಮಾಡಿದ್ದೇನೆ. ಟಿಕೆಟ್ ಕೊಡುವ ಪದ್ಧತಿ ನೋಡಿದ್ದೇನೆ. ಈ ರೀತಿ ಪ್ರಕ್ರಿಯೆಯಿಂದ ಯಾರಿಗೂ ಟಿಕೆಟ್ ಸಿಗೋದಿಲ್ಲ. ನಾನಂತು ಕೇಳಿ ಪಡೆದುಕೊಂಡಿಲ್ಲ.

Tap to resize

Latest Videos

ಕೇಂದ್ರ ಸರ್ಕಾರ ವಿರುದ್ಧದ ನಿರ್ಣಯವನ್ನು ಬಿಜೆಪಿಯೂ ಬೆಂಬಲಿಸಲಿ: ಡಿ.ಕೆ.ಶಿವಕುಮಾರ್

ಇಂತದ್ದು ಕೊಡಿ ಎಂದು ಕೇಳದೆ ಪಕ್ಷದಲ್ಲಿ ಬೆಳೆದಿದ್ದೇನೆ ಎಂದು ಹೇಳಿದರು. ಪಾರ್ಲಿಮೆಂಟರಿ ಬೋರ್ಡ್‌ ಮಿಟಿಂಗ್ ಆಗಿಲ್ಲ. ಟಿಕೆಟ್ ಫೈನಲ್ ಆಗಿರೋದು ಮೋದಿ ಒಬ್ಬರಿಗೆ ಮಾತ್ರ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಬಿಜೆಪಿ ಕೇಂದ್ರದಲ್ಲಿ ಗೆಲ್ಲಬೇಕು ಎಂದು ಹೇಳಿದರು. ನಮ್ಮ ಅತಿರೇಕದ ಚಟುವಟಿಕೆ ಇನ್ನೊಬ್ಬರಿಗೆ ಆಹಾರವಾಗಬಾರದು. ಹಾಗಾಗಿ ಈ ರೀತಿ ಚಟುವಟಿಕೆ ಮಾಡಬಾರದು. ಪಕ್ಷದಲ್ಲಿ ಟಿಕೆಟ್ ಕೊಡುವ ಮಾನದಂಡ ಬೇರೆಯೇ ಇದೆ. ಅದರ ಅಧಾರದಲ್ಲಿ ಟಿಕೆಟ್ ನೀಡುತ್ತಾರೆ ಎಂದರು.

ಸಿದ್ದರಾಮಯ್ಯನವರ ರಾಜಕೀಯ ಮುಗಿಯುತ್ತಿದೆ: ರಾಜಕೀಯ ನಿವೃತ್ತಿ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ಮುಗಿಯುತ್ತಾ ಬಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿರುಗೇಟು ನೀಡಿದರು. ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ಮೋಸ ಮಾಡಿರುವುದು ಸುಳ್ಳಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದರು. ಸಿದ್ದರಾಮಯ್ಯ ಅವರ ರಾಜಕೀಯ ಈಗ ಬದಲಾಗಿದೆ. ಹಾಗಾಗಿಯೇ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಿಎಂ ಸ್ಥಾನಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. 

ಸುಳ್ಳಿನ ಬಿಜೆಪಿ ಕಾರ್ಖಾನೆಗೆ ಅಭಿವೃದ್ಧಿ ಉತ್ತರ: ಸಿಎಂ ಸಿದ್ದರಾಮಯ್ಯ

ಹಾಗಾಗಿ ರಾಜಕೀಯದ ವಾಸ್ತವ್ಯತೆ ಅವರಿಗೆ ಅರಿವಾಗುತ್ತಿದೆ. ಆ ಕಾರಣದಿಂದಲೇ ಸಿದ್ದರಾಮಯ್ಯ ಅವರು ರಾಜಕೀಯವಾಗಿ ನಿವೃತ್ತಿಯಾಗುವ ಹೇಳಿಕೆ ನೀಡುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು. ವರುಣ ತೆರಿಗೆ, ಕನಕಪುರ ತರಿಗೆ ಎಂದು ಕಾಂಗ್ರೆಸ್ ನಾಯಕರು ರಾಜ್ಯದ ಖಜಾನೆ ಖಾಲಿ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಶೇ. 40 ರಷ್ಟು ಕಮಿಷನ್ ಆರೋಪವನ್ನು ಕಾಂಗ್ರೆಸ್ ನಾಯಕರ ಮೇಲೆ ಮಾಡಿದ್ದಾರೆ. ಅದು ಸರಿಯಾಗಿಯೇ ಇದೆ ಎಂದರು.

click me!