ಇಡೀ ರಾಜ್ಯದಲ್ಲಿ ಕಮಿಷನ್‌ ಭ್ರಷ್ಟಾಚಾರವಿದೆ: ಎಚ್‌.ಡಿ.ಕುಮಾರಸ್ವಾಮಿ

Published : Aug 25, 2022, 04:58 PM IST
ಇಡೀ ರಾಜ್ಯದಲ್ಲಿ ಕಮಿಷನ್‌ ಭ್ರಷ್ಟಾಚಾರವಿದೆ: ಎಚ್‌.ಡಿ.ಕುಮಾರಸ್ವಾಮಿ

ಸಾರಾಂಶ

ಕೋಲಾರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪರ್ಸೆಂಟೆಜ್‌ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಮಿಷನ್‌ ಆರೋಪ ಬರುತ್ತಿರುವುದು ಹೊಸದೇನು ಅಲ್ಲ.

ಚನ್ನಪಟ್ಟಣ (ಆ.25): ಕೋಲಾರ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಪರ್ಸೆಂಟೆಜ್‌ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು. ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಮಿಷನ್‌ ಆರೋಪ ಬರುತ್ತಿರುವುದು ಹೊಸದೇನು ಅಲ್ಲ. ಎಲ್ಲೆಡೆ ಕಮಿಷನ್‌ ವ್ಯವಹಾರ ನಡೆಯುತ್ತಿದೆ ಎಂದು ಸಚಿವ ಮುನಿರತ್ನ ಮೇಲಿನ ಕಮಿಷನ್‌ ಆರೋಪ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದರು.

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ನಿರ್ಮೂಲನೆಯ ಬಗ್ಗ ಮಾತನಾಡುತ್ತಾರೆ. ಕೆಂಪುಕೋಟೆ ಮೇಲೆ ಭ್ರಷ್ಟಾಚಾರದ ಬಗ್ಗೆ ಭಾಷಣ ಬಿಗಿದು, ಇದನ್ನು ಸಂಪೂರ್ಣ ನಿರ್ಮೂಲನೆ ಮಾಡುತ್ತೇನೆ ಎಂದರು. ಆದರೆ. ಇಲ್ಲಿ ಪ್ರತಿನಿತ್ಯ ಬೀದಿಬೀದಿಗಳಲ್ಲಿ 40% ಕಮೀಷನ್‌ ಬಗ್ಗೆ ಚರ್ಚೆ ನಡೆಯುತ್ತಿದೆ ಇದು ಪ್ರಧಾನಿಗಳ ಗಮನಕ್ಕೆ ಹೋಗಿಲ್ಲವ ಎಂದು ಪ್ರಶ್ನಿಸಿದರು.

ಮಡಿಕೇರಿ ಚಲೋಗೆ ಮಹತ್ವ ಬೇಕಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ರಾಷ್ಟ್ರೀಯ ಪಕ್ಷಗಳಿಗೆ ಕಾಳಜಿ ಇಲ್ಲ: ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರ ಬಗ್ಗೆ ಚಿಂತೆ ಇಲ್ಲ. ಮಳೆ ಬಂದು ರೈತರ ಬೆಳೆ ನಾಶವಾಗಿದೆ. ಹಲವರ ಮನೆಗಳು ಬಿದ್ದಿವೆ. ರೈತರು ಬೀದಿಗೆ ಬಂದಿದ್ದಾರೆ. ನಿರುದೋಗ್ಯದ ಸಮಸ್ಯೆ ಇದೆ. ಆದರೆ, ಇವರು ಆ ಮಾಂಸ ತಿನ್ನು ಈ ಮಾಂಸ ತಿನ್ನು ಅಂತೇಳಿ ಹೊರಟಿದ್ದು, ಈ ರೀತಿಯ ಚರ್ಚೆ ಮಾಡಿಕೊಂಡು ಕೂತಿದ್ದಾರೆ ಎಂದು ಟೀಕಿಸಿದರು.

ಫೋಟೊದಿಂದ ಹೊಟ್ಟೆ ತುಂಬತ್ತಾ: ಯಾರೋ ವೀರ ಸಾವರ್ಕರ್‌ ಪೋಟೊ ಇಟ್ಕೊಂಡು ಹೋದರೆ ಬಡವರ ಹೊಟ್ಟೆತುಂಬಿತ್ತಾ. ರಥ ಯಾತ್ರೆ ಮಾಡಬೇಕಿರುವುದು ಈ ರಾಜ್ಯದ ಸಮಸ್ಯೆಗಳ ಬಗ್ಗೆ. ಜನರ ಸಮಸ್ಯೆಗಳ ಏನು, ನೀರಾವರಿ ವಿಷಯದಲ್ಲಿ ಏನು ಕೆಲಸಗಳು ನಡೆದಿವೆ ಎಂಬ ವಿಷಯ ಇಟ್ಟುಕೊಂಡು ರಥಯಾತ್ರೆ ಮಾಡಿದ್ದರೆ ನಾನೇ ಅವರನ್ನು ಅಭಿನಂದಿಸುತ್ತಿದ್ದೆ ಎಂದರು.

ಕೊಡಗಿನರವರಿಗೆ ಧೈರ್ಯ ತುಂಬುತ್ತೇವೆ: ಕೊಡಗಿನಲ್ಲಿ ಸರ್ವಜನಾಂಗದ ಶಾಂತಿಯ ತೋಟ ಕಾರ್ಯಕ್ರಮ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಡಗಿನ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಪಕ್ಷದ ಮುಖಂಡರ ಜೊತೆ ಮೀಟಿಂಗ್‌ ಮಾಡಿದ್ದೇನೆ ಎಂದರು. ಬಿಜೆಪಿ ಕಾಂಗ್ರೆಸ್‌ನಿಂದ ಕೊಡಗಿನಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಇದೀಗ ಮಡಿಕೇರಿಯಕ್ಲಿ 144 ಸೆಕ್ಷನ್‌ ಹಾಕಿದ್ದಾರೆ. ಹೀಗೆ ಮಾಡಿದರೆ, ಬಡ ವ್ಯಾಪಾರಿಗಳ ದಿನಗೂಲಿ ಮಾಡುವವರ ಪರಿಸ್ಥಿತಿ ಏನಾಗಬೇಕು. ಈ ಕುರಿತು ರಾಷ್ಟ್ರೀಯ ಪಕ್ಷಗಳು ಯೋಚನೆ ಮಾಡಿವೆಯೇ. ಮತ ಪಡೆಯಲು ಇಂತಹ ಚಿಲ್ಲರೆ ವಿಷಯ ಇಟ್ಟುಕೊಂಡು ಬೀದಿಗೆ ಬಂದಿದ್ದಾರೆ ಎಂದು ಕಿಡಿಕಾರಿದರು. ಇವರು ಮೊಟ್ಟೆಕಥೆ ಇಟ್ಟುಕೊಂಡು ಹೋಗದಿದ್ದರೆ 144 ಸೆಕ್ಷನ್‌ ಜಾರಿಯಾಗುತ್ತಿರಲಿಲ್ಲ. ಪಾದಯಾತ್ರೆ ಯಾತಕ್ಕಾಗಿ ಮಾಡಬೇಕು. ಪಾದಯಾತ್ರೆ ಮಾಡಿ ಮೇಕೆದಾಟು ಬಂದೇಬಿಡ್ತು ಎಂದು ವ್ಯಂಗ್ಯವಾಡಿದರು.

ನಮ್ಮ ಆಹಾರ ಪದ್ಧತಿ ಚರ್ಚೆಗೆ ಗ್ರಾಸವಾಗಬಾರದು: ಎಚ್‌ಡಿಕೆ

2023ನಲ್ಲಿ ಅಧಿಕಾರಕ್ಕೆ: ಜೆಡಿಎಸ್‌ ಹಳ್ಳ ಹಿಡಿದಿದೆ ಅಂತಾರೆ. ಆದರೆ ಮುಂದಿನ ಬಾರಿ ನಾಡಿನ ಆರುವರೆ ಕೋಟಿ ಜನರ ಆಶೀರ್ವಾದದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. 2023ರ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ಜನ ಮನೆಗೆ ಕಳುಹಿಸುತ್ತಾರೆ. ನನಗೆ ಪ್ರಚಾರ ಸಿಗದೆ ಇರಬಹುದು. ಜನ ಶಕ್ತಿ ಏನು ಅಂತ ನನಗೆ ಗೊತ್ತಿದೆ. ಕಾರ್ಯಕರ್ತರು ಪ್ರತಿ ತಾಲೂಕಿನಲ್ಲಿ ಪಕ್ಷವನ್ನ್ಷು ಗಟ್ಟಿಯಾಗಿ ಕಟ್ಟುತ್ತಿದ್ದಾರೆ. ಹೀಗಾಗಿ ನನಗೆ ಯಾವುದರ ಬಗ್ಗೆಯೂ ಆತಂಕ ಇಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!