ಅಕ್ರಮಗಳ ಸರದಾರ ಕೆಂಪಣ್ಣ: ಮಂಡ್ಯ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

By Ravi Nayak  |  First Published Aug 25, 2022, 12:56 PM IST
  • ​​​​ರಾಜ್ಯದಲ್ಲಿ 40% ಕಮಿಷನ್ ವಿಚಾರ ಮತ್ತೆ ಚರ್ಚೆ.
  • ಅಕ್ರಮಗಳ ಸರದಾರ ಕೆಂಪಣ್ಣ
  • ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ವಾಗ್ದಾಳಿ
  • ಮಂಡ್ಯ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ ನೃಪತುಂಗ ವಾಗ್ದಾಳಿ

ಮಂಡ್ಯ (ಆ.25) : ರಾಜ್ಯದಲ್ಲಿ 40% ಕಮಿಷನ್ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದ ಬೆನ್ನಲ್ಲೇ ಅಸಮಾಧಾನ ಸ್ಪೋಟಗೊಂಡಿದೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಮಂಡ್ಯ ಬಿಲ್ಡರ್ಸ್ ಅಸೋಸಿಯೇಷನ್ ಅಧ್ಯಕ್ಷ(President of Mandya Builders Association) ನೃಪತುಂಗ(Nripatunga) ವಾಗ್ದಾಳಿ ನಡೆಸಿದ್ದು ಕೆಂಪಣ್ಣ(Kempanna) ಅಕ್ರಮಗಳಲ್ಲಿ ಅಕ್ರಮಗಳ ಸರದಾರ ಎಂದು ಕಿಡಿಕಾರಿದ್ದಾರೆ.

ಸಿಎಂ ಬೊಮ್ಮಾಯಿ ಸೇರಿ ಸರ್ಕಾರದ ಎಲ್ಲರೂ ಕಮಿಷನ್‌ ಕೇಳ್ತಾರೆ: ಗುತ್ತಿಗೆದಾರರ ಸಂಘ ಗಂಭೀರ ಆರೋಪ

Tap to resize

Latest Videos

ಸಂತೋಷ್ ಪಾಟೀಲ್ ಆತ್ಮಹತ್ಯೆ(Santosh Patil suicide Case) ನಡೆದಾಗ ಕೆಂಪಣ್ಣ ಸರ್ಕಾರದ ವಿರುದ್ಧ ಮನಸೋ ಇಚ್ಛೆ ವಾಗ್ದಾಳಿ ನಡೆಸಿದ್ದರು. ಆದರೆ ಮಾರನೆಯ ದಿನ ಸಿಎಂ ಹೊಗಳಿ ಗೌಪ್ಯ ಪತ್ರ ಬರೆದರು. ಅದುವೆ ಸಂಘದ ಲೆಟರ್ ಹೆಡ್‌ನಲ್ಲಿ ಪತ್ರ ಬರೆದು ಸಿಎಂ ಹೊಗಳಿದ್ದರು. ಸಂಘದ ಕಟ್ಟಡ ಮೇಲೆ ಇರುವ 1.50ಕೋಟಿ ಸಾಲ ತೀರಿಸಿಕೊಡಿ ಎಂದು ಪತ್ರದ ಮೂಲಕ ಬೇಡಿಕೊಂಡರು. ಇವರ ಬ್ಲಾಕ್ ಮೇಲ್ ಸಿದ್ದಾಂತದಿಂದ ಗುತ್ತಿಗೆದಾರರು ಹಾಳಾಗುತ್ತಿದ್ದಾರೆ ಎಂದರು.

ಬೈಲಾ ಪ್ರಕಾರ ಸಂಘದ ಅಧ್ಯಕ್ಷನಾಗಲು ಕೆಂಪಣ್ಣ ಅವರಿಗೆ ಅರ್ಹತೆ ಇಲ್ಲ. 20ವರ್ಷಗಳಿಂದ ಕೆಂಪಣ್ಣ ಗುತ್ತಿಗೆದಾರ ವೃತ್ತಿಯನ್ನೇ ಮಾಡ್ತಿಲ್ಲ. ನಿಯಮಬಾಹಿರವಾಗಿ ಸಂಘದ ಅಧ್ಯಕ್ಷರಾಗಿದ್ದಾರೆ ಎಂದು ಆರೋಪಿಸಿದರು.

40% ಕಮಿಷನ್ ಆರೋಪ: ಇದಕ್ಕೆ ಇನ್ನೇನು ಸಾಕ್ಷಿ ಬೇಕು, ತನಿಖೆಗೆ ಆಗ್ರಹಿಸಿದ ಪ್ರಿಯಾಂಕ್ ಖರ್ಗೆ

ಕಂಟ್ರಾಕ್ಟ್ ವೃತ್ತಿಯಲ್ಲಿ ಟೆಕ್ನಿಕಲ್ ಬಹಳ ಮುಖ್ಯ. ಕೆಂಪಣ್ಣ ಅವರಿಗೆ ಟೆಕ್ನಿಕಲಿ ಎಳ್ಳಷ್ಟು ಗೊತ್ತಿಲ್ಲ. ಸರ್ಕಾರದಲ್ಲಿರುವ ನೂರಾರು ಕೋಟಿ ಕಂಟ್ರಾಕ್ಟರ್ ಬೆನಿಫಿಟ್ ಫಂಡ್(Contractor Benefit Fund) ದೋಚಲು ಪ್ಲಾನ್ ಮಾಡಿದ್ದಾರೆ. ದಾಖಲೆಗಳಿದ್ದರೆ ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಲಿ. ಅವರ ಬಳಿ ಯಾವ ದಾಖಲೆಯೂ ಇಲ್ಲ. ಒಮ್ಮೆ ಆರೋಪಿಸಿದ ಸಚಿವರ ಹೆಸರನ್ನ ಮತ್ತೆ ತೆಗೆಯುವುದಿಲ್ಲ. ಕಂಟ್ರಾಕ್ಟರ್ ಹೆಸರಲ್ಲಿ ವೈಯಕ್ತಿಕ ಲಾಭ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

click me!