
ಮೈಸೂರು (ಏ.02): ರಾಜ್ಯದಲ್ಲಿ ಚುನಾವಣೆ ಹತ್ತಿರ ಬಂತು ಮೀಸಲಾತಿ ಜಾರಿಗೆ ತಂದು 4 ತಿಂಗಳಾದರೂ ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಿಲ್ಲ. ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತಿದೆ. ಆದರೆ, ಬಳ್ಳಾರಿಯಲ್ಲಿ ಇದ್ದಾನೆ ಒಬ್ಬ ಪೆದ್ದ ರಾಮುಲು ಮೀಸಲಾತಿ ಸಿಕ್ಕಿದೆ ಎಂದು ಭಾಷಣ ಮಾಡಿದ್ದೇ ಮಾಡಿದ್ದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಬಚಾವೋ, ದೇಶ ಬಚಾವೋ ಧರಣಿಯಲ್ಲಿ ಮಾತನಾಡಿದ ಅವರು, ರಾಜ್ಯ ಚುನಾವಣೆ ಬಂತೆಂದು ಮೀಸಲಾತಿ ಜಾರಿಗೆ ತರಲಾಗಿದೆ. ಅದನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ ಸೇರ್ಪಡೆ ಮಾಡಿಲ್ಲ. ಆದರೆ, ಮೀಸಲಾತಿ ಜಾರಿಗೆ ತಂದು 4 ತಿಂಗಳಾದರೂ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿಲ್ಲ. ಸರ್ಕಾರ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡ್ತಿದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ದವಾದದ್ದು ಆಗಿದೆ. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದ್ದೇವೆ. ಇದು ಜನರ ತಲೆ ಮೇಲೆ ಮಕ್ಮಲ್ ಟೋಪಿ ಹಾಕುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
Hassan JDS Ticket Fight: ಹೆಚ್‌ಡಿಕೆ ಪಟ್ಟು, ರೇವಣ್ಣ ಸಿಟ್ಟು, ಗೌಡರ ಬಿಕ್ಕಟ್ಟು, ಇಲ್ಲಿದೆ ಕುಮಾರಣ್ಣನ ತಂತ್ರ!
ಮೀಸಲಾತಿ ಸಿಕ್ಕಿದೆ ಎಂದು ಭಾಷಣ: ನಾನು ಈ ಹಿಂದೆ ಮೀಸಲಾತಿ ಬಳ್ಳಾರಿಯಲ್ಲಿ ಮೀಸಲಾತಿ ಕೊಡಲಾಗಿದೆ ಎಂದು ಭಾಷಣ ಮಾಡಿದ್ದೆ ಮಾಡಿದ್ದು. ಬಳ್ಳಾರಿಯಲ್ಲಿ ಇದ್ದಾನೆ ಒಬ್ಬ ಪೆದ್ದ ರಾಮುಲು ಎಂದು ಸಚಿವ ಶ್ರೀರಾಮುಲು ಅವರನ್ನು ಪೆದ್ದ ಎಂದು ಲೇವಡಿ ಮಾಡಿದರು. ಈಗಾಗಲೇ ಬೇರೆ ರಾಜ್ಯದಲ್ಲಿ ಶೇ.50ಗಿಂತ ಹೆಚ್ಚಿನ ಮೀಸಲಾತಿ ಇದೆ. ಅದೇ ರೀತಿ ಸಂವಿಧಾನದಲ್ಲಿ ಬದಲಾವಣೆ ಮಾಡಿ. ಅದನ್ನ ಬಿಟ್ಟು ಮುಸ್ಲಿಮರ ಮೀಸಲಾತಿ ಯಾಕೆ ಕಿತ್ತಾಕಿದ್ದಿರಿ. ಈಗ ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಳ ಮಾಡಿದ್ದೀರಿ. ಆದರೆ, ಯಾಕೆ ಸಂವಿಧಾನಕ್ಕೆ ಸೇರಿಸಿಲ್ಲ. ನೀವು ಸಂವಿಧಾನಕ್ಕೆ ತಿದ್ದುಪಡಿ ತರದೆ, 9ಸೆಡ್ಯೂಲ್ ಗೆ ತರದೆ ರಕ್ಷಣೆ ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರಕ್ಕೆ ಮೀಸಲಾತಿ ಪ್ರಸ್ತಾವನೆ ಸಲ್ಲಿಸಿಲ್ಲ: ಮತ್ತೊಂದೆಡೆ ಕೇಂದ್ರ ಸರ್ಕಾರ ನಮಗೆ ಪ್ರಸ್ತಾವನೆನೇ ಬಂದಿಲ್ಲ ಅಂತ ಹೇಳುತ್ತಿದೆ. ಶೇ.15 ಒಳ ಮೀಸಲಾತಿ ಕೊಡಬೇಕಿತ್ತು. ಶೇ.17 ಒಳ ಮೀಸಲಾತಿ ತಂದಿರುವುದಾಗಿ ಹೇಳಿದ್ದಿರಿ. ಆದರೆ ಶೇ.17 ಒಳ ಮೀಸಲಾತಿ ಊರ್ಜಿತನೇ ಆಗಿಲ್ಲ. ಅಂಬೇಡ್ಕರ್ ಅವರು ಈ ದೇಶಕ್ಕೆ ಬೇಕಾದ ಸಂವಿಧಾನದ ರಚನೆ ಮಾಡಿ ಕೊಟ್ಟಿದ್ದಾರೆ. ಆದರೆ ಇಂದು ಜಾತಿ ವ್ಯವಸ್ಥೆಯಿಂದ ಅಸಮಾನತೆ ಉಂಟಾಗಿದೆ. ಅವಕಾಶ ವಂಚಿತರಿಗೆ ವಿಶೇಷ ಸೌಲಭ್ಯ ನೀಡಲು ಮೀಸಲಾತಿ ಇದೆ. ಎಲ್ಲರಿಗೂ ಸಾಮಾನ ಅವಕಾಶ ಸಿಕ್ಕರೆ ಮಾತ್ರ ಸಾಮರಸ್ಯ ಸಾಧ್ಯ ಎಂದು ಹೇಳಿದರು.
ಕಾರ್ಮಿಕ ಮಹಿಳೆಯರಿಗೆ ಬಸ್‌ಪಾಸ್ ಕೊಡದೇ ಏಪ್ರಿಲ್ ಫೂಲ್ ಮಾಡಿದ ಸಿಎಂ ಬೊಮ್ಮಾಯಿ : ಡಿಕೆ ಶಿವಕುಮಾರ ಟೀಕೆ
ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡಿದ ಬಿಜೆಪಿ: ಇನ್ನು ಧರ್ಮದ ಆಧಾರದ ಮೇಲೆ ಮೀಸಲಾತಿ ಕೊಟ್ಟಿರುವುದು ಕಾನೂನು ಬಾಹಿರವಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಈಗ ಮುಸ್ಲಿಂ ಸಮುದಾಯವನ್ನುಆರ್ಥಿಕ ಹಿಂದುಳಿದ ವರ್ಗಕ್ಕೆ ಹಾಕಿ ಎಲ್ಲಾ ಮುಸ್ಲಿಮರಿಗೆ ಮೋಸ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಾಗ್ ಮೋಹನ್ ವರದಿ ನೀಡಿದರು. ಬಿಜೆಪಿ ಸರ್ಕಾರ ಮೂರೂವರೆ ವರ್ಷ ಹಿಂದುಳಿದ ವರ್ಗಗಳ ಮೀಸಲಾತಿ ಜಾರಿಗೆ ತರ ಸುಮ್ಮನೆ ಬಿಜೆಪಿ ಸರ್ಕಾರ ಇತ್ತು. ನಾವು ಸದನದ ಬಾವಿಗೆ ಇಳಿದು ಹೋರಾಟ ಮಾಡಿದೆವು. ಯಾವುದೇ ಹೋರಾಟಕ್ಕೆ ಬಿಜೆಪಿ ಸರ್ಕಾರ ಮಣಿಯಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.