ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಲಯಗಳ ಆದೇಶ ಪಾಲಿಸುವಲ್ಲಿ ಚೂರು ವ್ಯತ್ಯಾಸವಾದರೂ ಡ್ಯಾಂಗಳ ಕೀಲಿಕೈ ರಾಜ್ಯದ ಕೈತಪ್ಪುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದಾಗ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅದನ್ನೆಲ್ಲಾ ಬಹಿರಂಗವಾಗಿ ಹೇಳಬೇಡಪ್ಪಾ ಎಂದು ಬ್ರೇಕ್ ಹಾಕಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು.
ವಿಧಾನ ಪರಿಷತ್ತು (ಡಿ.15): ಕಾವೇರಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಲಯಗಳ ಆದೇಶ ಪಾಲಿಸುವಲ್ಲಿ ಚೂರು ವ್ಯತ್ಯಾಸವಾದರೂ ಡ್ಯಾಂಗಳ ಕೀಲಿಕೈ ರಾಜ್ಯದ ಕೈತಪ್ಪುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದಾಗ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅದನ್ನೆಲ್ಲಾ ಬಹಿರಂಗವಾಗಿ ಹೇಳಬೇಡಪ್ಪಾ ಎಂದು ಬ್ರೇಕ್ ಹಾಕಿದ ಘಟನೆ ಮೇಲ್ಮನೆಯಲ್ಲಿ ನಡೆಯಿತು.
ಪ್ರಶೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಅವರು, ರಾಜ್ಯವೇ ಸಂಕಷ್ಟದ ಲ್ಲಿದ್ದಾಗ ತಮಿಳುನಾಡಿಗೆ ನೀರು ಹರಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಶಿವಕುಮಾರ್, 'ಸಾಮಾನ್ಯ ಜಲ ವರ್ಷಗಳಲ್ಲಿ ತಮಿಳುನಾಡಿಗೆ ಆಗಸ್ಟ್‌ನಿಂದ ನವೆಂಬರ್ ವರೆಗೆ 116 ಟಿಎಂಸಿ ನೀರು ಹರಿಸಬೇಕು. ಆದರೆ, ಈ ವರ್ಷ ಸಂಕಷ್ಟ ಇರುವುದರಿಂದ 57.082 ಟಿಎಂಸಿ ನೀರು ಮಾತ್ರ ಹರಿಸಿದ್ದೇವೆ. ಕೋರ್ಟ್ ಆದೇಶ ಗಳನ್ನೂ ಪಾಲಿಸಿ, ರೈತರಿಗೂ ಸಮಸ್ಯೆಯಾಗದಂತೆ ನೋಡಿ ಕೊಂಡಿದ್ದೇವೆ. ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದೇವೆ. ಕೊಂಚ ವ್ಯತ್ಯಾಸವಾದರೂ ರಾಜ್ಯದ ಕೈಲಿರುವ ಡ್ಯಾಂಗಳ ಕೀಲಿ ಕೈ ಕೇಂದ್ರದ ಪಾಲಾಗಲಿದೆ' ಎಂದರು.
ಆಗ ಮಧ್ಯಪ್ರವೇಶಿಸಿದ ಸಿಎಂ,'ಅದನ್ನೆಲ್ಲಾ ಇಲ್ಲಿ ಬಹಿರಂಗವಾಗಿ ಹೇಳ ಬೇಡಪ್ಪಾ? ಏ ರವಿಕುಮಾರ್ ಕೆಲ ವಿಚಾರ ಗಳನ್ನು ಇಲ್ಲಿ ಬಹಿರಂಗವಾಗಿ ಹೇಳಲು ಆಗಲ್ಲ. ಸಚಿವರ ಕಚೇರಿಗೆ ಹೋಗಿ ತಿಳಿದುಕೊ' ಎಂದರು.
ಬೆಳಗಾವಿ ಬಿಜೆಪಿ ಭದ್ರಕೋಟೆಯಾಗಲಿ : ಬಿ.ವೈ.ವಿಜಯೇಂದ್ರ ಕರೆ
ಉತ್ತರ ಕರ್ನಾಟಕ ಸಮಸ್ಯೆ ಚರ್ಚಿಸಲು ವಿಧಾನಸಭೇಲಿ ಮಂತ್ರಿಗಳೇ ಇಲ್ಲ!
ವಿಧಾನಸಭೆ: ಉತ್ತರ ಕರ್ನಾಟಕದ ಚರ್ಚೆ ವೇಳೆ ಮಂತ್ರಿಗಳು ಇಲ್ಲ; ಅಧಿಕಾರಿ ವರ್ಗವೂ ಸದನಕ್ಕೆ ಹಾಜರಾಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಗುರುವಾರ ಭೋಜನ ವಿರಾಮದ ಬಳಿಕ ಮತ್ತೆ ಶುರು ವಾದ ಕಲಾಪದಲ್ಲಿ ಸಚಿವ ಪ್ರಿಯಾಂಕ ಖರ್ಗೆ(priyank kharge) ಹೊರತುಪಡಿಸಿ ಉಳಿದ ಸಚಿವರು ಯಾರೂ ಭಾಗಿಯಾಗಿರಲಿಲ್ಲ. ಉತ್ತರ ಕರ್ನಾಟಕದ ಚರ್ಚೆಗೆ ಸಿದ್ದು ಸವದಿಗೆ ಮಾತನಾಡಲು ಸ್ಪೀಕರ್ ಅವಕಾಶ ಕೊಟ್ಟರು. 5-10 ನಿಮಿಷ ಮಾತನಾಡಿದರು. ಅಷ್ಟೊತ್ತಾದರೂ ಯಾವೊಬ್ಬ ಸಚಿವರು ಮತ್ತೆ ಬರಲಿಲ್ಲ.
ಉತ್ತರ ಕರ್ನಾಟಕ ಬಗ್ಗೆ ಪ್ರತ್ಯೇಕತೆಯ ಕೂಗು ಏಳದಂತೆ ನೋಡಿಕೊಳ್ಳಿ: ಶಾಸಕ ಯತ್ನಾಳ
ಇದರಿಂದ ಪ್ರತಿಪಕ್ಷದ ಸದಸ್ಯರೆಲ್ಲರೂ ಮಂತ್ರಿಗಳೇ ಇಲ್ಲದ ವೇಳೆ ಯಾರ ಮುಂದೆ ನಮ್ಮ ಸಮಸ್ಯೆ ಹೇಳಬೇಕು. ಉತ್ತರ ಕರ್ನಾಟಕದ ಬಗ್ಗೆ ಕಾಳಜಿಯೇ ಇಲ್ಲ. ಹೀಗಾಗಿ ಯಾರೊಬ್ಬರು ಬರುತ್ತಿಲ್ಲ ಎಂದು ಟೀಕಿಸಿ ಸಭಾತ್ಯಾಗ ಮಾಡುತ್ತೇವೆಂದು ಹೊರ ನಡೆದರು. ಆಗ ಮಾತನಾಡುತ್ತಿದ್ದ ಸಿದ್ದು ಸವದಿ ಸೇರಿ ಎಲ್ಲ ಸದಸ್ಯರು ಸಭಾತ್ಯಾಗ ಮಾಡಿದರು. 25 ನಿಮಿಷ ನಂತರ ವಾಪಸ್ ಮತ್ತೆ ಚರ್ಚೆಯಲ್ಲಿ ಪಾಲ್ಗೊಂಡರು.