ಬೆಳಗಾವಿ ಬಿಜೆಪಿ ಭದ್ರಕೋಟೆಯಾಗಲಿ : ಬಿ.ವೈ.ವಿಜಯೇಂದ್ರ ಕರೆ

By Kannadaprabha News  |  First Published Dec 15, 2023, 4:53 AM IST

 ಬೆಳಗಾವಿ ಭಾರತೀಯ ಜನತಾ ಪಾರ್ಟಿ ಭದ್ರಕೋಟೆ ಆಗಬೇಕು.‌ಚಿಕ್ಕೋಡಿ, ಬೆಳಗಾವಿ ಬಿಜೆಪಿಗೆ ಸುವರ್ಣಾ ಕ್ಷರಗಳಲ್ಲಿ ಬರೆದಿಡುವಂತಹ ಭದ್ರಬುನಾದಿ‌ ಹಾಕಬೇಕು ಎಂದು ವಿಜಯೇಂದ್ರ ಕರೆ ನೀಡಿದರು. ಇಲ್ಲಿನ ಸುಭಾಷ ನಗರದಲ್ಲಿ ಗುರುವಾರ ಬೆಳಗಾವಿ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಾರ್ಯಾಲಯ ಭೂಮಿ ಪೂಜೆಗೆಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ‌ ಭೂಮಿ ಪೂಜೆ ನೆರವೇರಿಸಿದರು.


ಬೆಳಗಾವಿ (ಡಿ.15) :  ಬೆಳಗಾವಿ ಭಾರತೀಯ ಜನತಾ ಪಾರ್ಟಿ ಭದ್ರಕೋಟೆ ಆಗಬೇಕು.‌ಚಿಕ್ಕೋಡಿ, ಬೆಳಗಾವಿ ಬಿಜೆಪಿಗೆ ಸುವರ್ಣಾ ಕ್ಷರಗಳಲ್ಲಿ ಬರೆದಿಡುವಂತಹ ಭದ್ರಬುನಾದಿ‌ ಹಾಕಬೇಕು ಎಂದು ವಿಜಯೇಂದ್ರ ಕರೆ ನೀಡಿದರು. ಇಲ್ಲಿನ ಸುಭಾಷ ನಗರದಲ್ಲಿ ಗುರುವಾರ ಬೆಳಗಾವಿ ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಕಾರ್ಯಾಲಯ ಭೂಮಿ ಪೂಜೆಗೆಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ‌ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮತಾನಾಡಿದ ವಿಜಯೇಂದ್ರ ಅವರು, ಬಹಳಷ್ಟು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಬಿಜೆಪಿ ಕಾರ್ಯಾಲಯಕ್ಕೆ ಇಂದು ಶುಭ ಘಳಿಗೆಯಲ್ಲಿ ಪೂಜೆ ನೇರವೇರಿದೆ. ಪಕ್ಷದ ಚಟುವಟಿಕೆಗಳು ಆಗಬೇಕೆಂದು ಪಕ್ಷದ ಕಚೇರಿ ನಿರ್ಮಿಸಲಾಗಿದೆ. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿ ಕಾರ್ಯಾಲಯ ಆಗಬೇಕು ಎಂಬುದು‌ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರ ಉದ್ದೇಶವಾಗಿದೆ. ಅಲ್ಲದೇ ಯಡಿಯೂರಪ್ಪ ಅವರಿಗೂ ಕಾರ್ಯಾಲಯ ಆಗಬೇಕೆಂದು ಕನಸು ಇತ್ತು ಎಂದರು.

Tap to resize

Latest Videos

ಭದ್ರಾವತಿ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ; ಬಿವೈ ವಿಜಯೇಂದ್ರ ಗರಂ

ಬೆಳಗಾವಿ ಜಿಲ್ಲೆ ಸಕ್ಕರೆ ನಾಡು, ಕುಂದಾನಗರಿ. ಉತ್ತರ ಕರ್ನಾಟಕ ರಾಜ್ಯದ ಹೆಬ್ಬಾಗಿಲು ಬೆಳಗಾವಿ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಚಿಕ್ಕೋಡಿ ಬೆಳಗಾವಿ ಹೆಬ್ಬಾಗಿಲು ಆಗಬೇಕು. ಬುಧವಾರ ನಡೆದ ಪ್ರತಿಭಟನೆ ಅಭೂತಪೂರ್ವ ಕಾರ್ಯಕ್ರಮ ಆಗಿದೆ. ಕಳೆದೊಂದು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಜಿಲ್ಲೆಯ ಎಲ್ಲ‌ ನಾಯಕರು ಬಂದಿದ್ದರು. ರಾಜ್ಯದ ಸರ್ಕಾರದ ವಿರುದ್ಧ ಹೋರಾಟದ ಕಿಚ್ಚು ಹಚ್ಚಲು ಯಶಸ್ವಿಯಾಗಿದ್ದೇವೆ ಎಂದ ವಿಜಯೇಂದ್ರ ಕಾರ್ಯಾಲಯ ನಿರ್ಮಾಣಕ್ಕೆ ಸಂಜಯ ಪಾಟೀಲ ಅವರು 5 ಲಕ್ಷ ರೂ. ಕಾಣಿಕೆ ನೀಡಿದ್ದಾರೆ. ಈ ಕಟ್ಟಡದ ಹೊಣೆ ತಮ್ಮೆಲ್ಲರದ್ದು, ಬೆಳಗಾವಿಯಲ್ಲಿ ಬಿಜೆಪಿ ಬೆಳೆಯಲು ಜನಸಂಘ ಕಾಲದಿಂದ ಸಿ.ಎಂ.ಪಾಟೀಲ, ಅಪ್ಪಾಸಾಹೇಬ ಮುತಗೇಕರ್ ಅವರಂಥ ಅನೇಕ ಹಿರಿಯರ ‌ಶ್ರಮವಿದೆ. ಹಲವಾರು ದಶಕಗಳ ಅವರ ಹೋರಾಟ ಶ್ರಮದಿಂದ ಬಿಜೆಪಿ ಎತ್ತರಕ್ಕೆ ಬೆಳೆದಿದೆ ಎಂದರು.

ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್‌ ಹಾಕುವೆ: ಪ್ರಿಯಾಂಕ್‌ ಖರ್ಗೆ

ಈ ಕಾರ್ಯಕ್ರಮದಲ್ಲಿ ಶಾಸಕರಾದ ಶಶಿಕಲಾ ಜೊಲ್ಲೆ, ಅಭಯ ಪಾಟೀಲ, ವಿಠ್ಠಲ ಹಲಗೇಕರ್, ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣ ಸ್ವಾಮಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ, ಮಹೇಶ ಕುಮಟಳ್ಳಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿ ಮತ್ತಿತರರು ಭಾಗವಹಿಸಿದ್ದರು.

click me!