ಜೆಡಿ​ಎಸ್‌ಗೆ ಕೊಟ್ಟ ಮತ ವೇಸ್ಟ್‌, ದುಡ್ಡಿದೆ ಅಂತ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ: ಸಿದ್ದ​ರಾ​ಮಯ್ಯ

By Kannadaprabha News  |  First Published Mar 6, 2023, 4:20 AM IST

ಜೆಡಿಎಸ್‌ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ದುಡ್ಡಿರುವ ಕಾರ​ಣಕ್ಕೆ ಸುಮ್ಮನೆ ಪಂಚರತ್ನ ಯಾತ್ರೆ ಅಂತ ಓಡಾಡುತ್ತಿ​ದ್ದಾ​ರೆ. ಅವರಿಗೆ ಮತ ನೀಡಿದರೆ ವೇಸ್ಟ್‌ ಆಗುತ್ತೆ, ಅದು ಬಿಜೆಪಿಗೆ ಹೋಗಲಿದೆ ಎಂದು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಆರೋ​ಪಿ​ಸಿ​ದ​ರು. 


ಅರಸೀಕೆರೆ (ಹಾ​ಸ​ನ​) (ಮಾ.06): ಜೆಡಿಎಸ್‌ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಲ್ಲ. ದುಡ್ಡಿರುವ ಕಾರ​ಣಕ್ಕೆ ಸುಮ್ಮನೆ ಪಂಚರತ್ನ ಯಾತ್ರೆ ಅಂತ ಓಡಾಡುತ್ತಿ​ದ್ದಾ​ರೆ. ಅವರಿಗೆ ಮತ ನೀಡಿದರೆ ವೇಸ್ಟ್‌ ಆಗುತ್ತೆ, ಅದು ಬಿಜೆಪಿಗೆ ಹೋಗಲಿದೆ ಎಂದು ಪ್ರತಿ​ಪಕ್ಷ ನಾಯಕ ಸಿದ್ದ​ರಾ​ಮಯ್ಯ ಆರೋ​ಪಿ​ಸಿ​ದ​ರು. ತಾಲೂಕಿನ ಗುತ್ತಿನಕೆರೆ ಗ್ರಾಮದಲ್ಲಿ ಭಾನು​ವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಿ ಬಳಿಕ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಿ, ಬಿಜೆಪಿ ಮತ್ತು ಜೆಡಿಎಸ್‌ ಹಿಂದುಳಿದ, ದಲಿತರ, ಶೋಷಿತರ, ಅಲ್ಪಸಂಖ್ಯಾತರ ಪರ ಇಲ್ಲ. ಬಿಜೆಪಿಯವರು ಈವರೆಗೆ ಬಡವರಿಗೆ ಒಂದೇ ಒಂದು ಮನೆ ಕೊಟ್ಟಿಲ್ಲ. ಜೆಡಿಎಸ್‌ನವ​ರು 123 ಸೀಟ್‌ ಗೆ​ಲ್ತೇವೆ ಅಂತ ಹೇಳು​ತ್ತಿ​ದ್ದಾರೆ. 

ಅದು ಹೇಗಾ​ಗುತ್ತೆ? ಜೆಡಿ​ಎ​ಸ್‌​ನ​ವರು ಗೆದ್ದೆತ್ತಿನ ಬಾಲ ಹಿಡಿಯೋರು. ನಾನು ಜೆಡಿಎಸ್‌ ಅಧ್ಯಕ್ಷ ಆಗಿ​ದ್ದಾಗಲೇ 59 ಸೀಟ್‌ ಗೆದ್ದಿದ್ದು ಬಿಟ್ಟರೆ ಮತ್ತೆ ಅಷ್ಟುಸ್ಥಾನ ಪಡೆದೇ ಇಲ್ಲ ಎಂದ​ರು. ರಾಜ್ಯ​ದ​ಲ್ಲಿ​ರೋದು 40 ಪರ್ಸೆಂಟ್‌ ಸರ್ಕಾರ ಎಂದಾಗ ಬಸವರಾಜ ಬೊಮ್ಮಾಯಿ ಸಾಕ್ಷಿ ಕೇಳುತ್ತಿದ್ದರಲ್ವಾ? ಮಾಡಾಳು ವಿರೂಪಾಕ್ಷಪ್ಪ ಮಗನ ಕೇಸ್‌ಗಿಂತ ಸಾಕ್ಷಿ ಬೇಕಾ? ಬಿಜೆ​ಪಿ​ಯ​ವರು ಒಂದೇ ಒಂದು ಕ್ಷಣ ನೀವು ಅಧಿಕಾರದಲ್ಲಿರಕೂಡದು. ರಾಜೀನಾಮೆ ನೀಡಿ ಹೋಗಿ, ಕೇವಲ ಮಗ ಮಾತ್ರ ಅಲ್ಲ ಮಾಡಾಳು ವಿರೂಪಾಕ್ಷ ಪ್ಪ ಅವ​ರನ್ನೂ ಬಂಧಿಸಿ ಎಂದು ಒತ್ತಾಯಿಸಿದರು.

Tap to resize

Latest Videos

ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?: ಮಾಡಾಳು ಪ್ರಕರಣದಲ್ಲಿ ಸರ್ಕಾರದ ವಿರುದ್ಧ ಸಿದ್ದು ವಾಗ್ದಾಳಿ

ಶಿವಲಿಂಗೇಗೌಡಗೆ ಟಿಕೆಟ್‌: ಶಿವಲಿಂಗೇಗೌಡರು ನನ್ನ ಹೊಗಳಿದ ಎನ್ನೋ ಒಂದೇ ಕಾರಣಕ್ಕೆ ಜೆಡಿ​ಎ​ಸ್‌​ನ​ವರು ದೂರ ಮಾಡಿದರು. ನಾನು ನಿನಗೆ ಆಹ್ವಾನ ಕೊಡುತ್ತೇ​ನೆ. ನಮ್ಮ ಪಕ್ಷಕ್ಕೆ ಬಂದು ಸೇರಿಕೋ ಅವರ ಜೊತೆ ನಾನು ಮಾತಾಡಿದ್ದೇನೆ. ಅವರು ನನ್ನ ಜತೆಗೆ ಬರಲು ಒಪ್ಪಿ​ಕೊಂಡಿ​ದ್ದಾರೆ. ಅವರಿಗೆ ಕೊಡೋ ಒಂದೊಂದು ಓಟೂ ಕೂಡ ನನಗೆ ಕೊಟ್ಟಂತೆ. ಅರಸೀಕೆರೆ ಕ್ಷೇತ್ರದಿಂದ ಶಿವಲಿಂಗೇಗೌಡರೇ ಕಾಂಗ್ರೆಸ್‌ ಅಭ್ಯರ್ಥಿ ಎಂದು ಘೋಷಿಸಿ​ದ​ರು. ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿದ್ದು ನಾನು. ಮಾಜಿ ಮುಖ್ಯ​ಮಂತ್ರಿ ಎಚ್‌.​ಡಿ.ಕುಮಾರಸ್ವಾಮಿ ಅಲ್ಲ. ಎತ್ತಿನಹೊಳೆ ಯೋಜನೆಯನ್ನೇ ಕುಮಾರಸ್ವಾಮಿ ವಿರೋಧಿಸಿದರು. ಯೋಜನೆ ಉದ್ಘಾಟನೆಗೆ ಕೂಡ ಕುಮಾರಸ್ವಾಮಿ ಬರಲಿಲ್ಲ. ಶಿವಲಿಂಗೇಗೌಡ ಅವರನ್ನೂ ಹೋಗದಂತೆ ಹೇಳಿದರು. ಆದರೂ ಶಿವಲಿಂಗೇಗೌಡ ಬಂದಿದ್ದರು ಎಂದರು.

ಬಿಜೆಪಿಯವರು ನುಡಿದಂತೆ ನಡೆಯ​ಲ್ಲ. ನಾವು ಬಸವಣ್ಣನ ನಾಡಿನಿಂದ ಯಾತ್ರೆ ಆರಂಭಿಸಿ​ದ್ದೇ​ವೆ. ಭ್ರಷ್ಟ, ಬಿಜೆಪಿ, ಅವಕಾಶವಾದಿ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಗೆಲ್ಲಿಸಿ. ಸೋಲಿನ ಭಯದಿಂದ ಇವರು ಜಿಪಂ, ತಾಪಂ ಚುನಾವಣೆಯನ್ನೂ ಮಾಡಲಿಲ್ಲ. ನಾನು ಮುಖ್ಯ​ಮಂತ್ರಿ​ಯಾ​ಗಿ​ದ್ದಾಗ ರೈತರ ಸಾಲ ಮನ್ನಾ ಮಾಡಿದ್ದೆ. ಬಿಜೆಪಿಯವರು ಮಾಡಿದ್ರಾ? ಯಡಿಯೂರಪ್ಪ ಅವ​ರು ನಾನು ರೈತನ ಮಗ ಅಂತಾರೆ. ಹಾಗಿದ್ದರೆ ನಾವ್ಯಾರಪ್ಪ? ಬಿಜೆಪಿ ಮತ್ತು ಜೆಡಿಎಸ್‌ ಒಂದೇ ನಾಣ್ಯದ ಎರಡು ಮುಖ ಎಂದು ಕಿಡಿಕಾರಿದರು.

ಇವರು ನಾಯಕರಾ? ನಾಲಾಯಕರಾ ಜನರೇ ತೀರ್ಮಾನ ಮಾಡಬೇಕು: ಸಿದ್ದರಾಮಯ್ಯ

ಬಿಜೆಪಿಯವರು ಜನರಿಗೆ ದೇಶಭಕ್ತಿ ಬಗ್ಗೆ ಪಾಠ ಹೇಳೋಕೆ ಶುರು ಮಾಡಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿ​ವ ಅಮಿತ್‌ ಶಾ ಪುಂಖಾನು ಪುಂ​ಖವಾಗಿ ದೇಶಪ್ರೇಮದ ಬಗ್ಗೆ ಮಾತಾಡುತ್ತಾರೆ. ಆದ​ರೆ ಬಿಜೆಪಿ ​ಆ​ರೆ​ಸ್ಸೆ​ಸ್‌​ನ​ವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿಲ್ಲ. ಅವರಲ್ಲಿ ಯಾರಾದರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರಾ? ಹೆಡಗೆವಾರ್‌ ಆಗಲಿ, ಗೋಲ್ವಾಲ್ಕರ್‌ ​ಆಗಲಿ ಹೋರಾಟ ಮಾಡಿದ್ದಾರಾ? ಹಾಗಿದ್ದರೆ ಅವರು ಯಾಕೆ ದೇಶಭಕ್ತಿ ಬಗ್ಗೆ ಮಾತನಾಡುತ್ತಾರೆ? ಎಂದು ವ್ಯಂಗ್ಯ​ವಾ​ಡಿ​ದ​ರು.

click me!