ಕೊಲೆ ಯತ್ನ ಆರೋಪ ಹೊತ್ತಿದ್ದ ಲಕ್ಷದ್ವೀಪದ ಸಂಸದನ ಸದಸ್ಯತ್ವ ಮರುಸ್ಥಾಪನೆ : ರಾಹುಲ್‌ಗೆ ಆನೆಬಲ

Published : Mar 29, 2023, 01:27 PM ISTUpdated : Mar 29, 2023, 01:36 PM IST
ಕೊಲೆ ಯತ್ನ ಆರೋಪ ಹೊತ್ತಿದ್ದ ಲಕ್ಷದ್ವೀಪದ ಸಂಸದನ ಸದಸ್ಯತ್ವ ಮರುಸ್ಥಾಪನೆ :  ರಾಹುಲ್‌ಗೆ ಆನೆಬಲ

ಸಾರಾಂಶ

ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್  ಅವರ ಲೋಕಸಭೆ ಸದಸ್ಯತ್ವ ಇಂದು ಮರು ಸ್ಥಾಪನೆಯಾಗಿದೆ.  ಇದರಿಂದ ಇತ್ತೀಚೆಗಷ್ಟೇ ಅನರ್ಹಗೊಂಡ ಸಂಸದ ರಾಹುಲ್ ಗಾಂಧಿಗೆ ಆನೆಬಲ ಬಂದಂತಾಗಿದೆ.

ನವದೆಹಲಿ: ಗುಜರಾತ್‌ ಕೋರ್ಟ್ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂಸತ್ ಸದಸ್ಯತ್ವ ರದ್ದಾಗಿರುವುದರ ಬೆನ್ನಲೇ ಈಗ ಅಪರಾಧ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್  ಅವರ ಲೋಕಸಭೆ ಸದಸ್ಯತ್ವ ಇಂದು ಮರು ಸ್ಥಾಪನೆಯಾಗಿದೆ.  ಇದರಿಂದ ಇತ್ತೀಚೆಗಷ್ಟೇ ಅನರ್ಹಗೊಂಡ ಸಂಸದ ರಾಹುಲ್ ಗಾಂಧಿಗೆ ಆನೆಬಲ ಬಂದಂತಾಗಿದ್ದು, ಈ ತೀರ್ಪನ್ನೇ ಉಲ್ಲೇಖವಾಗಿರಿಸಿ ರಾಹುಲ್  ಅವರ ಸಂಸತ್ ಸದಸ್ಯತ್ವವನ್ನು ಮರು ಸ್ಥಾಪಿಸಲು ಅವರ ಕಾನೂನು ತಂಡವೂ ಹೋರಾಟ ನಡೆಸುವ ಸಾಧ್ಯತೆ ಇದೆ. 

ಗುಜರಾತ್‌ನ ಸೂರತ್ ಕೋರ್ಟ್‌ನ ತೀರ್ಪಿನ ವಿರುದ್ಧ ರಾಹುಲ್ ಗಾಂಧಿ ವಕೀಲರು ನಾಳೆ ಸೆಷನ್‌ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.  ರಾಹುಲ್ ಗಾಂಧಿ ಅವರ ಅನರ್ಹತೆಯ ನಂತರ ತೆರವಾಗಿರುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗವು ಉಪ ಚುನಾವಣೆಯ ದಿನಾಂಕಗಳನ್ನು ಘೋಷಿಸಿದರೆ ಕಾನೂನು ಹೋರಾಟಕ್ಕೆ ಸಿದ್ಧವಾಗಿರುವುದಾಗಿ ಈಗಾಗಲೇ  ಕಾಂಗ್ರೆಸ್ ಹೇಳಿದೆ.

ರಾಹುಲ್ ಅನರ್ಹತೆ ಭಾರತದ ಅಂತರಿಕ ವಿಚಾರ: ಅಮೆರಿಕಾಗೆ ಸಚಿವ ಅನುರಾಗ್ ತಿರುಗೇಟು

ಇತ್ತ ಈಗ ಸಂಸತ್ ಸದಸ್ಯತ್ವದ ಅನರ್ಹತೆಯಿಂದ ಪಾರಾಗಿರುವ ಲಕ್ಷದ್ವೀಪದ ಸಂಸದ ಮೊಹಮ್ಮದ್ ಫೈಜಲ್‌ಗೆ (Mohammed Faizal) ಕೊಲೆ ಯತ್ನ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಕೋರ್ಟ್‌ ಶಿಕ್ಷೆ ನೀಡಿದ ನಂತರ ಮೊಹಮ್ಮದ್‌ ಫೈಜಲ್‌ ಅವರನ್ನು ಸಂಸತ್ತಿನಿಂದ ಸ್ವಯಂಚಾಲಿತವಾಗಿ ಅನರ್ಹಗೊಳಿಸಲಾಗಿತ್ತು.  ಮೊಹಮ್ಮದ್ ಫೈಜಲ್‌ ಶರದ್ ಪವಾರ್ (Sharad Pawar) ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸಂಸದರಾಗಿದ್ದರು. ಆದರೆ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಮೊಹಮ್ಮದ್‌ ಫೈಜಲ್‌  ಪ್ರಕರಣಕ್ಕೆ ಜನವರಿಯಲ್ಲಿ ಕೇರಳ ಹೈಕೋರ್ಟ್ ತಡೆ ನೀಡಿತ್ತು. ಆದರೆ ಶಿಕ್ಷೆಯನ್ನು ತಡೆಹಿಡಿದು ಎರಡು ತಿಂಗಳ ನಂತರವೂ ತನ್ನ ಅನರ್ಹತೆಯನ್ನು ಹಿಂಪಡೆಯದ ಲೋಕಸಭೆಯ ಕಾರ್ಯದರ್ಶಿಯ  ಕಾನೂನು ಬಾಹಿರ ಕ್ರಮವನ್ನು (unlawful action) ಫೈಸಲ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು, ಇಂದು ಅವರ ಸದಸ್ಯತ್ವ ಮರುಸ್ಥಾಪನೆಯಾಗಿದೆ. 

2009 ರ ಚುನಾವಣೆಯ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ( PM Sayeed) ಅವರ ಸಂಬಂಧಿಯೊಬ್ಬರನ್ನು ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ 2016 ರಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಫೈಸಲ್ ಆರೋಪಿಸಿದ್ದಾರೆ. ಈ ಪ್ರಕರಣ ವಿಚಾರಣೆಯಲ್ಲಿ ಇರುವಾಗಲೇ  2019 ರಲ್ಲಿ ಇವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.  ಇದಾದ ನಂತರ ಜನವರಿ 11 ರಂದು ಇತರ ಮೂವರು ಆರೋಪಿಗಳ ಜೊತೆಗೆ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದಾಗಿ ಎರಡು ದಿನಗಳ ನಂತರ ಲೋಕಸಭೆಯ ಸಚಿವಾಲಯವು ಅವರಿಗೆ ಅನರ್ಹತೆಯ ನೋಟಿಸ್ ಕಳುಹಿಸಿತು.

ರಾಹುಲ್‌ - ಉದ್ಧವ್‌ ಸಂಧಾನ: ಸಾವರ್ಕರ್‌ ವಿವಾದ ತಣ್ಣಗಾಗಿಸಲು ಮಿತ್ರರ ಕ್ರಮ; ಇನ್ನು ಸಾವರ್ಕರ್‌ ಬಗ್ಗೆ ರಾಹುಲ್‌ ಮಾತಾಡಲ್ಲ..!

ಜನವರಿ 18 ರಂದು, ಚುನಾವಣಾ ಆಯೋಗವು ಫೈಸಲ್ ಅವರು ಪ್ರತಿನಿಧಿಸಿದ್ದ ಲಕ್ಷದ್ವೀಪದ ಸಂಸತ್‌ ಸ್ಥಾನಕ್ಕೆ ಜನವರಿ 27 ರಂದು ಚುನಾವಣೆ ಘೋಷಿಸಿತು. ಆದರೆ ಚುನಾವಣೆಗೆ ಎರಡು ದಿನಗಳ ಮೊದಲು, ಕೇರಳ ಹೈಕೋರ್ಟ್ ಫೈಸಲ್ ವಿರುದ್ಧದ ಶಿಕ್ಷೆಯನ್ನು ಅಮಾನತುಗೊಳಿಸಿತು. ಈ ಮೂಲಕ ಚುನಾವಣಾ ಆಯೋಗವು  ಲಕ್ಷದ್ವೀಪದ ಉಪ ಚುನಾವಣೆಯನ್ನು ತಡೆಹಿಡಿಯುವಂತಾಗಿತ್ತು. ಇದಾದ ಬಳಿಕ ಜನವರಿ 30 ರಂದು, ಶರದ್ ಪವಾರ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (ok Sabha Speaker Om Birla) ಅವರನ್ನು ಭೇಟಿ ಮಾಡಿ, ತಮ್ಮ ಪಕ್ಷದ ನಾಯಕನ ಅನರ್ಹತೆಯನ್ನು (disqualification) ಹಿಂಪಡೆಯುವಂತೆ ಮನವಿ ಮಾಡಿದರು.

ಇತ್ತ ರಾಹುಲ್ ಗಾಂಧಿ ಅವರ ಕಾನೂನು ಹೋರಾಟಕ್ಕೆ ಮೊದಲೇ ಚುನಾವಣಾ ಆಯೋಗವು ಅವರ ಕ್ಷೇತ್ರಕ್ಕೆ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದರೆ ವಯನಾಡ್‌ ಕ್ಷೇತ್ರಕ್ಕಾಗಿ ಕಾನೂನು ಹೋರಾಟವನ್ನು ನಡೆಸಲು ಕಾಂಗ್ರೆಸ್ ನಿರ್ಧರಿಸಿದೆ.  ಪ್ರಜಾಪ್ರತಿನಿಧಿ ಕಾಯಿದೆ 1951 ರ (Representation of the People Act 1951) ಪ್ರಕಾರ, ಅಪರಾಧಿ ಮತ್ತು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಕಾಲ ಜೈಲು ಶಿಕ್ಷೆಗೆ ಗುರಿಯಾದವರು ಅನರ್ಹರಾಗುತ್ತಾರೆ.  ಕರ್ನಾಟಕದ ಕೋಲಾರದಲ್ಲಿ 2019ರಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಎಲ್ಲಾ ಕಳ್ಳರಿಗೂ ಮೋದಿ ಸರ್‌ ನೇಮ್ ಏಕಿರುತ್ತದೆ ಎಂದು ಪ್ರಶ್ನಿಸಿದ್ದರು. ಇವರ ಹೇಳಿಕೆ ವಿರೋಧಿಸಿ ಗುಜರಾತ್‌ನ ಪೂರ್ಣೇಶ್ ಮೋದಿ ಎಂಬುವವರು ಸೂರತ್‌ನ ನ್ಯಾಯಾಲಯದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ (defamation case) ದಾಖಲಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಇದಾದ ಒಂದು ದಿನದ ನಂತರ ರಾಹುಲ್ ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿತ್ತು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ