5 ದಿನ ಮೊದಲೇ ಚಳಿಗಾಲದ ಕಲಾಪ ಅಂತ್ಯ

Kannadaprabha News   | Asianet News
Published : Dec 11, 2020, 11:30 AM ISTUpdated : Dec 11, 2020, 11:34 AM IST
5 ದಿನ ಮೊದಲೇ ಚಳಿಗಾಲದ ಕಲಾಪ ಅಂತ್ಯ

ಸಾರಾಂಶ

4 ದಿನದಲ್ಲಿ ಕೇವಲ 20 ಗಂಟೆ ನಡೆದ ವಿಧಾನಸಭೆ ಕಲಾಪ| ವಿಧಾನಪರಿಷತ್‌ನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿದ್ದ ಎರಡು ಸೇರಿ ಒಟ್ಟು ಎಂಟು ವಿಧೇಯಕಗಳ ಅಂಗೀಕಾರ| ಒಟ್ಟು 1,640 ಪ್ರಶ್ನೆಗಳನ್ನು ಸ್ವೀಕರಿಸಿದ್ದು ಸದನದಲ್ಲಿ ಉತ್ತರಿಸಬೇಕಾಗಿದ್ದ 60 ಪ್ರಶ್ನೆಗಳಿಗೆ ಪೂರ್ಣ ಉತ್ತರ|  

ಬೆಂಗಳೂರು(ಡಿ.11): ಗೋಹತ್ಯೆ ನಿಷೇಧ, ಭೂ ಸುಧಾರಣೆ ತಿದ್ದುಪಡಿ ಕಾಯಿದೆ ಸೇರಿ ಬಹುಚರ್ಚಿತ ಕಾಯಿದೆಗಳ ಮಂಡನೆಯಿಂದ ಮಹತ್ವ ಪಡೆದುಕೊಂಡಿದ್ದ ಪ್ರಸಕ್ತ ಸಾಲಿನ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಗುರುವಾರ ತೆರೆ ಬಿದ್ದಿದ್ದು, ಕಲಾಪ ಸಲಹಾ ಸಮಿತಿ ನಿರ್ಧಾರದಂತೆ ನಿಗದಿತ ಅವಧಿಗಿಂತ 5 ದಿನಗಳ ಮೊದಲೇ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಡಿ.7 ರಿಂದ ಡಿ.15ರವರೆಗೆ ನಿಗದಿಯಾಗಿ ಡಿ.10ಕ್ಕೆ ಸೀಮಿತಗೊಂಡ 4 ದಿನಗಳ ವಿಧಾನಸಭೆಯ ಕಲಾಪದಲ್ಲಿ 20 ಗಂಟೆಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ. ವಿಧಾನಪರಿಷತ್‌ನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿದ್ದ ಎರಡು ಸೇರಿ ಒಟ್ಟು ಎಂಟು ವಿಧೇಯಕಗಳನ್ನು ಅಂಗೀಕರಿಸಲಾಗಿದೆ.

ಮೊದಲ ದಿನದಿಂದಲೂ ಬಿಸಿ-ಬಿಸಿ ಚರ್ಚೆಗಳಿಗೆ ವೇದಿಕೆಯಾಗಿದ್ದ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯ ಕೊನೆಯ ದಿನದ ಕಲಾಪವನ್ನು ಕಾಂಗ್ರೆಸ್‌ ಸದಸ್ಯರು ಬಹಿಷ್ಕರಿಸಿದರು. ಕಲಾಪ ಸಲಹಾ ಸಮಿತಿಯಲ್ಲಿ ಪ್ರಸ್ತಾಪಿಸದೆ ಗೋಹತ್ಯೆ ನಿಷೇಧ ವಿಧೇಯಕ ಮಂಡನೆ ವಿರುದ್ಧ ಸ್ಪೀಕರ್‌ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇಂದಿನಿಂದ ಹೈವೋಲ್ಟೇಜ್‌ ಕಲಾಪ: ಕಾಂಗ್ರೆಸ್‌-ಬಿಜೆಪಿ ಜಟಾಪಟಿ ನಿರೀಕ್ಷೆ!

ಕಲಾಪ ಮುಂದೂಡುವ ಮೊದಲು ಮಾಹಿತಿ ನೀಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ನಾಲ್ಕು ದಿನಗಳ ಕಾರ್ಯಕಲಾಪ ಯಶಸ್ವಿಯಾಗಿ ಹಾಗೂ ಫಲಪ್ರದವಾಗಿ ಮುಕ್ತವಾಯವಾಗಿದೆ. ಒಂದು ಸಿಎಜಿ ವರದಿ, ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನಾ ವರದಿ ಸೇರಿ ನಾಲ್ಕು ಪ್ರಮುಖ ವರದಿಗಳು, 9 ಅಧಿಸೂಚನೆಗಳು, 4 ಆಧ್ಯಾದೇಶಗಳು, 46 ವಾರ್ಷಿಕ ವರದಿಗಳು, 18 ಲೆಕ್ಕ ಪರಿಶೋಧನಾ ವರದಿ, 2 ಅನುಪಾಲನಾ ವರದಿ, 2 ತಪಾಸಣಾ ವರದಿ ಮಂಡಿಸಲಾಗಿದೆ.

2020-21ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳನ್ನು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಒಟ್ಟು 1,640 ಪ್ರಶ್ನೆಗಳನ್ನು ಸ್ವೀಕರಿಸಿದ್ದು ಸದನದಲ್ಲಿ ಉತ್ತರಿಸಬೇಕಾಗಿದ್ದ 60 ಪ್ರಶ್ನೆಗಳಿಗೆ ಪೂರ್ಣವಾಗಿ ಉತ್ತರಿಸಲಾಗಿದೆ. ಜೊತೆಗೆ ಲಿಖಿತ ಮೂಲಕ ಉತ್ತರಿಸುವ 600 ಪ್ರಶ್ನೆಗಳ ಉತ್ತರಗಳನ್ನು ಮಂಡಿಸಲಾಗಿದೆ. ನಿಯಮ 351 ರಡಿಯಲ್ಲಿ 40 ಸೂಚನೆಗಳನ್ನು ಅಂಗೀಕರಿಸಿದ್ದು 25 ಸೂಚನೆಗಳ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು. ಗಮನ ಸೆಳೆಯುವ 142 ಸೂಚನೆಗಳ ಪೈಕಿ 3 ಸೂಚನೆಗಳನ್ನು ಚರ್ಚಿಸಲಾಗಿದ್ದು, 37 ಸೂಚನೆಗಳ ಉತ್ತರಗಳನ್ನು ಮಂಡಿಸಲಾಗಿದೆ ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
ದ್ವೇಷ ಭಾಷಣ ತಡೆಗೆ ಕಾನೂನು ಯತ್ನ: ಕಾಂಗ್ರೆಸ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಆಕ್ರೋಶ