ನಮ್ಮ ಕುಟುಂಬದ ಟಿಕೆಟ್‌ ಬಗ್ಗೆ ವರಿಷ್ಠರು ತೀರ್ಮಾನ: ನಿಖಿಲ್‌ ಕುಮಾರಸ್ವಾಮಿ

By Kannadaprabha NewsFirst Published Feb 6, 2023, 8:34 PM IST
Highlights

ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಕುಟುಂಬದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. 

ಮೈಸೂರು (ಫೆ.06): ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ನಮ್ಮ ಕುಟುಂಬದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ವರಿಷ್ಠರ ತೀರ್ಮಾನವೇ ಅಂತಿಮ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ, ನಟ ನಿಖಿಲ್‌ ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಎಚ್‌.ಡಿ.ಕೋಟೆ ರಸ್ತೆಯ ದಾರಿಪುರದಲ್ಲಿ ನಡೆದ ಜೆಡಿಎಸ್‌ ಯುವ ನಾಯಕರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಎಚ್‌.ಡಿ. ರೇವಣ್ಣ ಮಂಡ್ಯ ಜಿಲ್ಲೆಯಿಂದ ಸ್ಪರ್ಧಿಸುವ ವಿಚಾರವೂ ನನಗೆ ಗೊತ್ತಿಲ್ಲ. ನಾನು ರಾಜ್ಯಾಧ್ಯಕ್ಷ ಅಲ್ಲ, ಯುವ ಘಟಕದ ಅಧ್ಯಕ್ಷ. ನನ್ನ ಇತಿಮಿತಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. 

ರಾಜ್ಯಾದ್ಯಂತ ಪಕ್ಷಕ್ಕೆ ಉತ್ತಮ ವಾತಾವರಣ ಇದೆ. ಮೈಸೂರು ಜಿಲ್ಲೆಯಲ್ಲೂ ನಮ್ಮ ಅಭ್ಯರ್ಥಿಗಳು ಹೆಚ್ಚಾಗೆ ಗೆಲ್ಲಲಿದ್ದಾರೆ ಎಂದು ಹೇಳಿದರು. ಬಳಿಕ ಸಮಾವೇಶದಲ್ಲಿ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ಜಿ.ಟಿ. ದೇವೇಗೌಡರಿಗೆ ಕಾಂಗ್ರೆಸ್‌ ನಾಯಕರು ಹಾಕಿದ್ದ ಸವಾಲಿಗೆ ನೀವೆಲ್ಲ ಉತ್ತರ ನೀಡಿದ್ದೀರಿ. ನೀವೆಲ್ಲ ತೊಡೆ ತಟ್ಟಿನಿಂತಿದ್ದೀರಿ. ಕಳೆದ ಚುನಾವಣೆಯಲ್ಲಿ ಜಿಟಿಡಿ ಅವರನ್ನು ಗೆಲ್ಲಿಸಿ ಉತ್ತರ ನೀಡಿದ್ದೀರಿ. ಈ ಬಾರಿ 40 ರಿಂದ 50 ಸ್ಥಾನಕ್ಕೆ ಜೆಡಿಎಸ್‌ ಸೀಮಿತವಾಗುವುದಿಲ್ಲ. 123 ಸ್ಥಾನವನ್ನು ಗೆಲ್ಲುವ ಗುರಿಯನ್ನು ಹೊಂದಿದ್ದೇವೆ ಎಂದರು. ಕುಮಾರಸ್ವಾಮಿ ಅವರು ಏಕಾಂಗಿಯಾಗಿ ರಾಜ್ಯ ಸುತ್ತುತ್ತಿದ್ದಾರೆ. 

ಮಾಜಿ ಸಿಎಂ ಕುಮಾ​ರ​ಸ್ವಾಮಿ ಕುಟುಂಬ​ದ​ವರ ವಿರುದ್ಧ ಡಿ.ಕೆ.ಸುರೇಶ್‌ ವಾಗ್ದಾಳಿ

ಜೆಡಿಎಸ್‌ಗೆ ಮೈಸೂರು ಭಾಗಕ್ಕೆ ಜಿಟಿಡಿ ಒಂದು ಶಕ್ತಿ ಎಂದು ನನಗೆ ಕುಮಾರಣ್ಣ ಹೇಳಿ ಕಳುಹಿಸಿದ್ದಾರೆ. ಈ ಬೃಹತ್‌ ಕಾರ್ಯಕ್ರಮವನ್ನು ಎಚ್‌.ಡಿ. ದೇವೇಗೌಡ ಅವರು ಲೈವ್‌ನಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದಾರೆ. ಎಚ್‌.ಡಿ. ಕೋಟೆಯ ಚಿಕ್ಕಣ್ಣ ಅವರ ಪುತ್ರ ಜಯಪ್ರಕಾಶ್‌ ಅವರನ್ನು ಅಭ್ಯರ್ಥಿ ಮಾಡುವ ವಿಷಯಕ್ಕೆ ಕುಮಾರಣ್ಣನ ಶೀಘ್ರವೇ ತೆರೆ ಎಳೆಯಲಿದ್ದಾರೆ ಎಂದರು. ಜೆಡಿಎಸ್‌ಗೆ ದ್ರೋಹ ಬಗೆದು ಕಾಂಗ್ರೆಸ್‌ ಸೇರಿರುವ ಮುಖಂಡರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಮಗೆ ಜನರ ಶಕ್ತಿ ಇರುವಾಗ ಯಾರೂ ನಮ್ಮ ಪಕ್ಷಕ್ಕೆ ದಕ್ಕೆ ತರಲು ಸಾಧ್ಯವಿಲ್ಲ. 25 ಕಿ.ಮೀ ರಾರ‍ಯಲಿಯಲ್ಲಿ ಬಂದಿದ್ದೇನೆ. 

ಸಹಸ್ರಾರು ಸಂಖ್ಯೆಯಲ್ಲಿ ಸೇರಿರುವ ಈ ಸಮಾವೇಶ ಐತಿಹಾಸಿಕವಾಗಿರುವ ಜತೆಗೆ ಮತ್ತೊಂದು ಕುಮಾರ ಪರ್ವವನ್ನು ಈ ಸಮಾರಂಭ ನೆನಪಿಸುತ್ತಿದೆ. ಕಾಂಗ್ರೆಸ್‌ ಮಹಾನ್‌ ನಾಯಕರೇ ಇಲ್ಲಿ ಸೇರಿರುವ ಜನರನ್ನು ನೋಡಿದರೆ ಜೆಡಿಎಸ್‌ ಶಕ್ತಿ ಏನೆಂದು ಗೊತ್ತಾಗಲಿದೆ ಎಂದರು. ಜಿ.ಟಿ.ದೇವೇಗೌಡರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಸೋಲಿಸಿ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ 40-50 ಸ್ಥಾನಗಳಿಗೆ ಸೀಮಿತವಾಗಿಲ್ಲ. 123 ಸ್ಥಾನಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡು ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಹುಣಸೂರು ಜೆಡಿಎಸ್‌ ಅಭ್ಯರ್ಥಿ ಜಿ.ಡಿ. ಹರೀಶ್‌ಗೌಡ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರ ತುಂಬಾ ಪವರ್‌ ಫುಲ್‌ ಕ್ಷೇತ್ರ. ತಾಯಿ ಚಾಮುಂಡೇಶ್ವರಿ ನೆಲೆಸಿದ್ದಾರೆ. ನನ್ನನ್ನು ಕ್ರಿಮಿನಲ್‌ ಎಂದಿರುವುದನ್ನು ನಾನು ಗಮನಿಸಿದ್ದೇನೆ. ನನಗೆ ಸರ್ಟಿಫಿಕೇಟ್‌ ಕೊಡಬೇಕಿರೋದು ಜನ. ಯಾರು ಒಳ್ಳೆಯವರು, ಕೆಟ್ಟವರು ಎಂಬುದನ್ನು ಜನ ತೀರ್ಮಾನ ಮಾಡಬೇಕು. ಪ್ರತಿಯೊಬ್ಬರಿಗೂ ಆತ್ಮಸಾಕ್ಷಿ ಇರುತ್ತೆ. ನಮಗೂ ಆತ್ಮಸಾಕ್ಷಿ ಇದೆ, ನನ್ನನ್ನು ಕ್ರಿಮಿನಲ್‌ ಎಂದವರಿಗೂ ಆತ್ಮಸಾಕ್ಷಿ ಇದೆ. ನಾನು ಏನು ಮಾಡಿದ್ದೇನೆ, ಅವರು ಏನು ಮಾಡಿಸಿಕೊಂಡಿದ್ದಾರೆ ಎಂಬುದು ಇಬ್ಬರ ಆತ್ಮಸಾಕ್ಷಿಗೆ ಗೊತ್ತು ಎಂದು ಹೇಳಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ನಿಖಿಲ್‌ ಕುಮಾರಸ್ವಾಮಿ, ಜಿ.ಡಿ.ಹರೀಶ್‌ಗೌಡ ಇನ್ನೂ 50 ವರ್ಷ ಜನ ಸೇವೆ ಮಾಡಬೇಕು. ಅದಕ್ಕೆ ಜನರ ಆಶೀರ್ವಾದ ಬೇಕು. ನಿಖಿಲ್- ಹರೀಶ್‌ಗೌಡ ಇಬ್ಬರೂ ಲವ- ಕುಶ ಇದ್ದಂತೆ. ರಾಮ- ಲಕ್ಷ್ಮಣ ಇದ್ದಂತೆ. ಹರೀಶ್‌ಗೌಡ ಹುಣಸೂರಲ್ಲಿ ಗೆದ್ದೇ ಗೆಲ್ಲುತ್ತಾರೆ. ನಿಖಿಲ್‌ ರಾಜ್ಯದಲ್ಲೇ ದೊಡ್ಡ ಮಟ್ಟದ ನಾಯಕರಾಗಿ ಬೆಳೆಯುತ್ತಾರೆ ಎಂದರು. ಕಳೆದ ಬಾರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಕುಮಾರ ಪರ್ವ ಮಾಡಿ ರಾಜ್ಯದ ಮುಖ್ಯಮಂತ್ರಿಯಾದರು. ಈಗ ನಿಖಿಲ್‌ ಕುಮಾರಸ್ವಾಮಿ ಚಾಮುಂಡೇಶ್ವರಿಗೆ ಬಂದಿದ್ದಾರೆ. 

Chikkaballapur: ಕ್ಷೇತ್ರದಲ್ಲಿ ಯಾರ ಬಗ್ಗೆಯೂ ನನಗೆ ಹೆದರಿಕೆ ಇಲ್ಲ: ಸಚಿವ ಸುಧಾಕರ್‌

ಮತ್ತೊಂದು ಪಂಚ ರತ್ನ ಪ್ರಾರಂಭ ಆಗುತ್ತೆ. ಕುಮಾರಸ್ವಾಮಿ ಅವರು ಚಾಮುಂಡೇಶ್ವರಿಗೆ ಬರ್ತಾರೆ. ಮೂರನೇ ಬಾರಿಗೂ ಮುಖ್ಯಮಂತ್ರಿ ಮಾಡುತ್ತೀರಿ ಎಂದು ಹೇಳಿದರು. ಹಿಂದೆ ದುಡ್ಡಿನಿಂದ ಚುನಾವಣೆ ಗೆಲ್ಲುತ್ತಿದ್ದರು. ಈಗ ದುಡ್ಡು ಬೇಡ, ಜಿ.ಟಿ.ದೇವೇಗೌಡ ಬೇಕು ಅಂತ ಬಂದಿದ್ದೀರಿ. ದೇವೇಗೌಡರು ಇರುವಾಗಲೇ ಅವರನ್ನು ಸಂತೋಷ ಪಡಿಸಬೇಕು. ಜೆಡಿಎಸ್‌ ಗುರುತಿಗೆ ನೀವು ಹಾಕುವ ವೋಟು ದೇವೇಗೌಡರಿಗೆ ಹಾಕುವ ವಜ್ರದ ಹಾರ ಎಂದರು.

click me!