ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ಯಾರನ್ನು ನಿರ್ಧಾರ ಮಾಡ್ತಾರೋ ಅವರು ಅಧ್ಯಕ್ಷರಾಗ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.
ವಿಜಯಪುರ (ಏ.06): ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಹೈಕಮಾಂಡ್ ಯಾರನ್ನು ನಿರ್ಧಾರ ಮಾಡ್ತಾರೋ ಅವರು ಅಧ್ಯಕ್ಷರಾಗ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು. ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದ ಕುರಿತಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ ಜಾರಕಿಹೊಳಿ, ಈಶ್ವರ ಖಂಡ್ರೆ ಇರಬಹುದು, ಹೈಕಮಾಂಡ್ ಪರಿಗಣಿಸಿ, ಅಳೆದು ತೂಗಿ ನೋಡ್ತಾರೆ ಎಂದು ಹೇಳಿದರು. ಬಿಜೆಪಿ ಕಾರ್ಯಕರ್ತ ವಿನಯ ಆತ್ಮಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿ, ವಿನಯ ನನಗೆ ಪರಿಚಯ ಇಲ್ಲವೆಂದು ಶಾಸಕ ಪೊನ್ನಣ್ಣ ಹೇಳಿದ್ದಾರೆ.
ಬಿಜೆಪಿಯವರು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ, ಹಿಂದೆ ಕೆ.ಜೆ. ಜಾರ್ಜ್ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಯಲ್ಲೂ ಹೀಗೆಯೇ ಮಾಡಿದ್ದರು ಎಂದು ಹೇಳಿದರು. ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ, ಪಾರ್ಲಿಮೆಂಟ್‌ನಲ್ಲಿ ಅಮಿತ್ ಶಾ ಅವರು, ವಿಜಯಪುರ ಜಿಲ್ಲೆಯ ಹೊನವಾಡ ಹೆಸರು ಪ್ರಸ್ತಾಪಕ್ಕೆ ಗರಂ ಆದ ಎಂ.ಬಿ. ಪಾಟೀಲ, ಮಹಲ್ ಬಾಗಾಯತ್ ಇರೋದು ಹೊನವಾಡ ಎಂದು ತಪ್ಪಾಗಿ ನಮೂದಾಗಿದೆ. ಇದನ್ನ ಅಮಿತ್ ಶಾ ತಪ್ಪಾಗಿ ಹೇಳಿದ್ದಾರೆ. ಹೊನವಾಡದಲ್ಲಿ 5 ಸ್ಟಾರ್ ಹೊಟೇಲ್ ಮಾಡಲಿಕ್ಕೆ ಆಗತ್ತಾ?. ಇದನ್ನ ನಾನು ಸ್ಪಷ್ಟಪಡಿಸಿದ್ದೇನೆ.
ಜಿಲ್ಲೆಯಲ್ಲಿ 12 ಸಾವಿರ ಎಕರೆ ವಕ್ಫ್ ಇಂಧೀಕರಣ ಆಗಿದೆ. ಲ್ಯಾಂಡ್ ಗ್ರ್ಯಾಂಡ್ ಮೇಲೆ ಹಂಚಿದ್ದೇವೆ. ನಾನು ಬೆಂಗಳೂರಲ್ಲಿ, ವಿಜಯಪುರದಲ್ಲಿಯೂ ಹೇಳಿದ್ದೀನಿ. ಇಷ್ಟೊಂದು ತಪ್ಪು ಮಾಹಿತಿ ಕೊಡ್ತಾರೆ, ತೇಜಸ್ವಿ ಸೂರ್ಯ ಹಾಗೂ ಅಮಿತ್ ಶಾ ತಪ್ಪು ಮಾಹಿತಿ ಕೊಡ್ತಿದ್ದಾರೆ ಎಂದು ಅಸಮಧಾನ ಹೊರಹಾಕಿದ ಅವರು, ಕಾನೂನು ಹೋರಾಟ ಅಂತಿಮ, ಸುಪ್ರೀಂ ಕೋರ್ಟ್ ನ್ಯಾಯಯುತ ತೀಪುಘ ನೀಡಲಿದೆ ಎಂದರು. ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ ಅವರು ಆದಷ್ಟು ಬೇಗ ಹೊಸ ಪಕ್ಷ ಕಟ್ಟಲಿ. 224 ಸ್ಥಾನಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸಲಿ. ಒಳ್ಳೆಯದಾಗಲಿ ಎಂದು ಹೇಳಿದರು.
ಕೂಡಲ ಸಂಗಮದಲ್ಲಿ ಬಸವ ಜಯಂತಿ ವಿಶೇಷ ಆಚರಣೆಗೆ ನಿರ್ಧಾರ: ಕಾರ್ಯಕ್ರಮಕ್ಕೆ ಸಿಎಂ ಚಾಲನೆ!
ತನಿಖೆಯಾಗಲಿ: ಸಚಿವ ಕೆ.ಎನ್.ರಾಜಣ್ಣ ವಿಷಯದಲ್ಲಿ ಏನಾಗಿದೆ ಗೊತ್ತಿಲ್ಲ. ಅವರು ಸಿಎಂ ಹಾಗೂ ಗೃಹಸಚಿವರಿಗೆ ಏನಾಗಿದೆ ಅನ್ನೋದನ್ನ ತಿಳಿಸಿದ್ದಾರೆ. ಈ ರೀತಿ ರಾಜಕೀಯವಾಗಿ ಯಾರೇ ಮಾಡಲಿ ಅದು ತಪ್ಪು ಎಂದು ಸಚಿವ ಎಂ.ಬಿ. ಪಾಟೀಲ ಹೇಳದರು. ಸಚಿವರಿಗೆ ಹನಿ ಟ್ರ್ಯಾಪ್ ವಿಚಾರದ ಕುರಿತು ನಗರದಲ್ಲಿ ಮಾತನಾಡಿದ ಅವರು, ಯಾರನ್ನೋ ತೇಜೋವಧೆ ಮಾಡುವುದು ತಪ್ಪು, ಇದು ಹೀನ ಕೆಲಸ. ಹೀಗಾಗಿ ಇದನ್ನು ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ತನಿಖೆ ಆಗಬೇಕು. ಸಿಎಂ ಹಾಗೂ ಗೃಹಸಚಿವರು ಈ ಬಗ್ಗೆ ಗಮನ ಹರಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.