ಶಾಲಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆ ನಿಷೇಧಿಸಿದ್ದೇ ಬಿಜೆಪಿ ಸರ್ಕಾರ: ಕಮಲ ಪಡೆಗೆ ತಿರುಗುಬಾಣವಾಯ್ತಾ ಹೋರಾಟ?

By Govindaraj S  |  First Published Jul 24, 2024, 10:32 AM IST

ಶಾಲಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆ ನಿಷೇಧಿಸಿ ದ.ಕ ಜಿಲ್ಲಾ ಶಿಕ್ಷಣಾಧಿಕಾರಿ ಹೊರಡಿಸಿದ್ದ ಸುತ್ತೋಲೆಯಿಂದ ಗಣೇಶೋತ್ಸವ, ಕೃಷ್ಣಾಷ್ಟಮಿಗೆ ಆತಂಕ ಎದುರಾಗಿದೆ ಎಂದು ಹೋರಾಟಕ್ಕಿಳಿದ ಬಿಜೆಪಿಗೆ ಇದೀಗ ಹೋರಾಟ ತಿರುಗುಬಾಣವಾಗೋ ಸಾಧ್ಯತೆಯಿದೆ. 
 


ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು

ಮಂಗಳೂರು (ಜು.24): ಶಾಲಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆ ನಿಷೇಧಿಸಿ ದ.ಕ ಜಿಲ್ಲಾ ಶಿಕ್ಷಣಾಧಿಕಾರಿ ಹೊರಡಿಸಿದ್ದ ಸುತ್ತೋಲೆಯಿಂದ ಗಣೇಶೋತ್ಸವ, ಕೃಷ್ಣಾಷ್ಟಮಿಗೆ ಆತಂಕ ಎದುರಾಗಿದೆ ಎಂದು ಹೋರಾಟಕ್ಕಿಳಿದ ಬಿಜೆಪಿಗೆ ಇದೀಗ ಹೋರಾಟ ತಿರುಗುಬಾಣವಾಗೋ ಸಾಧ್ಯತೆಯಿದೆ. ಅಸಲಿಗೆ ಶಾಲಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆಗಳನ್ನು ನಿಷೇಧಿಸಿದ್ದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಬ ಮಾಹಿತಿ ಬಹಿರಂಗವಾಗಿದೆ.

Tap to resize

Latest Videos

ಇದೀಗ ಇದರ ವಿರುದ್ದ ಹೋರಾಟಕ್ಕಿಳಿದ ಬಿಜೆಪಿಗೆ 2013ರ ಬಿಜೆಪಿ ಸರ್ಕಾರದ ಅದೇಶ  ಬಿಸಿ ತುಪ್ಪವಾಗಿದೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗಲೇ ಶಾಲಾ ಮೈದಾನಗಳಲ್ಲಿ ಶಿಕ್ಷಣೇತರ ಚಟುವಟಿಕೆಗೆ ನಿರ್ಬಂಧ ಹೇರಲಾಗಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದಲೇ ನಿರ್ಬಂಧ ಆದೇಶ ಹೊರಡಿಸಲಾಗಿತ್ತು. 2013ರ ಫೆ.7ರಂದು ಆಗಿನ ಅಯುಕ್ತ ಉಮಾಶಂಕರ್ ಆದೇಶ ಹೊರಡಿಸಿದ್ದರು. ಬೆಂಗಳೂರಿನ ಚಾಮರಾಜಪೇಟೆ ಕೋಟೆ ಸರ್ಕಾರಿ ಪ್ರೌಢಶಾಲೆ ವಿಚಾರದಲ್ಲಿ ಖಾಸಗಿಯವರು ಚಾಮರಾಜಪೇಟೆ ಸರ್ಕಾರಿ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದ್ದಕ್ಕೆ ಸರ್ಕಾರಿ ಆದೇಶ ಹೊರಡಿಸಲಾಗಿತ್ತು. ಹೀಗಾಗಿ ಇದೇ ಅದೇಶದ ಉಲ್ಲೇಖದಡಿ ಈ ಬಾರಿ ಮತ್ತೆ ದ.ಕ ಜಿಲ್ಲಾ ಡಿಡಿಪಿಐ ಅದೇಶ ಮಾಡಿದ್ದಾರೆ ಎನ್ನಲಾಗಿದೆ. 

ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್‌ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ

ಇದೀಗ ಬಿಜೆಪಿ ಅವಧಿಯ ಆದೇಶವೇ ಬಿಜೆಪಿಗೆ ರಿವರ್ಸ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಅವಧಿಯ ಆದೇಶನ್ನು ವೈರಲ್ ಮಾಡಿದ್ದಾರೆ. ಇನ್ನು ಇದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಗೆ ತಿರುಗುಬಾಣವಾಗಿದೆ. ಸಿಎಂ ಸಿದ್ಧರಾಮಯ್ಯ ಸರ್ಕಾರದ ಹಿಂದೂ ವಿರೋಧಿ ನೀತಿ ಎಂದು ಹೇಳಿದ್ದ ಶಾಸಕ ಪೂಂಜಾ ಹೇಳಿಕೆಯಂತೆ ಇಡೀ ಜಿಲ್ಲೆಯಲ್ಲಿ  ಬಿಜೆಪಿ ಯುವ ಮೋರ್ಚಾ ಹೋರಾಟ ಮಾಡಿತ್ತು. ಇದೀಗ ಬಿಜೆಪಿ ಸರ್ಕಾರದ್ದೇ ಆದೇಶ ಎಂಬ ಮಾಹಿತಿ ಬಹಿರಂಗವಾಗಿದೆ. ಸರ್ಕಾರದ ಆದೇಶವಿದ್ದರೂ 2013ರಿಂದಲೂ ಶಾಲಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನಡೆದುಕೊಂಡು ಬಂದಿದೆ. ಆದರೆ ಪೂಂಜಾ ಎಬ್ಬಿಸಿದ ವಿವಾದದಿಂದ ಇದೀಗ ಅಡಕತ್ತರಿಯಲ್ಲಿ ಸಿಲುಕಿದ ಸಂಘಟಕರಿಗೆ ಸಂಕಷ್ಟ ಎದುರಾಗಿದೆ.

ದ.ಕ ಡಿಡಿಪಿಐ ದಿಢೀರ್ ಸುತ್ತೋಲೆ ಹೊರಡಿಸಿದ್ದೇಕೆ?: ಇನ್ನು 2013 ರ ಸರ್ಕಾರಿ ಆದೇಶ ಉಲ್ಲೇಖಿಸಿ ದ.ಕ ಡಿಡಿಪಿಐ ದಿಢೀರ್ ಆದೇಶ ಹೊರಡಿಸಿದ್ದು ಯಾಕೆ ಎಂಬ ಬಗ್ಗೆಯೂ ಭಾರೀ ಚರ್ಚೆ ಎದ್ದಿದೆ. ಅಸಲಿಗೆ ಈ ದಿಢೀರ್ ಆದೇಶಕ್ಕೆ ದ.ಕ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ಆರ್ ಎಸ್ ಎಸ್ ಗುರುಪೂಜೆ ಕಾರಣ ಎನ್ನಲಾಗ್ತಿದೆ. ದ.ಕ ಜಿಲ್ಲೆಯ ಸರ್ಕಾರಿ‌ ಶಾಲೆಯ ತರಗತಿಯಲ್ಲೇ ವಾರದ ಹಿಂದೆ ಆರ್‌ಎಸ್‌ಎಸ್ ಕಾರ್ಯಕ್ರಮ ನಡೆಸಲಾಗಿತ್ತು. ಜುಲೈ 14 ರಂದು ಕಡಬ ತಾಲೂಕಿನ ಕರಿಂಬಿಲ ಕಿ.ಪ್ರಾ. ಶಾಲೆಯ ತರಗತಿ ಕೊಠಡಿಯಲ್ಲೇ ಆರ್.ಎಸ್.ಎಸ್ ಗುರುಪೂಜೆ ನಡೆದಿತ್ತು. ಈ ಬಗ್ಗೆ ಫೋಟೋ ವೈರಲ್ ಆದ ಬೆನ್ನಲ್ಲೇ ಜುಲೈ 16ರಂದು ದ.ಕ ಡಿಡಿಪಿಐ ವೆಂಕಟೇಶ ಸುಬ್ರಾಯ ಪಟಗಾರ ಆದೇಶ ಮಾಡಿದ್ದರು. 

Union Budget 2024: ನಿರ್ಮಲಾ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ

ಜು. 14 ರಂದು ಸಂಜೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಗುರುಪೂಜೆ ಆಯೋಜಿಸಲಾಗಿತ್ತು. ತರಗತಿ ಕೊಠಡಿಯ ಗುರುಪೂಜೆ ಫೋಟೋ ವೈರಲ್ ಆಗಿತ್ತು. ಗುರುಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾದವರಲ್ಲಿ ಕೆಲವರು ತಮ್ಮ ಸ್ಟೇಟಸ್‌ನಲ್ಲಿ ಹಾಕಿಕೊಂಡದ್ದರು.‌ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಕರಿಂಬಿಲ ಎಂಬ ಹೆಸರಿರುವ ಕರಿಹಲಗೆ ಇರುವ ಕೊಠಡಿಯೊಳಗಿನ ದೃಶ್ಯಗಳು ವೈರಲ್ ಆಗಿತ್ತು.  ಶಿಕ್ಷಣಾಧಿಕಾರಿ, ಮುಖ್ಯ ಶಿಕ್ಷಕಿ, ಎಸ್‌ಡಿಎಂಸಿ ಅಧ್ಯಕ್ಷರ ಮೇಲೆ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಇದಾದ ಬೆನ್ನಲ್ಲೇ ಸುತ್ತೋಲೆ ಹೊರಡಿಸಿದ್ದ ದ‌.ಕ‌ ಡಿಡಿಪಿಐ ಪ್ರಕರಣಕ್ಕೆ ಇತೀಶ್ರೀ ಹಾಡಿದ್ದರು.

click me!