Non-Congress Front : ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, KCR ಭೇಟಿ, ಮಾತುಕತೆ!

Suvarna News   | Asianet News
Published : Feb 20, 2022, 04:05 PM IST
Non-Congress Front : ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ, KCR ಭೇಟಿ, ಮಾತುಕತೆ!

ಸಾರಾಂಶ

2024ರ ಚುನಾವಣೆಗೆ ಕಾಂಗ್ರೆಸ್ಸೇತರ ರಂಗದ ತಯಾರಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸದಲ್ಲಿ ಕೆಸಿಆರ್ ಭೋಜನ ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರೊಂದಿಗೂ ಮಾತುಕತೆ

ಮುಂಬೈ (ಫೆ. 20): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಿರುದ್ಧವಾಗಿ ಸಾಕಷ್ಟು ಮಾತಿನ ದಾಳಿ ನಡೆಸಿದ ಬಳಿಕ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ (Telangana Chief Minister K Chandrashekar Rao), 2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ಸೇತರ ರಂಗವನ್ನು ರಚನೆ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಹಾಗೂ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ (Maharashtra counterpart and Shiv Sena chief Uddhav Thackeray) ಅವರ ಆಹ್ವಾನದ ಮೇರೆಗೆ ಭಾನುವಾರ ಪುತ್ರಿ ಹಾಗೂ ಎಂಎಲ್ ಸಿ ಕೆ.ಕವಿತಾ ಮತ್ತು ಪಕ್ಷದ ಕೆಲವು ಸಂಸದರೊಂದಿಗೆ ಮುಂಬೈಗೆ ಆಗಮಿಸಿದ್ದ ಕೆಸಿಆರ್, ಸುದೀರ್ಘ ಮಾತುಕತೆ ನಡೆಸಿದರು. ಉದ್ಧವ್ ಠಾಕ್ರೆ ಜೊತೆಯಲ್ಲಿ ಭೋಜನವನ್ನೂ ಮಾಡಿದರು. ಎನ್ ಸಿಪಿ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಶರದ್ ಪವಾರ್ (Sharad Pawar) ಅವರನ್ನೂ ಕೆಸಿಆರ್ (KCR) ಭೇಟಿ ಮಾಡಲಿದ್ದಾರೆ.

2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ಸೇತರ ರಂಗವನ್ನು ರೂಪಿಸುವ ಭಾಗವಾಗಿ ಕೆಸಿಆರ್ ಈ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಸಂಬಂಧ ತೆಲಂಗಾಣ ಮುಖ್ಯಮಂತ್ರಿ ಪ್ರಾದೇಶಿಕ ಪಕ್ಷಗಳ ಮುಖಂಡರನ್ನು ಭೇಟಿಯಾಗಿದ್ದಾರೆ. ಉದ್ಧವ್ ಠಾಕ್ರೆ ಹಾಗೂ ಕೆಸಿಆರ್ ಪಾರ್ಕ್ ನಲ್ಲಿ ಕುಳಿತಿರುವ ದೃಶ್ಯಗಳೂ ಕೂಡ ಬಿಡುಗಡೆಯಾಗಿದೆ. ಉದ್ಧವ್ ಠಾಕ್ರೆ ಅವರ ಕಿರಿಯ ಪುತ್ರ ತೇಜಸ್ ಠಾಕ್ರೆ ಕೂಡ ಈ ಚಿತ್ರದಲ್ಲಿದ್ದಾರೆ. ಇನ್ನು ವಿಡಿಯೋ ದೃಶ್ಯಾವಳಿಯೊಂದರಲ್ಲಿ ಉದ್ಧವ್ ಠಾಕ್ರೆ, ಕೆಸಿಆರ್ ಹಾಗೂ ಅವರೊಂದಿಗೆ ಬಂದ ಟಿಆರ್ ಎಸ್ ನಾಯಕರನ್ನು ಸ್ವಾಗತ ಮಾಡುತ್ತಿರುವುದನ್ನು ತೋರಿಸಲಾಗಿದೆ. ಶಿವಸೇನಾ ವಕ್ತಾರ ಸಂಜಯ್ ರಾವತ್ ಅವರು ಕೂಡ ಈ ವಿಡಿಯೋದಲ್ಲಿದ್ದಾರೆ. ಬಿಜೆಪಿ ವಿರೋಧಿ ನಿಲುವಿಗೆ ಹೆಸರಾದ ನಟ-ರಾಜಕಾರಣಿ ಪ್ರಕಾಶ್ ರಾಜ್ (Prakash Raj) ಕೂಡ ಸಭೆಯಲ್ಲಿ ಕಾಣಿಸಿಕೊಂಡರು.

ಕೆಸಿಆರ್ ಅವರನ್ನು ಉದ್ಧವ್ ಠಾಕ್ರೆ ತಮ್ಮ ಸ್ವಗೃಹದಲ್ಲಿ ಭೋಜನಕ್ಕೆ ಆಹ್ವಾನಿಸಿದ್ದರು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿಯ ಕಚೇರಿ ತಿಳಿಸಿದೆ. ಆ ಬಳಿಕ ಅವರು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಲಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಅವರನ್ನು ಸ್ವಾಗತಿಸುವ ಪೋಸ್ಟರ್ ಗಳನ್ನು ಮುಂಬೈನ ವಿವಿಧ ಸ್ಥಳಗಳಲ್ಲಿ ಹಾಕಲಾಗಿದೆ. ಈ ಪೋಸ್ಟರ್ ಗಳಲ್ಲಿ ಕೆಸಿಆರ್, ಉದ್ಧವ್ ಠಾಕ್ರೆ, ಶರದ್ ಪವಾರ್ ಹಾಗೂ ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಚಿತ್ರಗಳಿವೆ. ಕಳೆದ ವಾರ ಉದ್ಧವ್ ಠಾಕ್ರೆ ಅವರು ಕೆಸಿಆರ್ ಅವರಿಗೆ ಕರೆ ಮಾಡಿದ್ದು ಮಾತ್ರವಲ್ಲದೆ ಮುಂಬೈಗೆ ಆಹ್ವಾನಿಸಿದ್ದರು. ಬಿಜೆಪಿಯ "ಜನವಿರೋಧಿ ನೀತಿಗಳ" ವಿರುದ್ಧದ ಅವರ "ಹೋರಾಟ"ಕ್ಕೆ "ಸಂಪೂರ್ಣ ಬೆಂಬಲ" ವನ್ನು ಠಾಕ್ರೆ ಘೋಷಿಸಿದ್ದರು ಎಂದು ಕೆಸಿಆರ್ ಅವರ ಕಚೇರಿ ತಿಳಿಸಿದೆ. ರಾವ್ ಅವರು "ದೇಶವನ್ನು ವಿಭಜಕ ಶಕ್ತಿಗಳಿಂದ ರಕ್ಷಿಸಲು ಸರಿಯಾದ ಸಮಯದಲ್ಲಿ ಧ್ವನಿ ಎತ್ತಿದ್ದಾರೆ" ಎಂದು ಎಂದು ಠಾಕ್ರೆ ಹೇಳಿದ್ದಾಗಿ ತೆಲಂಗಾಣ ಮುಖ್ಯಮಂತ್ರಿ ಕಚೇರಿ ತಿಳಿಸಿದೆ.
 


ಕೆಸಿಆರ್ ಅವರ ಮುಂಬೈ ಭೇಟಿಯಲ್ಲಿ ಅವರ ಪುತ್ರಿ ಮತ್ತು ವಿಧಾನ ಪರಿಷತ್ ಸದಸ್ಯೆ ಕೆ ಕವಿತಾ ಮತ್ತು ಪಕ್ಷದ ಸಂಸದರಾದ ಜೆ ಸಂತೋಷ್ ಕುಮಾರ್, ರಂಜಿತ್ ರೆಡ್ಡಿ ಮತ್ತು ಬಿ ಬಿ ಪಾಟೀಲ್ ಜೊತೆಯಲ್ಲಿದ್ದರು. ಠಾಕ್ರೆ ಮತ್ತು ಕೆಸಿಆರ್ ನಡುವಿನ ಸಭೆಯು ಬಿಜೆಪಿ ವಿರುದ್ಧ ರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ ಏಕತೆಯ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ಬರೆದಿದೆ.

Uddhav Thackeray calls KCR: 2024ರ ಲೋಕಸಭೆ ಚುನಾವಣೆಗೆ ರೂಪ ಪಡೆದುಕೊಳ್ಳುತ್ತಿದೆ ತೃತೀಯ ರಂಗ!
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗುತ್ತಿದೆ ಎಂದು ಕೆಸಿಆರ್ ನಿರಂತರವಾಗಿ ಆರೋಪಿಸಿದ್ದಾರೆ. ಇಂದಿನ ಸಭೆಗಳ ಪ್ರಮುಖ ಗಮನವು ರಾಜ್ಯಗಳ ಹಿತಾಸಕ್ತಿಗಳನ್ನು ರಕ್ಷಿಸಲು ಒಟ್ಟಾಗಿ ಕೆಲಸ ಮಾಡಲು ಕಾರ್ಯತಂತ್ರಗಳನ್ನು ಸಿದ್ಧಪಡಿಸುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯಗಳ ನ್ಯಾಯವ್ಯಾಪ್ತಿ ಮತ್ತು ಅಧಿಕಾರವನ್ನು ಕಾಪಾಡಲು ಹೊಸ ಸಂವಿಧಾನದ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಹೇಳಿದ್ದಾರೆ.

Surgical Strikes Proof Row : ತೆಲಂಗಾಣ ಮುಖ್ಯಮಂತ್ರಿಯ ವಿರುದ್ಧ ಕೇಸ್ ದಾಖಲಿಸಿದೆ ಅಸ್ಸಾಂ ಪೊಲೀಸ್!
ಇಂದಿನ ಸಭೆಯ ನಂತರ,  ಕೆಸಿಆರ್ ಅವರು ಬೆಂಗಳೂರಿನಲ್ಲಿ ಜನತಾ ದಳ (ಜಾತ್ಯತೀತ) ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರನ್ನು ಭೇಟಿ ಮಾಡುವ ಯೋಜನೆಯನ್ನೂ ಹೊಂದಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಾದೇಶಿಕ ಪಕ್ಷಗಳ ನಾಯಕರ ಸಭೆಯನ್ನು ಆಯೋಜಿಸಲು ಉತ್ಸುಕರಾಗಿರುವ ಕೆಸಿಆರ್ ಅವರನ್ನು ಭೇಟಿ ಮಾಡಲು ಶೀಘ್ರದಲ್ಲೇ ಹೈದರಾಬಾದ್‌ಗೆ ಬರುವುದಾಗಿ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ