ಕಾಂಗ್ರೆಸ್‌ ನಿರುದ್ಯೋಗ ಭತ್ಯೆ ಗ್ಯಾರಂಟಿ ವಿರುದ್ಧ ತೇಜಸ್ವಿಸೂರ್ಯ ಕಿಡಿ: ಇದೊಂದು ವಿಪರ್ಯಾಸ

Published : Mar 20, 2023, 06:53 PM ISTUpdated : Mar 20, 2023, 06:57 PM IST
ಕಾಂಗ್ರೆಸ್‌ ನಿರುದ್ಯೋಗ ಭತ್ಯೆ ಗ್ಯಾರಂಟಿ ವಿರುದ್ಧ ತೇಜಸ್ವಿಸೂರ್ಯ ಕಿಡಿ: ಇದೊಂದು ವಿಪರ್ಯಾಸ

ಸಾರಾಂಶ

ಬಿಜೆಪಿ ಹಲವು ಯೋಜನೆಗಳ ಮೂಲಕ ಸ್ವಾವಲಂಬಿ ಯುವಜನತೆಯ ನಿರ್ಮಾಣಕ್ಕೆ ಪ್ರಯತ್ನ ಪಡುತ್ತಿದೆ. ಆದರೆ, ರಾಹುಲ್ ಗಾಂಧಿ ನಿರುದ್ಯೋಗಿ ಯುವಕರಿಗೆ 3 ಸಾವಿರ ಭತ್ಯೆ ಘೋಷಿಸುವ ಮೂಲಕ ದ್ರೋಹ ಮಾಡುತ್ತಿದ್ದಾರೆ.

ಬೆಂಗಳೂರು (ಮಾ.20): ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ಟಾರ್ಟ್ ಅಪ್, ಡಿಜಿಟಲ್ ಇಂಡಿಯಾ, ಮುದ್ರಾ ಮತ್ತು ಇನ್ನಿತರ ಯೋಜನೆಗಳಿಂದ ಸ್ವಾವಲಂಬಿ ಯುವಜನತೆಯ ನಿರ್ಮಾಣಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಆದರೆ, ರಾಹುಲ್ ಗಾಂಧಿ ನಿರುದ್ಯೋಗಿ ಯುವಕರಿಗೆ ರೂ. 3ಸಾವಿರ ಭತ್ಯೆ ಘೋಷಿಸುವ ಮೂಲಕ ದ್ರೋಹ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇ ದಿನಗಣನೆ ಆರಂಭವಾಗಿದೆ. ಬಿಜೆಪಿ ಆಡಳಿತ ಪಕ್ಷವಾಗಿದ್ದು, ಸರ್ಕಾರದ ಯೋಜನೆಗಳನ್ನು ಜನರ ಮುಂದಿಟ್ಟು ಚುನಾವಣಾ ಪ್ರಚಾರ ಕಾರ್ಯಗಳನ್ನು ಮಾಡುತ್ತಿದೆ. ಆದರೆ, ಕಾಂಗ್ರೆಸ್‌ ಎಲ್ಲ ವರ್ಗದ ಜನರನ್ನು ಸೆಳೆಯುವ ಹಿನ್ನೆಲೆಯಲ್ಲಿ ಹಲವು ಘೋಷಣೆಗಳನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡುತ್ತಿದೆ. ಅವುಗಳಲ್ಲಿ ಈಗ ಒಟ್ಟು ನಾಲ್ಕು ಘೋಷಣೆಗಳನ್ನು ಮಾಡಿದೆ. ಇಂದು ರಾಹುಲ್‌ ಗಾಂಧಿ ಅವರು 4ನೇ ಕಾಂಗ್ರೆಸ್‌ ಗ್ಯಾರಂಟಿಯಾಗಿ ನಿರುದ್ಯೋಗಿ ಯುವಜನರಿಗೆ 3 ಸಾವಿರ ರೂ. ಮಾಸಿಕ ಭತ್ಯೆಯನ್ನು ಘೋಷಣೆ ಮಾಡಿದ್ದಾರೆ. ಇದರ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಗ್ಯಾರಂಟಿ- 4 'ಯುವನಿಧಿ' ಘೋಷಣೆ: ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ. ಭತ್ಯೆ

ನಿರುದ್ಯೋಗ ಭತ್ಯೆ ಘೋಷಣೆ ವಿಪರ್ಯಾಸ: ಕಾಂಗ್ರೆಸ್‌ 4ನೇ ಗ್ಯಾರಂಟಿ ಯೋಜನೆ ಕುರಿತು ಟ್ವಿಟರ್​ನಲ್ಲಿ ಟೀಕಿಸಿದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ 'ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರು, ಸ್ಟಾರ್ಟ್ ಅಪ್, ಡಿಜಿಟಲ್ ಇಂಡಿಯಾ, ಮುದ್ರಾ ಮತ್ತು ಇನ್ನಿತರ ಯೋಜನೆಗಳಿಂದ ಸ್ವಾವಲಂಬಿ ಯುವಜನತೆಯ ನಿರ್ಮಾಣಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ಅವರು ರೂ. 3ಸಾವಿರ ಭತ್ಯೆ ಕೊಡುವ ಮಹಾನ್ ಯೋಜನೆಯನ್ನು ಕರ್ನಾಟಕದ ಜನತೆಗೆ ಘೋಷಿಸುತ್ತಿರುವುದು ವಿಪರ್ಯಾಸ' ಎಂದು ಹೇಳಿದ್ದಾರೆ.

ನಿರುದ್ಯೋಗಿ ಕಾಂಗ್ರೆಸ್‌ನಿಂದ ದ್ರೋಹ: ಮುಂದುವರೆದು, 'ಇಂದಿನ ಆಶಾದಾಯಿ ಯುವ ಪೀಳಿಗೆಯಿಂದ ಕಾಂಗ್ರೆಸ್ ಪಕ್ಷ ಎಷ್ಟು ದೂರ ಸರಿದಿದೆ ಎಂಬುದಕ್ಕೆ ಇದು ನಿದರ್ಶನ. ದೇಶದ ಆಶಾದಾಯಕ, ಭರವಸೆಯ ಯುವಜನತೆಗೆ ನಿರುದ್ಯೋಗಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ದ್ರೋಹ ಅಕ್ಷಮ್ಯ' ಎಂದು ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ, ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ನೋಡಿದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಿರುದ್ಯೋಗ ಪ್ರಮಾಣ ತೀವ್ರ ಕಡಿಮೆಯಾಗಿದೆ. ಆದರೆ, ಯುವಕರನ್ನು ಮತ್ತಷ್ಟು ನಿರುದ್ಯೋಗಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಭತ್ಯೆ ಘೋಷಣೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಆದಾಯಕ್ಕಿಂತ ಶೇ.216ರಷ್ಟು ಅಧಿಕ ಆಸ್ತಿ ಪತ್ತೆ: ರಾಮನಗರ ಉಪವಿಭಾಗಾಧಿಕಾರಿ ವಜಾಗೊಳಿಸಿದ ಸರ್ಕಾರ

ಸ್ವಂತ ದುಡಿಮೆ ಕಲ್ಪಿಸುವುದು ನಮ್ಮ ಸರ್ಕಾರದ ಆದ್ಯತೆ: ಇನ್ನು ಉನ್ನತ ಶಿಕ್ಷಣ, ಐಟಿ,ಬಿಟಿ, ಯುವಜನ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಸಿಎನ್. ಅಶ್ವತ್ಥನಾರಾಯಣ ಅವರು ಉಚಿತ ಭತ್ಯೆಗಳ ಆಮಿಷಕ್ಕೆ ಒಳಗಾಗದೇ, ಸ್ವಂತ ದುಡಿಮೆಯ ಮೂಲಕ ಸ್ವಾವಲಂಬಿ ಜೀವನ ನಡೆಸುವ ಕರುನಾಡಿನ ಯುವಜನತೆಗೆ ದೀನ ದಯಾಳ್‌ ಉಪ್ಯಾಧ್ಯಾಯ ಕರ್ನಾಟಕ ಯೋಜನೆ ಮೂಲಕ ಅಗತ್ಯ ಕೌಶಲ್ಯ ಕಲಿಸಿ, ಅವರ ಕನಸಿನ ಉದ್ಯೋಗಾವಕಾಶ ಕಲ್ಪಿಸುತ್ತಿದೆ ನಮ್ಮ ಸರ್ಕಾರ. ದೇಶದ ಶಕ್ತಿಯಾಗಿರುವ ಯುವಜನರ ಸಬಲೀಕರಣ ನಮ್ಮ ಆದ್ಯತೆ ಎಂದು ಟ್ವೀಟ್‌ ಮಾಡಿರುವುದನ್ನು ರಿಟ್ವೀಟ್‌ ಮಾಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್
ಒಂದೇ ಕಾರಲ್ಲಿ ಪ್ರಯಾಣಿಸಿದ ಖರ್ಗೆ, ಡಿಕೆಶಿ: ತೀವ್ರ ರಾಜಕೀಯ ಕುತೂಹಲ